Advertisement
ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಿವೇಶನದ ಕೊರತೆ ಎದುರಾಗಿದೆ. ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್, ಭೂಮಿಗೆ ಹೆಚ್ಚಿನ ಬೆಲೆಬಂದಿರುವುದರಿಂದ ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಖರೀದಿ ದುಬಾರಿಯಾಗುತ್ತಿದೆ. ಅಲ್ಲದೆ, ಜಿಲ್ಲೆಯಲ್ಲಿ ಸರ್ಕಾರಿ ಜಾಗದ ಲಭ್ಯತೆಕೊರತೆ ಇದ್ದು ಅನಿವಾರ್ಯ ವಾಗಿ ಶಾಲೆ, ಸಮುದಾಯ ಭವನ,ಪಂಚಾಯ್ತಿ ಕಟ್ಟಡ, ಸೇರಿ ವಿವಿಧ ಜಾಗಗಳಲ್ಲಿ ಅಂಗನವಾಡಿ ಕೇಂದ್ರಗಳುಕಾರ್ಯನಿರ್ವಹಿಸುತ್ತಿದೆ. ಅಂಗನ ವಾಡಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಕೆಲ ನಿಯಮಗಳು ಅಡ್ಡಿಯಾಗುತ್ತಿದೆ. ಇಂತಿಷ್ಟು ದೂರದಲ್ಲಿಕಟ್ಟಡವಿರಬೇಕು. ಒಂದೇ ಪ್ರದೇಶದ ಸುತ್ತಳತೆ ಯಲ್ಲಿ ಮತ್ತೂಂದು ಅಂಗನವಾಡಿ ಇರಬಾರದು. ಹೀಗೆ ಹಲವಾರು ನಿಯಮಗಳನ್ನು ಪಾಲಿಸ ಬೇಕಾಗಿರುವುದರಿಂದ ಸರ್ಕಾರಿ ಜಾಗವಿದ್ದರೂ, ಅಂಗನವಾಡಿ ಕಟ್ಟ ಭಾಗ್ಯ ಲಭಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
Related Articles
Advertisement
ದೊಡ್ಡಬಳ್ಳಾಪುರ 43
ಹೊಸಕೋಟೆ 20
ನೆಲಮಂಗಲ 46
ಒಟ್ಟು 120
ಶಾಲೆ ಕಟ್ಟಡದಲ್ಲಿರುವ ಅಂಗನವಾಡಿ ಕಟ್ಟಡಗಳು :
ದೇವನಹಳ್ಳಿ 13
ದೊಡ್ಡಬಳ್ಳಾಪುರ 11
ಹೊಸಕೋಟೆ 21
ನೆಲಮಂಗಲ 13
ಒಟ್ಟು 58
ಸಮುದಾಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳು :
ದೇವನಹಳ್ಳಿ 30
ದೊಡ್ಡಬಳ್ಳಾಪುರ 20
ಹೊಸಕೋಟೆ 5
ನೆಲಮಂಗಲ 9
ಒಟ್ಟು 64
ಗ್ರಾಪಂ ಕಟ್ಟಡದಲ್ಲಿರುವ ಅಂಗನವಾಡಿಗಳು :
ದೇವನಹಳ್ಳಿ 1
ಹೊಸಕೋಟೆ 2
ಒಟ್ಟು 3
ಸ್ವಂತ ಕಟ್ಟಡ ಹೊಂದಿರುವ ಅಂಗನವಾಡಿಗಳು :
ದೇವನಹಳ್ಳಿ 209
ದೊಡ್ಡಬಳ್ಳಾಪುರ 295
ಹೊಸಕೋಟೆ 262
ನೆಲಮಂಗಲ 219
ಒಟ್ಟು ಕಟ್ಟಡ 985
ಜಿಲ್ಲೆಯಲ್ಲಿ 60 ಸ್ವಂತ ನಿವೇಶನ ಹೊಂದಿದೆ. :
ದೇವನಹಳ್ಳಿ 6
ದೊಡ್ಡಬಳ್ಳಾಪುರ 22
ಹೊಸಕೋಟೆ 13
ನೆಲಮಂಗಲ 19
ಒಟ್ಟು ಕೇಂದ್ರ 60
ಮುಂದಿನ ದಿನಗಳಲ್ಲಿ ಎಲ್ಲಾ ಅಂಗನವಾಡಿಗಳು ಸ್ವಂತ ಕಟ್ಟಡದಲ್ಲ ಕಾರ್ಯ ನಿರ್ವಹಿಸಲು ಆದ್ಯತೆ ನೀಡಲಾಗುತ್ತದೆ. ಸಾಧ್ಯವಿರುವ ಕಡೆಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಎಲ್ಲಿ ಸರ್ಕಾರಿ ಜಾಗ ಇರುತ್ತದೆಯೋಅಲ್ಲಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರ್ತಿಸುವ ಕೆಲಸ ನಡೆಯುತ್ತಿದೆ. – ಪುಷ್ಪಲತಾ ರಾಯ್ಕರ್, ಉಪನಿರ್ದೇಶಕಿ, ಜಿಲ್ಲಾ ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆ
ಜಿಲ್ಲೆಯಲ್ಲಿ ಎಲ್ಲೆಲ್ಲಿ ಸರ್ಕಾರಿಜಾಗಗಳಿವೆ. ಅಂಗನವಾಡಿಕಟ್ಟಡನಿರ್ಮಾಣಕ್ಕೆ ಜಾಗಗುರ್ತಿಸಲುಕ್ರಮ ವಹಿಸಲಾಗುವುದು.ಸರ್ಕಾರಿ ಜಾಗದ ಕೊರತೆಕಂಡುಬರುತ್ತಿದೆ. ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಿಅಂಗನವಾಡಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. – ಕೆ.ಶ್ರೀನಿವಾಸ್ ,ಜಿಲ್ಲಾಧಿಕಾರಿ
-ಎಸ್.ಮಹೇಶ್