ನವದೆಹಲಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಏರೋಸಿಟಿಯ ಐಷಾರಾಮಿ ಹೋಟೆಲ್‌ನಲ್ಲಿ ಒಂದಲ್ಲ ಎರಡಲ್ಲಾ ಬರೋಬ್ಬರಿ 15 ದಿನಗಳ ಕಾಲ ಯಾವುದೇ ಹಣವನ್ನು ಪಾವತಿಸದೆ ತಂಗಿದ್ದ ಆರೋಪದ ಮೇಲೆ 37 ವರ್ಷದ ಮಹಿಳೆಯನ್ನು ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಈ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಹೋಟೆಲ್ ಸಿಬ್ಬಂದಿ ಹಣದ ಬಗ್ಗೆ ಕೇಳಿದಾಗ ಅವರೊಂದಿಗೆ ಜಗಳವಾಡಿ ಹಣ ನೀಡದೆ ಓಡಿಹೋಗಲು ಪ್ರಯತ್ನಿಸಿದ್ದಳು ಎಂದಿದ್ದಾರೆ.
ಹೋಟೆಲ್ ಸಿಬ್ಬಂದಿ ಮಹಿಳೆಯಿಂದ ಬಿಲ್ ಕೇಳಿದಾಗಲೆಲ್ಲಾ ಮಹಿಳೆ ಯುಪಿಐ ಪಾವತಿಯ ಸಂದೇಶವನ್ನು ಹೋಟೆಲ್ ಸಿಬ್ಬಂದಿಗೆ ತೋರಿಸಿದ್ದಾಳೆ. ಆದರೆ ಹೋಟೆಲ್ ಆಡಳಿತ ಮಂಡಳಿ ಆಕೆಯ ಖಾತೆಯನ್ನು ಪರಿಶೀಲಿಸಿದಾಗ ಮಹಿಳೆ ತೋರಿಸಿದ ಆನ್‌ಲೈನ್ ಪಾವತಿ ಖಾತೆಗೆ ಹಣ ಜಮಾ ಆಗಿರುವುದು ತೋರುವುದಿಲ್ಲ.
ಮಹಿಳೆಯನ್ನು ಆಂಧ್ರಪ್ರದೇಶದ ಝಾನ್ಸಿ ರಾಣಿ ಸ್ಯಾಮ್ಯುಯೆಲ್ ಎಂದು ಗುರುತಿಸಲಾಗಿದೆ. ಮಹಿಳೆ ಡಿಸೆಂಬರ್ 13 ರಂದು ಹೋಟೆಲ್ ಬುಕ್ ಮಾಡಿದ್ದರು. ಸದ್ಯ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯ ಪ್ರಕಾರ, ಪುಲ್‌ಮನ್ ಹೋಟೆಲ್ ಅಧಿಕಾರಿಗಳು ತಮ್ಮ ದೂರಿನಲ್ಲಿ ಸ್ಯಾಮ್ಯುಯೆಲ್ ಹೋಟೆಲ್ ಸೇವೆಗಳಿಗೆ ಮೋಸದ ಪಾವತಿ ವಿಧಾನಗಳನ್ನು ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಐಜಿಐ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: SatyaSai ಗ್ರಾಮದಲ್ಲಿ ಕ್ರಿಕೆಟ್ ದಿಗ್ಗಜರ ಕಾಳಗ: ಸಾಯಿ ಕೃಷ್ಣ ಕ್ರೀಡಾಂಗಣ ಲೋಕಾರ್ಪಣೆ