Advertisement

ಆನೇಕಲ್ ಪುರಸಭೆ ಕೈ ವಶ

09:26 AM Jun 01, 2019 | Suhan S |

ಆನೇಕಲ್: ಆನೇಕಲ್ ಪುರಸಭೆಯ 27 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 17 ಹಾಗೂ ಬಿಜೆಪಿ 10ಸ್ಥಾನಗಳನ್ನು ಪಡೆದಿದ್ದು, ಕಾಂಗ್ರೆಸ್‌ ಪಕ್ಷ 25ವರ್ಷಗಳ ನಂತರ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

Advertisement

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಆನೇಕಲ್ ನಾರಾಯಣಸ್ವಾಮಿ ಮತ್ತು ಆನೇಕಲ್ ಶಾಸಕ ಬಿ.ಶಿವಣ್ಣ ಅವರ ಮಧ್ಯೆ ನಡೆದ ಆನೇಕಲ್ ಪುರಸಭೆಯ ಕಾಳಗದಲ್ಲಿ ಕೊನೆಗೂ ಕಾಂಗ್ರೆಸ್‌ 17ಸ್ಥಾನಗಳನ್ನು ಗೆಲ್ಲುವ ಮೂಲಕ ಪುರ ಸಭೆಯ ಗದ್ದುಗೆಯನ್ನು ಸ್ವತಂತ್ರವಾಗಿ ಏರುವಲ್ಲಿ ಯಶಸ್ವಿಯಾಗಿದೆ.

ಯುವಕರಿಗೆ ಬೆಂಬಲ: ಕಾಂಗ್ರೆಸ್‌ನ ಮಾಜಿ ಪುರಸಭಾ ಸದಸ್ಯರು ಮತ್ತು ಪ್ರಭಾವಿಗಳಾದ ಗೋಪಾಲ್, ಶಂಕರ್‌ ಕುಮಾರ್‌, ಮಲ್ಲಿ ಕಾರ್ಜುನ್‌ ಚುನಾವಣೆಯಲ್ಲಿ ಪರಾಭವ ಗೊಂಡರೆ, ಮತದಾರರು ಈ ಬಾರಿ ಯುವಕರಿಗೆ ಮಣೆ ಹಾಕಿದ್ದಾರೆ.

ಹುಸಿಯಾದ ಸಮೀಕ್ಷೆಗಳು: 27ಸ್ಥಾನಗಳ ಪೈಕಿ 22ಸ್ಥಾನಗಳನ್ನು ಗೆದ್ದೆ ಗೆಲ್ಲುತ್ತೇವೆ ಎಂದು ಬಿಜೆಪಿ ಅವರು ಚುನಾ ವಣಾ ಪೂರ್ವ ದಿಂದಲೂ ಹೇಳುತ್ತಿದ್ದರು. ಜೊತೆಗೆ ಕೆಲವು ಖಾಸಗಿ ಸಂಸ್ಥೆಗಳು ಕೂಡ ಬಿಜೆಪಿ ಸ್ಪಷ್ಟ ಬಹು ಮತ ಬರಲಿದೆ ಎಂದು ತಿಳಿಸಿದ್ದವು. ಆದರೆ, ಮತದಾರರು ಕಾಂಗ್ರೆಸ್‌ಗೆ ಬೆಂಬಲ ನೀಡಿ ಎಲ್ಲಾ ಸಮೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ.

ಗೆದ್ದ ಅಭ್ಯರ್ಥಿಗಳು ತಮ್ಮ ತಮ್ಮ ವಾರ್ಡ್‌ ಗಳಲ್ಲಿ ಬೆಂಬಲಿಗರೊಂದಿಗೆ ಪಟಾಕಿ ಸಿಡಿಸಿ, ಸಿಹಿ ಹಂಚಿ, ವಿಜಯೋತ್ಸವ ಆಚರಿಸಿದರು.

