Advertisement

ಕಿಕ್‌ ಬಾಕ್ಸಿಂಗ್‌ನಲ್ಲಿ ದೇಶಕ್ಕೆ ಕೀರ್ತಿ ತಂದ ಕುಂದಾಪುರದ ಅನೀಶ್‌ ಶೆಟ್ಟಿ

01:04 AM Mar 19, 2020 | Sriram |

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಗೆದ್ದು, ದೇಶಕ್ಕೆ ಕೀರ್ತಿ ತರಬೇಕು ಎನ್ನುವ ಮಹಾದಾಸೆಯಿತ್ತು. ಇದಕ್ಕಾಗಿ ಆಯ್ಕೆ ಮಾಡಿಕೊಂಡ ಕ್ಷೇತ್ರ ಕ್ರೀಡೆ. ಅದು ಕೂಡ ಅಪಾಯಕಾರಿಯಾದ ಕಿಕ್‌ ಬಾಕ್ಸಿಂಗ್‌. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಯೂಟ್ಯೂಬ್‌ನಲ್ಲಿ ನೋಡಿ ಕಲಿತ ಈತ ಕೊನೆಗೂ ಅಂದುಕೊಂಡದ್ದನ್ನು ಸಾಧಿಸಿಯೇ ಬಿಟ್ಟ.

Advertisement

ಇದು ಕುಂದಾಪುರದ ಕಟ್ಕೆರೆಯ ಅನೀಶ್‌ ಶೆಟ್ಟಿ ಅವರ ಕ್ರೀಡಾ ಸಾಧನೆಯ ಯಶೋಗಾಥೆ. ಅವರ ಜೀವನದ ಸಾಧನೆಯ ಹಾದಿಯನ್ನು ತೆರೆದಿಟ್ಟಿದ್ದಾರೆ ಪ್ರಶಾಂತ್‌ ಪಾದೆ ಅವರು.

ಚಾಂಪಿಯನ್‌ ಶಿಪ್‌ ಪಟ್ಟ
ಕಿಕ್‌ ಬಾಕ್ಸಿಂಗ್‌ ಕ್ರೀಡೆ ಅಪಾಯಕಾರಿಯಾಗಿದ್ದು, ಈ ಕ್ರೀಡೆಯಲ್ಲಿ ತನಗೆ ಆಸಕ್ತಿಯಿದ್ದು, ಮನೆಯವರಿಗೆ ಹೇಳಿ ತರಬೇತಿಗಾಗಿ ವಿದೇಶಕ್ಕೆ ಹೋಗುತ್ತೇನೆ ಎಂದರೆ ಬಿಡುವುದು ಕಷ್ಟವೆಂದು ತಿಳಿದ ಅನೀಶ್‌, ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಹೇಳಿ ಥಾಯ್ಲೆಂಡ್‌ಗೆ ಪಯಣ ಬೆಳೆಸಿದ್ದರು. ಆ ಬಳಿಕ ಹೇಗೋ ಮನೆಯವರನ್ನು ಒಪ್ಪಿಸುವಲ್ಲಿ ಯಶಕಂಡರು. ಅಲ್ಲಿ ಸತತ 3 ತಿಂಗಳ ಕಾಲ ತರಬೇತಿ ಪಡೆದು, ಮೊಯ್‌ ಥಾಯ್‌ ಕಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನ 65 ಕೆ.ಜಿ. ವಿಭಾಗದಲ್ಲಿ ಸತತ ನಾಲ್ಕು ಬಾರಿ ಗೆದ್ದಿದ್ದ ಥಾಯ್ಲೆಂಡ್‌ನ‌ ಬಲಿಷ್ಠ ಆಟಗಾರನಾಗಿದ್ದ ನ್ಯುವಿÉಕಿಟ್‌ ಬಾಕ್ಸರ್‌ ನ್ಯುವಿÉಕಿಟ್‌ ಅವರನ್ನು ಸೋಲಿಸಿದ ಅನೀಶ್‌ ಚಾಂಪಿಯನ್‌ ಷಿಪ್‌ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು.

