Advertisement

ಟ್ರೋಫಿಗಳನ್ನೆಲ್ಲ ಕಸದಂತೆ ಎಸೆದ ಟೆನಿಸ್‌ ತಾರೆ ರಾಡಿಕ್‌

03:30 AM Jul 15, 2017 | |

ನ್ಯೂಯಾರ್ಕ್‌: ಅಮೆರಿಕದ ಈ ಟೆನಿಸ್‌ ತಾರೆ ಆ್ಯಂಡಿ ರಾಡಿಕ್‌ ಹೆಸರನ್ನು ಬಹುತೇಕರು ಕೇಳಿರುತ್ತಾರೆ. ಟೆನಿಸ್‌ ಪ್ರಿಯರಿಗಂತೂ ಈ ಹೆಸರು ಗೊತ್ತಿಲ್ಲದಿರಲು ಸಾಧ್ಯವೇ ಇಲ್ಲ. ಇವರು ತಮ್ಮ 21ನೇ ವರ್ಷದಲ್ಲೇ 2003ರಲ್ಲಿ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಗೆದ್ದು ಖ್ಯಾತಿಯ ಉತ್ತುಂಗಕ್ಕೇರಿದರು, ವಿಶ್ವ ನಂ.1 ಎನಿಸಿಕೊಂಡರು. ಇಂತಹ ವ್ಯಕ್ತಿ ಇದೀಗ
ವೈರಾಗ್ಯ ಬಂದವರಂತೆ ವರ್ತಿಸುತ್ತಿದ್ದಾರೆ.

Advertisement

ತಾವು ಗೆದ್ದ 32 ಪ್ರಶಸ್ತಿಗಳ ಪೈಕಿ ಬಹುತೇಕವನ್ನು ಕಸದ ಬುಟ್ಟಿಗೆ ಎಸೆದು ಬಿಟ್ಟಿದ್ದಾರೆ. ಅಂದ ಹಾಗೆ ಈ ಸತ್ಯವನ್ನು ಬಿಚ್ಚಿಟ್ಟಿದ್ದು ಅವರ ಪತ್ನಿ ಬ್ರೂಕ್ಲಿನ್‌ ಡೆಕರ್‌.

2012ರಲ್ಲಿ ದಿಢೀರನೆ ರಾಡಿಕ್‌ ಟೆನಿಸ್‌ಗೆ ವಿದಾಯ ಹೇಳಿದರು. ಅದಾದ ನಂತರ ತಮ್ಮದೇ ಸಂಸ್ಥೆಯ ಮೂಲಕ ತೊಂದರೆಯಲ್ಲಿರುವ ಯುವಕರಿಗೆ ನೆರವು ನೀಡುವ ಕಾಯಕ ಶುರು ಮಾಡಿಕೊಂಡರು. ಇತ್ತೀಚೆಗೆ ಏನನ್ನಿಸಿತೋ ಗೊತ್ತಿಲ್ಲ ಮನೆ ಸ್ವತ್ಛ ಮಾಡುವ ಸಂದರ್ಭದಲ್ಲಿ ಈ ಟ್ರೋಫಿಗಳನ್ನೂ ಸ್ವತ್ಛ ಮಾಡಿಬಿಟ್ಟಿದ್ದಾರೆ! ಅದೂ ಪತ್ನಿ ಮನೆಯಲ್ಲಿಲ್ಲದ ಸಂದರ್ಭದಲ್ಲಿ. ಬ್ರೂಕ್ಲಿನ್‌ ವಾಪಸ್‌ ಬಂದು ನೋಡಿದರೆ ಟ್ರೋಫಿಗಳೆಲ್ಲ ಕಸದ ಬುಟ್ಟಿ ಸೇರಿವೆ. ಘಟನೆಯನ್ನು ನೋಡಿ ಆಕೆಯೂ ಆಘಾತಗೊಂಡಿದ್ದಾರೆ.

ಯಾಕಿಂಗಾಯ್ತು?: ಮಾಜಿ ವಿಶ್ವ ನಂ.1 ಎನಿಸಿಕೊಂಡ, ಜನಪ್ರಿಯತೆಯ ಅಲೆಯಲ್ಲಿ ತೇಲಿದ, ಅಮೆರಿಕದ ಶ್ರೇಷ್ಠ ಟೆನಿಸಿಗರಲ್ಲಿ ಒಬ್ಬರೆಂಬ ಖ್ಯಾತ ಹೊಂದಿರುವ ರಾಡಿಕ್‌ಗೆ ಈ ಟ್ರೋಫಿಗಳನ್ನು ಎಸೆಯಬೇಕೆಂದು ಅನಿಸಿದ್ದಾದರೂ ಏಕೆ? ಇದಕ್ಕೆ ಖಚಿತ ಉತ್ತರ ರಾಡಿಕ್‌ ಗೂ ಗೊತ್ತಿದ್ದಂತಿಲ್ಲ. ಆದರೆ ಅವರಿಗೆ ಈ ಟ್ರೋಫಿಗಳೆಲ್ಲ ವ್ಯರ್ಥ ಅನಿಸಿದಂತಿದೆ.