Advertisement

ಮಚ್ಚು, ಲಾಂಗ್‌ ಹಿಡಿದು ಧಮ್ಕಿ: ಸೋಲುಂಡ ಕೆಲವು ಅಭ್ಯರ್ಥಿಗಳ ಬೆಂಬಲಿ ಗರು ಮತ ನೀಡದ ಮತದಾರ ಮೇಲೆ ಮಚ್ಚು, ಲಾಂಗ್‌ ಹಿಡಿದು ರಸ್ತೆಯಲ್ಲಿ ಸಿಕ್ಕವ ರಿಗೆ ಧಮ್ಕಿ ಹಾಕುತ್ತ ಆತಂಕದ ವಾತಾವರಣ ನಿರ್ಮಾಣ ಮಾಡಿದ್ದರು. ಸುದ್ದಿ ತಿಳಿದ ಆನೇಕಲ್ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜೇತರು ಪಡೆದ ಮತಗಳ ವಿವರ:ವಾರ್ಡ್‌ನಂಬರ್‌ 1-ಆರ್‌.ಭಾರತಿ -ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತ-644, ಪ್ರತಿಸ್ಪರ್ಧಿ ರೂಪಾ ರವಿರೆಡ್ಡಿ 426.

ವಾರ್ಡ್‌ ನಂಬರ್‌ 2- ಮಹಾಂತೇಶ್‌ -ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 651, ಸಮೀಪದ ಪ್ರತಿಸ್ಪರ್ಧಿ ಡಿ. ಮುರಳಿ ಪಡೆದ ಮತಗಳು 323.

ವಾರ್ಡ್‌ ನಂಬರ್‌ 3- ಇನಾಯತುಲ್ಲಾ- ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತ ಗಳು 992, ಸಮೀಪದ ಪ್ರತಿಸ್ಪರ್ಧಿ ಲಕ್ಷ್ಮೀನಾರಾ ಯಣ ಬಿಜೆಪಿ ಪಡೆದ ಮತಗಳು 641.

ವಾರ್ಡ್‌ ನಂಬರ್‌ 4. ಪ್ರಕಾಶ್‌- ವಿಜೇತ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು, 902 ಸಮೀಪದ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ್‌ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 428.

ವಾರ್ಡ್‌ ನಂಬರ್‌ 5. ಆರ್‌.ಮಾಲಾ -ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 504 ಪ್ರತಿಸ್ಪರ್ಧಿ ಗಾಯತ್ರಿ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 361.

ವಾರ್ಡ್‌ ನಂಬರ್‌ 6. ಅನುಸೂಯಮ್ಮ -ವಿಜೇತ ಬಿಜೆಪಿ ಅಭ್ಯರ್ಥಿ ಪಡೆದ ಮತ ಗಳು, 643 ಸಮೀಪದ ಪ್ರತಿಸ್ಪರ್ಧಿ ಗಾಯತ್ರಿ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 250.

ವಾರ್ಡ್‌ ನಂಬರ್‌ 7. ಎಚ್.ಆರ್‌. ಅನಿತಾ -ವಿಜೇತ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 615 ಸಮೀಪದ ಪ್ರತಿಸ್ಪರ್ಧಿ ಶ್ರೀ ಲತಾಂಗಿ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 363.

ವಾರ್ಡ್‌ ನಂಬರ್‌ 8. ಬಿ.ನಾಗರಾಜು -ವಿಜೇತ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 810, ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯ ರ್ಥಿ ದೊಡ್ಡಯ್ಯ ಪಡೆದ ಮತಗಳು 661.

ವಾರ್ಡ್‌ ನಂಬರ್‌ 9. ಸುಧಾ- ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 292, ಸಮೀಪದ ಪ್ರತಿಸ್ಪರ್ಧಿ ಪಿ.ಶೋಭಾ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 226.

ವಾರ್ಡ್‌ ನಂಬರ್‌ 10. ಕಲಾವತಿ-ವಿಜೇತ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 594, ಪ್ರತಿಸ್ಪರ್ಧಿ ಆರ್‌.ದಿವ್ಯ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಪಡೆದ ಮತಗಳು 458.

ವಾರ್ಡ್‌ ನಂಬರ್‌ 11. ಪ್ರಗತಿ- ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 931, ಪ್ರತಿಸ್ಪರ್ಧಿ ಶೋಭಾ -ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 454.

ವಾರ್ಡ್‌ ನಂಬರ್‌ 12 . ಕೆ.ಟಿ ಪವಿತ್ರಾ ವಿಜೇತ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 492, ಪ್ರತಿಸ್ಪರ್ಧಿ ಎಂ.ಲತಾ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಪಡೆದ ಮತಗಳು 354.

ವಾರ್ಡ್‌ ನಂಬರ್‌ 13. ಭಾಗ್ಯಲಕ್ಷ್ಮೀ ವಿಜೇತ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 762, ಸಮೀಪದ ಪ್ರತಿಸ್ಪರ್ಧಿ ಮಂಜುಳಾ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 386.

