ಯಳಂದೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕ ರರ ತಾಲೂಕು ಸಮಿತಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ನಾಡಮೇಗಲಮ್ಮ ದೇಗುಲದಿಂದ ಪ್ರತಿಭಟನೆಗೆ ಹೊರಟ ಕಾರ್ಯಕರ್ತರು, ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಜಮಾವಣೆಗೊಂಡರು.ಈ ವೇಳೆ ಸಂಘದ ತಾಲೂಕು ಅಧ್ಯಕ್ಷೆ ಪುಟ್ಟಬಸಮ್ಮ ಮಾತನಾಡಿ, ನೂತನ ಶಿಕ್ಷಣ ನೀತಿಯಲ್ಲಿ 3 ರಿಂದ 6 ವರ್ಷದ ವಯೋಮಾನದ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ಅವಕಾಶವಿದೆ. ಇದರಿಂದ ಅಂಗನವಾಡಿ ಅಸ್ತಿತ್ವಕ್ಕೆ ಬರುತ್ತದೆ. ಇದನ್ನುತಿದ್ದುಪಡಿ ಮಾಡಬೇಕು. ಅಂಗನವಾಡಿಯಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಬೇಕು. ಪ್ರಾರಂಭಿಕ ಬಾಲ್ಯವಸ್ಥೆಯ ಪಾಲನೆ ಮತ್ತು ಶಿಕ್ಷಣ (ಇಸಿಸಿಇ) ಉಚಿತವಾಗಿ ಮತ್ತು ಕಡ್ಡಾಯವಾಗಿ
ಅಂಗನವಾಡಿ ಕೇಂದ್ರಗಳಲ್ಲಿ ಕೊಡಲು ಶಾಲೆ ರೂಪಿಸಬೇಕು. ಐಸಿಡಿಎಸ್ ಗೆ ಪ್ರತ್ಯೇಕ ನಿರ್ದೇಶನಾಲಯ ರಚಿಸಬೇಕು. ಸೇವಾ ಜ್ಯೇಷ್ಠ್ಯತೆ ಆಧಾರದಲ್ಲಿ ವೇತನ ನಿಗದಿ ಮಾಡಬೇಕು. ಕೋವಿಡ್ ದಿಂದ ಮೃತರಾದ ಮತ್ತು ಕೆಲಸದ ಒತ್ತಡದಿಂದ ಮೃತರಾದ ಕುಟುಂಬದ ನೌಕ ರರ ಮಕ್ಕಳಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಬೇಕು. ಕನಿಷ್ಠ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಯಳಂದೂರು ಉಪ ಖಜಾನೆಯ ಖಜಾನಾಧಿಕಾರಿ ವಿತರಣೆ ಮಾಡಿರುವ ಬಿಲ್ ಪಾವತಿ ಮಾಡುವ ವಿಚಾರವಾಗಿ ಕಾರ್ಯಕರ್ತೆಯರು ಪ್ರಶ್ನಿಸಲು ಹೊರಟಾಗ ಅವರು ನಮ್ಮ ಜೊತೆಯಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ. ಈ ಪ್ರಶ್ನೆಗೂ ನಿಮಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ಮೊಟ್ಟೆ ಖರೀದಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರೇ ಮಾಡುತ್ತಿದ್ದು, ಶೀಘ್ರದಲ್ಲೇ ಬಿಲ್ ಪಾವತಿಸಬೇಕು. ಖಜಾನಾಧಿಕಾರಿ ಮತ್ತೆ ಇಂತಹ ವರ್ತನೆಯನ್ನು ತೋರಬಾರದು ಎಂದರು.
ಬಳಿಕ ಉಪತಹಶೀಲ್ದಾರ್ ವೈ.ಎಂ. ನಂಜಯ್ಯ ಹಾಗೂ ಸಿಡಿಪಿಒ ದೀಪಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕಾರ್ಯದರ್ಶಿ ಜಿ. ಭಾಗ್ಯ, ಕೋಶಾಧ್ಯಕ್ಷೆ ಸಿ. ಮೀನಾಕ್ಷಿ, ಎಸ್. ಮಂಜುಳಾ, ಸುಧಾರ, ಪಿ. ನಂಜಮ್ಮಣಿ, ಕೆ. ಮೀನಾಕ್ಷಿ, ಪ್ರೇಮಲತಾ, ಸಮಾ, ರೇಣುಕಾ, ನಿರ್ಮಲಾ ಮುನ್ನಬಳ್ಳಿ, ಎನ್. ಶಾರದಮ್ಮ, ಕೆಪಮ್ಮ ಇತರರಿದ್ದರು.