ಅವರು ಹೇಳುವುದು ಹೀಗೆ: “ಈ ಟ್ರೋμಗಳೆಲ್ಲ ಯಶಸ್ಸು ಅನಿಸುತ್ತಿಲ್ಲ, ಇವೆಲ್ಲ ನನ್ನನ್ನು ಅರ್ಥೈಸುವುದೂ ಇಲ್ಲ. ಈ ಭೌತಿಕ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳುವುದಕ್ಕೆ ಯಾವ ಆಸಕ್ತಿಯೂ ಉಳಿದಿಲ್ಲ’.

Advertisement

ಆದರೆ ಪತ್ನಿ ಬ್ರೂಕ್ಲಿನ್‌ ಹೇಳುವ ಪ್ರಕಾರಮೊದಲ ಬಾರಿಗೆ ಗೆದ್ದ ಯುಎಸ್‌ ಓಪನ್‌ ಟ್ರೋμ ಸೇರಿದಂತೆ ಕೆಲವನ್ನು ರಾಡಿಕ್‌ ಉಳಿಸಿ ಕೊಂಡಿದ್ದಾರೆ. ಆದರೆ ಅವನ್ನೆಲ್ಲ ಕಾಣಿಸುವಂತೆ ಇಟ್ಟಿಲ್ಲ. ಬಹುಪಾಲು ಟ್ರೋಫಿಗಳನ್ನು ಮನೆಯಿಂದಾಚೆ ಎಸೆದಿದ್ದಾರೆ. 

ಗ್ರ್ಯಾನ್‌ಸ್ಲಾಮ್‌: 5 ಫೈನಲ್‌, ಒಮ್ಮೆ ಚಾಂಪಿಯನ್‌ 
12 ವರ್ಷಗಳ ಕಾಲ ರಾಡಿಕ್‌ ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ಮಿಂಚಿದರು. ಅದರಲ್ಲೂ 2003ರಿಂದ 2012ರ ಅವಧಿಯಲ್ಲಿ ಸತತ 10 ವರ್ಷಗಳವರೆಗೆ ವಿಶ್ವದ ಅಗ್ರ 10 ಆಟಗಾರರಲ್ಲೊಬ್ಬರಾಗಿ ಸ್ಥಾನ ಗಳಿಸಿದ್ದರು. ವಿಶ್ವದ ಶ್ರೇಷ್ಠ
ಆಟಗಾರರಲ್ಲೊಬ್ಬ ಎಂಬ ಖ್ಯಾತಿಯನ್ನೂ ಹೊಂದಿದ್ದರು. 2003ರಲ್ಲಿ ಕೇವಲ 21 ವರ್ಷ ವಯಸ್ಸಿನಲ್ಲೇ ಮೊದಲ ಗ್ರ್ಯಾನ್‌
ಸ್ಲಾಮ್‌ ಟ್ರೋಫಿ ಗೆದ್ದರು. ಅದಾದ ನಂತರ 4 ಬಾರಿ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಗೇರಿದ್ದಾರೆ. ಅಷ್ಟರಲ್ಲೂ ರೋಜರ್‌
ಫೆಡರರ್‌ ವಿರುದ್ದ ಸೋತು ನಿರಾಶೆ ಅನುಭವಿಸಿದ್ದಾರೆ. ಒಟ್ಟಾರೆ ಈ ಅವಧಿಯಲ್ಲಿ 32 ಪ್ರಶಸ್ತಿ ಗೆದ್ದಿದ್ದಾರೆ.
ಆದರೆ ಮತ್ತೂಂದು ಗ್ರ್ಯಾನ್‌ಸ್ಲಾಮ್‌ ಗೆಲ್ಲಲಿಲ್ಲ ಎನ್ನುವುದು ಅವರಿಗೆ ಜೀವನಪೂರ್ತಿ ಕಾಡುವ ಬೇಸರ .

Advertisement

Udayavani is now on Telegram. Click here to join our channel and stay updated with the latest news.

Next