ವಿರೋಧದ ನಡುವೆಯೂ ಅಭ್ಯಾಸ
ಕಿಕ್‌ ಬಾಕ್ಸಿಂಗ್‌ ಬಗ್ಗೆ ಅತಿಯಾದ ಒಲವಿದ್ದರೂ, ನಮ್ಮಲ್ಲಿ ಈ ಕ್ರೀಡೆಯಲ್ಲಿ ಪರಿಣತಿ ಪಡೆದವರು ಹೆಚ್ಚಿನವರಿಲ್ಲ. ಕೆಲಸದ ಒತ್ತಡದ ನಡುವೆಯೂಯುಟ್ಯೂಬ್‌ ನೋಡಿ ಕಲಿತು, ಹೆಚ್ಚಿನ ಕಲಿಕೆಗಾಗಿ ಥೈಲ್ಯಾಂಡ್‌ಗೆ ಪಯಣ ಬೆಳೆಸಿದರು ಅನೀಶ್‌. ಮನೆಯವರ ತೀವ್ರ ವಿರೋಧದ ನಡುವೆಯೂ ಬಾಕ್ಸಿಂಗ್‌ ಅಭ್ಯಾಸ ಮಾಡಿದ್ದ ಅನೀಶ್‌ ಶೆಟ್ಟಿ ಈಗ ತನ್ನ ಸಾಧನೆ ಮೂಲಕ ಎಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಅಪಾರ ಆಸಕ್ತಿ
ಬೆಂಗಳೂರಿನಲ್ಲಿ ಖಾಸಗಿ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಇಂಜಿನಿಯರ್‌ ಆಗಿದ್ದ ಅನೀಶ್‌, ಕಾಲೇಜು ದಿನಗಳಲ್ಲಿ ಉತ್ತಮ ವಾಲಿಬಾಲ್‌ ಆಟಗಾರರಾಗಿದ್ದರು. ಫಿಟೆ°ಸ್‌ಗಾಗಿ ಜಿಮ್‌ ಸೇರಿಕೊಂಡಿದ್ದರು. ಗೋವಿಂದ ಸಿಂಗ್‌ ಎಂಬವರು ಪರಿಚಯವಾಗಿ, “ಮೊಯ್‌ ಥಾಯ್‌’ ಕ್ರೀಡೆ ಬಗ್ಗೆ ತಿಳಿಸಿದ್ದರು. ಬಾಕ್ಸಿಂಗ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅನೀಶ್‌, ಮನೆಯರಿಗೆ ಗೊತ್ತಾಗದಂತೆ 2 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದರು. 1 ತಿಂಗಳಿನಿಂದ ಥಾಯ್ಲೆಂಡ್‌ ತರಬೇತುದಾರ ಸಿಡ್‌ ಅವರಿಂದ ತರಬೇತಿ ಪಡೆದು ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು. ಬಾಕ್ಸರ್‌ ನ್ಯುವಿÉಕಿಟ್‌ ಅವರು ಈಗಾಗಲೇ 6 ಫೈಟ್‌ಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು. ಆದರೆ ಮೊದಲ ಬಾರಿ ಸ್ಪರ್ಧೆ ಮಾಡಿದ್ದ ಅನೀಶ್‌ ಬಾಕ್ಸರ್‌ ನ್ಯುವಿÉಕಿಟ್‌ ವಿರುದ್ಧ ಒಂದೇ ಸುತ್ತಿನಲ್ಲಿ ಗೆಲುವು ದಾಖಲಿಸಿ ದಾಖಲೆ ಬರೆದಿದ್ದಾರೆ.

Advertisement

ವಿಭಿನ್ನ ಕ್ರೀಡೆ
ಮೊಯ್‌ ಥಾಯ್‌ ಕಿಕ್‌ ಬಾಕ್ಸಿಂಗ್‌ ಹಾಗೂ ಸಾಮಾನ್ಯ ಬಾಕ್ಸಿಂಗ್‌ ಸ್ಪರ್ಧೆಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ ಈ ಬಾಕ್ಸಿಂಗ್‌ನಲ್ಲಿ ಕೈಯಲ್ಲಿ ಮಾತ್ರ ಹೊಡೆಯಬಹುದು (ಪಂಚ್‌ ಕೊಡುವುದು). ಆದರೆ ಕಿಕ್‌ ಬಾಕ್ಸಿಂಗ್‌ನಲ್ಲಿ ಕಾಲಿನಲ್ಲಿಯೂ ಕೂಡ ಹೊಡೆಯುವ ಅವಕಾಶವಿರುತ್ತದೆ. ವಿಶ್ವದ ಹೆಚ್ಚಿನ ರಾಷ್ಟ್ರಗಳಲ್ಲಿ ಈ ಕ್ರೀಡೆಯನ್ನು ಆಡುತ್ತಾರಾದರೂ, ಭಾರತದಿಂದ ಈವರೆಗೆ ಈ ಕ್ರೀಡೆಯನ್ನು ಆಡಿದವರು ಕೇವಲ 10 ಮಂದಿ ಮಾತ್ರ. ಇವರಲ್ಲಿ ಈವರೆಗೆ ಅನೀಶ್‌ ಸೇರಿದಂತೆ ಐವರು ಗೆಲುವು ಸಾಧಿಸಿದ್ದಾರೆ.

ಇನ್ನಷ್ಟು ಗೆಲ್ಲುವ ಹಂಬಲ
ಥಾಯ್ಲೆಂಡ್‌ ಚಾಂಪಿಯನ್‌ ಶಿಪ್‌ ಗೆದ್ದ ಆಧಾರದಲ್ಲಿ ಬೇರೆ ಬೇರೆ ಕಡೆ ನಡೆಯುವ ಚಾಂಪಿಯನ್‌ ಶಿಪ್‌ಗ್ಳಲ್ಲಿ ಆಡಲು ಅರ್ಹತೆ ಸಿಗುತ್ತದೆ. ಅದರಂತೆ ಇನ್ನಷ್ಟು ಟೂರ್ನಮೆಂಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿ, ಪದಕ ಗೆಲ್ಲುವ ಹಂಬಲವಿದೆ.
-ಅನೀಶ್‌ ಶೆಟ್ಟಿ ಕಟ್ಕೆರೆ, ಕಿಕ್‌ ಬಾಕ್ಸರ್‌

ಕಟ್ಕೆರೆಯ ದಿ| ಶಂಕರ್‌ ಶೆಟ್ಟಿ ಹಾಗೂ ಉಷಾ ಶೆಟ್ಟಿ ದಂಪತಿಯ ಪುತ್ರನಾಗಿರುವ ಅನೀಶ್‌, ಕುಂದಾಪುರದ ಸೈಂಟ್‌ ಮೇರಿಸ್‌ ಆ. ಮಾ. ಶಾಲೆ, ಕೋಟ ವಿವೇಕ ಪ್ರೌಢಶಾಲೆ, ಆಳ್ವಾಸ್‌ ಶಿಕ್ಷಣ ಸಂಸ್ಥೆ, ಮೂಡ್ಲಕಟ್ಟೆಯ ಎಂಐಟಿಯ ಹಳೆ ವಿದ್ಯಾರ್ಥಿಯಾಗಿದ್ದು, ಸದ್ಯ ಸಾಫ್ಟ್‌ವೇರ್‌ ಇಂಜಿನಿಯರ್‌ ಪದವೀಧರನಾಗಿದ್ದು, ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next