“ಅಂಗೈಯಲ್ಲಿ ಅಕ್ಷರ’ ಸಿನಿಮಾ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಗೆ ಸಿದ್ಧವಾಗಿದೆ. ಸಿದ್ದರಾಜುಕಾಳೇನಹಳ್ಳಿ ಅವರು ಕಥೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಕೆ.ಹೆಚ್.ಎಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಜ್ಞಾನೇಶ ತಮ್ಮ ಗೆಳೆಯರ ಜೊತೆ ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ.ಕ್ಯಾಬ್ ಚಾಲಕರಾಗಿದ್ದ ಸಿದ್ದರಾಜು ಅವರ ಸಿನಿಮಾ ಕನಸು ಈಗ ನನಸಾಗಿದೆ ಬಾಲ್ಯದಲ್ಲೆ ತಂದೆತಾಯಿ ಕಳೆದುಕೊಂಡ ಮಕ್ಕಳು ವಿದ್ಯಾಭ್ಯಾಸ ಹಾಗೂ ತಮ್ಮ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎನ್ನುವುದೇ ಈ ಚಿತ್ರದಕಥಾವಸ್ತು.
ಹುಲಿಯೂರುದುರ್ಗ, ಮಾಗಡಿ ತಾವರೆಕೆರೆ, ಬೆಂಗಳೂರು ನಗರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಅಮ್ಮನಿಂದ ದೂರವಾದ ಒಂದು ಬಡ ವರ್ಗದ ಹುಡುಗನ ಶೈಕ್ಷಣಿಕ ಹಾದಿ, ಅಮ್ಮ ಮಗನ ನಡುವಿನ ಬಾಂಧವ್ಯ, ಸೆಂಟಿಮೆಂಟ್ ಇರುವ ಹಾಗೂ ಸಮಾಜಕ್ಕೆ ಶಿಕಣದ ಮಹತ್ವದ ಅರಿವು ಮೂಡಿಸುವ ಕುರಿತಾದ ಈ ಚಿತ್ರದಲ್ಲಿ ಪಕ್ಕಾ ಫ್ಯಾಮಿಲಿ, ಸೆಂಟಿಮೆಂಟ್ ಹಾಗೂ ಕಾಮಿಡಿಯಂತಹ ಎಲ್ಲಾ ಮನರಂಜನಾತ್ಮಕ ಅಂಶಗಳು ಇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು.
ಈ ಚಿತ್ರದ 4 ಹಾಡುಗಳಿಗೆ ಎ.ಟಿ. ರವೀಶ್ ಅವರ ಸಂಗೀತ ಸಂಯೋಜನೆಯಿದ್ದು, ನಾಗೇಶ್ ಉಜ್ಜನಿ, ಜ್ಞಾನೇಶ ಎಂ.ಬಿ, ಶೈಲಜಾ ಎಸ್.ರಾವ್ ಸಾಹಿತ್ಯ ರಚಿಸಿದ್ದಾರೆ. ಚಿತ್ರಕ್ಕೆ ಸಂಜೀವ್ ರೆಡ್ಡಿ ಅವರ ಸಂಕಲನವಿದ್ದು, ರಮೇಶ್ ಹಾಗೂ ನರಸಿಂಹ ಅವರ ಛಾಯಾಗ್ರಹಣವಿದೆ.
ಈ ಚಿತ್ರದಲ್ಲಿ ಬಾಲನಟರಾಗಿ ಕನ್ನಡಕೋಗಿಲೆ ಖ್ಯಾತಿಯ ತನುಷರಾಜ್, ಶನಿ ಧಾರಾವಾಹಿಯಲ್ಲಿ ಬಾಲ ಹನುಮನ ಪಾತ್ರದಾರಿ ಕಾನಿಷ್ಕ ರವಿ ದೇಸಾಯಿ, ಉಘೇ ಉಘೇ ಮಾದೇಶ್ವರ ಮರಿದೇವನ ಪಾತ್ರದಾರಿ ಅಮೋಘ ಕೃಷ್ಣ, ಪುಟಾಣಿ ಪಂಟ್ರಾ ಮಧುಸೂಧನ್, ಬೇಬಿ ಅಂಕಿತ ಜಯರಾಮ್, ಬೇಬಿಶ್ರೀ ಹಾಗೂ ಜೀವನ್, ಚೇತನ್, ಮಾಸ್ಟರ್ ನವನೀತ್, ಬಾ ನಾ ರವಿ ಅಭಿನಯಿಸಿದ್ದಾರೆ.