ವಾರ್ಡ್‌ ನಂಬರ್‌ 14. ಸಿ.ಕೆ.ಹೇಮಲತಾ -ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು, 450 ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 394.

ವಾರ್ಡ್‌ ನಂಬರ್‌ 15. ಎಸ್‌.ಶ್ರೀಕಾಂತ್‌ -ವಿಜೇತ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 649 ಸಮೀಪದ ಪ್ರತಿಸ್ಪರ್ಧಿ ಭಾಸ್ಕರ್‌ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 431.

ವಾರ್ಡ್‌ ನಂಬರ್‌ 16. ಎಸ್‌.ಲಲಿತಾ -ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತ ಗಳು 340 ಪ್ರತಿಸ್ಪರ್ಧಿ ಸುಜಾತ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 290.

ವಾರ್ಡ್‌ ನಂಬರ್‌ 17. ಕೆ.ಶ್ರೀನಿವಾಸ್‌-ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು, 736 ಪ್ರತಿಸ್ಪರ್ಧಿ ಮಂಜುನಾಥ ರೆಡ್ಡಿ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 582.

ವಾರ್ಡ್‌ ನಂಬರ್‌ 18. ರವಿಚೇತನ್‌ ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು, 571 ಸಮೀಪದ ಪ್ರತಿಸ್ಪರ್ಧಿ ಶೇರ್‌ ಅಲಿಖಾನ್‌ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಡೆದ ಮತಗಳು, 510 ಗೆಲುವಿನ ಅಂತರ 61.

ವಾರ್ಡ್‌ ನಂಬರ್‌ 19. ಜಿ.ಸುರೇಶ್‌ ಬಾಬು-ವಿಜೇತ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು, 634 ಸಮೀಪದ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 353.

ವಾರ್ಡ್‌ ನಂಬರ್‌ 20. ಎನ್‌.ಉಷಾ -ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 661, ಸಮೀಪದ ಪ್ರತಿಸ್ಪರ್ಧಿ ನಾಗರಾಜು ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 535.

ವಾರ್ಡ್‌ ನಂ.21. ಎನ್‌.ಎಸ್‌.ಪದ್ಮನಾಭ ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತ ಗಳು 699 ಸಮೀಪದ ಪ್ರತಿಸ್ಪರ್ಧಿ ಬಾಲ ರಾಜು ಬಿಜೆಪಿಅಭ್ಯರ್ಥಿ ಪಡೆದ ಮತ 576.

ವಾರ್ಡ್‌ ನಂಬರ್‌ 22. ರವಿ ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 791, ಪ್ರತಿಸ್ಪರ್ಧಿ ಎಸ್‌.ಮಂಜುನಾಥ್‌ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಡೆದ ಮತ 739.

ವಾರ್ಡ್‌ ನಂಬರ್‌ 23. ಭುವನಾ ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 442, ಸಮೀಪದ ಪ್ರತಿಸ್ಪರ್ಧಿ ಪ್ರಮೀಳಾ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 226.

ವಾರ್ಡ್‌ ನಂಬರ್‌ 24. ರಾಜಪ್ಪ ವಿಜೇತ ಕೈ ಅಭ್ಯರ್ಥಿ ಪಡೆದ ಮತಗಳು 696, ಪ್ರತಿಸ್ಪರ್ಧಿ ಪ್ರಜ್ವಲ್ ಬಿಜೆಪಿ ಪಡೆದ ಮತಗಳು 579.

ವಾರ್ಡ್‌ ನಂಬರ್‌ 25. ಕೆ.ಪಿ.ಕೃಷ್ಣ-ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 723, ಸಮೀಪದ ಪ್ರತಿಸ್ಪರ್ಧಿ ಮಾದೇಶ್‌ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 592.

ವಾರ್ಡ್‌ ನಂಬರ್‌ 26. ಸಿ.ಜೆ.ಕವಿತಾ-ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತಗಳು 751, ಸಮೀಪದ ಪ್ರತಿಸ್ಪರ್ಧಿ ಜಿ .ರಾಜ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 470.

ವಾರ್ಡ್‌ ನಂಬರ್‌ 27. ಗಂಗಾಧರ್‌.ಕೆ –ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಪಡೆದ ಮತ ಗಳು 333, ಪ್ರತಿಸ್ಪರ್ಧಿ ರಾಮಕೃಷ್ಣ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 140. ಕೈ ಕಾರ್ಯ ಕರ್ತರು ವಿಜಯೋತ್ಸವ ಆಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next