Advertisement
ಕೋವಿಡ್ ಸಂದರ್ಭದಲ್ಲಿ ಅಂಗನವಾಡಿ ನೌಕರರು ಕಷ್ಟಪಟ್ಟು, ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಆದರೆ ಅವರ ಬೇಡಿಕೆಗಳ ಬಗ್ಗೆ ಸರ್ಕಾರವು ಸಕಾರಾತ್ಮಕ ಸ್ಪಂದಿಸಿಲ್ಲ. ಬಜೆಟ್ ಪೂರ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ನೌಕರರಿಗೆ ಸೇವಾ ಜೇಷ್ಠತೆ ಆಧಾರದಲ್ಲಿ 153.25 ಕೋಟಿ, ಮಿನಿ ಅಂಗನವಾಡಿ ಕೇಂದ್ರಗಳ ಸಹಾಯಕಿ ನೇಮಕಾತಿಗೆ 6.99 ಕೋಟಿ, ಅಂಗನವಾಡಿ ಸಹಾಯಕಿಯರಿಗೆ ಸಂಬಳದ ವ್ಯತ್ಯಾಸ ಮೊತ್ತ 131.42 ಕೋಟಿ ನಿವೃತ್ತಿ ಸೌಲಭ್ಯ 47.82 ಕೋಟಿ ಸೇರಿದಂತೆ ಒಟ್ಟು 339.48 ಕೋಟಿ ರೂ. ಅನುದಾನ ನೀಡಲು ಶಿಫಾರಸ್ಸು ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಮೂರು ಶಿಫಾರಸ್ಸನ್ನು ಪರಿಗಣಿಸಿಲ್ಲ. 2016ರಿಂದ 7304 ಮಹಿಳೆಯರು ನಿವೃತ್ತಿಯಾಗಿದ್ದಾರೆ. ಅವರಿಗೆ ಇಡಿಗಂಟು ಕೂಡ ನೀಡಿಲ್ಲ. ಬಜೆಟ್ ಪೂರ್ವದಲ್ಲಿ ಅಂಗನವಾಡಿ ನೌಕರರು ಅ ಧಿವೇಶನ ಚಲೋ ನಡೆಸಿದಾಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆ ಈಡೇರಿಸುವ ಕುರಿತು ಭರವಸೆ ನೀಡಿದ್ದರು. ಆದರೆ ಬಜೆಟ್‌ನಲ್ಲಿ ಮಹಿಳೆಯರಿಗೆ ಆದ್ಯತೆ ಎನ್ನುವ ಮೊದಲ ಪ್ಯಾರಾ ಬಿಟ್ಟರೆ ಮತ್ತ್ಯಾವ ಯೋಜನೆಗಳೂ ಇಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
Related Articles
Advertisement
ಬಳಿಕ ಕನಕಗಿರಿ ತಾಲೂಕು ಅಂಗನವಾಡಿ ನೌಕರರ ಸಂಘ(ಸಿಐಟಿಯು) ಅಧ್ಯಕ್ಷೆ ಅಮರಮ್ಮ ಯರಡೋಣಾ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ಎಂಬ ಮಾಹಾಮಾರಿ ಸಮಯದಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡಿದ್ದಾರೆ. ಸರಿಯಾಗಿ ಭದ್ರತೆ ಇಲ್ಲದೇ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಬಜೆಟ್ ನಲ್ಲಿ ಅಂಗನವಾಡಿ ನೌಕರರಿಗೆ ನೀಡಿದ ಭರವಸೆಗಳನ್ನು ಘೋಷಣೆ ಮಾಡುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ರಾಜ್ಯ ಸರ್ಕಾರ ಅಂಗನವಾಡಿ ನೌಕರರನ್ನು ಕಡೆಗಣಿಸಿದೆ. ಸಂಘಟನೆಯಿಂದ ರಾಜ್ಯಾದ್ಯಂತ ಎಲ್ಲ ತಾಲೂಕು ಕೇಂದ್ರಗಳಲ್ಲಿ ಒಂದು ದಿನದ ಧರಣಿ ಹಮ್ಮಿಕೊಂಡಿದ್ದು, ಕೂಡಲೇ ಸರ್ಕಾರ ಅಂಗನವಾಡಿ ನೌಕರರ ಬೇಡಿಕೆ ಈಡೇರಿಸಬೇಕೆಂದರು.
ಸಂಘ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಸಜ್ಜನ್, ಖಜಾಂಚಿ ಅನುಸೂಯ, ಪದಾ ಧಿಕಾರಿಗಳಾದ ಸಿದ್ಧಲಿಂಗಮ್ಮ ಕಾರಟಗಿ, ಸವಿತಾ ಸಿದ್ದಾಪುರ, ಶರಣಮ್ಮ ಚಳ್ಳೂರು, ಲಲಿತಾ ಸಿದ್ದಾಪುರ, ವಿಜಯಲಕ್ಷ್ಮೀ ಉಳಿRಹಾಳ ಕ್ಯಾಂಪ್, ಗಂಗಮ್ಮ ದುಂಡಗಿ, ಬಿ. ಅನುಸೂಯಾ ನವಲಿ ಸೇರಿದಂತೆ ಇತರರು ಇದ್ದರು.