Advertisement

ಆ್ಯಂಡ್ರಾಯ್ಡ್ ವಾಟ್ಸಪ್ ಗೆ ಬಂತು ಫಿಂಗರ್ ಪ್ರಿಂಟ್ ಲಾಕ್ : ಹೇಗೆ ಬಳಸುವುದು ?

12:43 PM Nov 03, 2019 | Mithun PG |

ಆ್ಯಂಡ್ರಾಯ್ಡ್​ ನಲ್ಲಿ ವಾಟ್ಸಾಪ್ ಇಂದು ಬಹಳ ಜನಪ್ರಿಯ ಆ್ಯಪ್. ಅತೀ ಹೆಚ್ಚು ಮಂದಿ ಭಾರತೀಯರು ಈ ಆ್ಯಪ್ ಬಳಸುತ್ತಾರೆ.  ಆ ಮೂಲಕ ಪೋಟೋ, ವಿಡಿಯೋ, ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಆ ಕಾರಣಕ್ಕಾಗಿ ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ  ವಾಟ್ಸಾಪ್ ಸಂಸ್ಥೆ ಹೆಚ್ಚು ಭದ್ರತೆಯನ್ನು ನೀಡಲು ಫಿಂಗರ್ ಪ್ರಿಂಟ್ ಲಾಕ್ ಅನ್ನು ಪರಿಚಯಿಸಿದೆ.

Advertisement

ಈ ಮೊದಲು ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಇತರ ಲಾಕರ್ ಅ್ಯಪ್ ಗಳ ಮೂಲಕ ವಾಟ್ಸಪ್  ಗೆ ಸ್ಕ್ಯಾನರ್, ಪ್ಯಾಟರ್ನ್ ಸೇರಿದಂತೆ ಹಲವು  ಲಾಕ್ ಗಳನ್ನು ಮಾಡುತ್ತಿದ್ದರು. ಇದು ಹೆಚ್ಚು ಭದ್ರತೆಯಿಂದ ಕೂಡಿರಲಿಲ್ಲ. ಮಾತ್ರವಲ್ಲದೆ ಇತರರು ಅನಧಿಕೃತವಾಗಿ ವಾಟ್ಸಪ್ ಅನ್ನು ಬಳಸಬಹುದಿತ್ತು.

ಇಸ್ರೇಲಿನ ಬೇಹುಗಾರರು ದೇಶದ ವಾಟ್ಸ್​ಆ್ಯಪ್​ ಬಳಕೆದಾರರ ಮೇಲೆ ಕಣ್ಣಿಟ್ಟಿದ್ದು, ಈ ಕಾರಣಕ್ಕಾಗಿ ಕೂಡ ಹೆಚ್ಚಿನ ಸುರಕ್ಷತೆಯನ್ನು ನೀಡಲು ಫಿಂಗರ್​ ಪ್ರಿಂಟ್​ ಲಾಕ್​ ಫೀಚರ್​ ನೀಡುತ್ತಿದೆ. ಬಳಕೆದಾರರ ವೈಯಕ್ತಿಕ ಚಾಟ್​ ಹಾಗೂ ರಕ್ಷಣೆಗಾಗಿ ಫಿಂಗರ್​ ಪ್ರಿಂಟ್​ ಲಾಕ್​ ಅನುಕೂಲಕ್ಕೆ ಹೆಚ್ಚು ಬರಲಿದೆ.

ಆ್ಯಂಡ್ರಾಯ್ಡ್ ನಲ್ಲಿ ವಾಟ್ಸಪ್ ಫಿಂಗರ್ ಪ್ರಿಂಟ್ ಲಾಕ್ ಬಳಸುವುದು ಹೇಗೆ :

  • ಮೊದಲಿಗೆ ಗೂಗಲ್​ ಪ್ಲೇಸ್ಟೋರ್​ ನಲ್ಲಿ, ಮೈ ಆ್ಯಪ್ಸ್​ ಮೂಲಕ ವಾಟ್ಸ್​ಆ್ಯಪ್​ ಅನ್ನು ಅಪ್ಡೇಟ್​ ಮಾಡಿಕೊಳ್ಳಿ.
  • ಆ ಬಳಿಕ ವಾಟ್ಸ್​ಆ್ಯಪ್​ ತೆರೆದು, ಸೆಟ್ಟಿಂಗ್​ ಆಯ್ಕೆಯನ್ನು ಕ್ಲಿಕ್​ ಮಾಡಿ
  • ನಂತರ, ಅಕೌಂಟ್​​ ಆಯ್ಕೆಯಲ್ಲಿ ಪ್ರೈವಸಿ ಆಯ್ಕೆ ಮಾಡಿ.
  • ಪ್ರೈವಸಿ ಆಯ್ಕೆಯನ್ನು ಕ್ಲಿಕ್​ ಮಾಡುತ್ತಿದ್ದಂತೆ ಕಾಣಿಸಿಕೊಳ್ಳುವ ಫಿಂಗರ್​ ಪ್ರಿಂಟ್​ ಲಾಕ್​ ಆಯ್ದುಕೊಳ್ಳಿ. ಅದನ್ನು ಟರ್ನ್​ ಆನ್​ ಮಾಡಿರಿ.
  • ಇದೀಗ ನಿಮ್ಮ ವಾಟ್ಸ್​ಆ್ಯಪ್​ನಲ್ಲಿ ಫಿಂಗರ್​ ಪ್ರಿಂಟ್​ ಲಾಕ್​ ಫೀಚರ್​ ಲಭ್ಯವಾಗುತ್ತದೆ.
  • 1 ನಿಮಿಷ ,30 ನಿಮಿಷ ಮತ್ತು ತಕ್ಷಣವೇ ಲಾಕ್ ಆಗುವಂತಹ ಆಯ್ಕೆಗಳಿರುತ್ತದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next