Advertisement

ಆನೆಗುಡ್ಡೆ ದೇವಸ್ಥಾನಕ್ಕೆ : ಅತ್ಯಾಧುನಿಕ ಡಿಶ್‌ವಾಶರ್‌ ಉದ್ಘಾಟನೆ

11:57 AM Apr 06, 2017 | Team Udayavani |

ತೆಕ್ಕಟ್ಟೆ: ಶ್ರೀ ವಿನಾಯಕ ದೇವರೇ ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಲಾಂಛನವಾಗಿದ್ದು ಪ್ರಸ್ತುತ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅಗ್ರಣಿ ಸ್ಥಾನ
ದಲ್ಲಿದೆ; ಜತೆಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದೇವೆ ಎಂದು ಕರ್ಣಾಟಕ ಬ್ಯಾಂಕ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಪಿ. ಜಯರಾಮ್‌ ಭಟ್‌ ಹೇಳಿದರು.

Advertisement

ಅವರು ಮಂಗಳವಾರ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನ್ನದಾನ ವ್ಯವಸ್ಥೆಗೆ ಕರ್ಣಾಟಕ ಬ್ಯಾಂಕ್‌ ಕೊಡಮಾಡಿದ ಸುಮಾರು  10.5 ಲಕ್ಷ ರೂ. ವೆಚ್ಚದ ಅತ್ಯಾಧುನಿಕ ತಂತ್ರಜ್ಞಾನದ ಡಿಶ್‌ ವಾಶರ್‌ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ಣಾಟಕ ಬ್ಯಾಂಕ್‌ನ ಚೀಫ್‌ ಜನರಲ್‌ ಮ್ಯಾನೇಜರ್‌ ಎಂ.ಎಸ್‌. ಮಹಾಬಲೇಶ್ವರ ಭಟ್‌ ಮಾತನಾಡಿ, ಕರಾವಳಿ ಜಿಲ್ಲೆಗಳ ದೇವಸ್ಥಾನಗಳ ಸ್ವತ್ಛತೆ ಹಾಗೂ ಪಾವಿತ್ರವನ್ನು ಕಾಪಾ ಡುವಲ್ಲಿ ಶ್ರಮಿಸಬೇಕು ಎಂದರು.

ಕುಂಭಾಶಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಪ್ರಧಾನ ಪಾಕತಜ್ಞರಾಗಿರುವ ರಮೇಶ ಕಾರಂತ ಹಾಗೂ ವಾದಿರಾಜ ಮಡಿಕುಳ ಅವರನ್ನು ಪಿ. ಜಯರಾಮ್‌ ಭಟ್‌ ಸಮ್ಮಾನಿಸಿದರು. ದೇವಸ್ಥಾನದ ಆನುವಂಶಿಕ ಆಡಳಿತ ಧರ್ಮ
ದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಅವರಿಗೆ ಕರ್ಣಾಟಕ ಬ್ಯಾಂಕ್‌ನಿಂದ ಡಿಮ್ಯಾಂಡ್‌ ಡ್ರಾಫ್ಟ್‌ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಆನುವಂಶಿಕ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ, ಕರ್ಣಾಟಕ ಬ್ಯಾಂಕ್‌ನ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ವಿದ್ಯಾಲಕ್ಷ್ಮೀ, ಕುಂಭಾಶಿ ಕರ್ಣಾಟಕ ಬ್ಯಾಂಕ್‌ನ ಶಾಖಾ ಪ್ರಬಂಧಕ ಗೌರೀಶ್‌ ಎಸ್‌. ಜೋಶಿ ಮೊದಲಾದವರು ಉಪಸ್ಥಿತರಿದ್ದರು.

ಕೆ. ಸೂರ್ಯನಾರಾಯಣ ಉಪಾಧ್ಯಾಯ ಸ್ವಾಗತಿಸಿ, ಪ್ರಸ್ತಾವನೆಗೈ ದರು. ಕೆ. ಶ್ರೀರಮಣ ಉಪಾಧ್ಯಾಯ ವಂದಿಸಿದರು. ದೇವಸ್ಥಾನದ ಮ್ಯಾನೇಜರ್‌ ಆನಂದರಾಮ್‌ ಉರಾಳ ಹಂದಟ್ಟು ಕಾರ್ಯಕ್ರಮ ನಿರೂಪಿಸಿದರು.

Advertisement

ಗಂಟೆಗೆ ಸಾವಿರ ಬಟ್ಟಲು  ತೊಳೆಯುವ ಸಾಮರ್ಥ್ಯ
ಪ್ರಸ್ತುತ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಗುಣ
ಮಟ್ಟದ ಐಎಫ್‌ಬಿ ಕಂಪೆನಿಯ ಅತ್ಯಾಧುನಿಕ ಇಟಾಲಿಯನ್‌ ತಂತ್ರ ಜ್ಞಾನದ ಈ ಡಿಸ್‌ ವಾಶರ್‌ ಯಂತ್ರವು  ಶೇ. 80ರಷ್ಟು ಬಿಸಿ ನೀರನ್ನು ಶೇ. 60 ಸಾಂದ್ರತೆಯಲ್ಲಿ ವಾಷಿಂಗ್‌ ಲಿಕ್ವಿಡ್‌ ಸಹಿತ ಪ್ರತಿ ಗಂಟೆಗೆ ಸಾವಿರಕ್ಕೂ ಅಧಿಕ ಸ್ಟೀಲ್‌ ತಟ್ಟೆಗಳನ್ನು ತೊಳೆಯುವ ಸಾಮರ್ಥ್ಯ ಹೊಂದಿದೆ. ಸಂಪೂರ್ಣ ಪರಿಸರ ಸ್ನೇಹಿಯಾಗಿ ನೀರಿನ ಉಳಿತಾಯದೊಂದಿಗೆ ಕಾರ್ಯನಿರ್ವಹಿಸುವ ದಕ್ಷತೆಯನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next