Advertisement

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಅಲಭ್ಯತೆ: ರಸ್ತೆ ಬದಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

09:55 AM Jan 13, 2020 | Team Udayavani |

ಆಂಧ್ರಪ್ರದೇಶ: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಅಲಭ್ಯರಾದ್ದರಿಂದ ಮಹಿಳೆಯೋರ್ವರು ರಸ್ತೆ ಬದಿಯಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಕೃಷ್ಣ ಜಿಲ್ಲೆಯ ಮೈಲಾವರಂನಲ್ಲಿ ನಡೆದಿದೆ.

Advertisement

ತುಂಬು ಗರ್ಭಿಣಿಯಾಗಿದ್ದ ಮಾರಿಯಮ್ಮ ಎಂಬ ಮಹಿಳೆ, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೇ ಅಲ್ಲಿನ ಸಿಬ್ಬಂದಿ ಆಸ್ಪತ್ರೆಯಲ್ಲಿ ವೈದರಿಲ್ಲ ಎಂದು ಹೇಳಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಹಾಗಾಗಿ ಮತ್ತೆ ಮನೆಗೆ ಹಿಂದಿರುವಾಗ ಮಾರ್ಗ ಮಧ್ಯೆ ಆಕೆ ಸ್ಥಳೀಯ ಮಹಿಳೆಯರ ಸಹಾಯದಿಂದ ಮಗುವಿಗೆ ಜನ್ಮ ನೀಡಿದ್ದಾಳೆ.

ಘಟನೆ ಕುರಿತು ಮಾಹಿತಿ ಪಡೆದ ಸ್ಥಳೀಯ ಶಾಸಕ ವಸಂತ ಕೃಷ್ಣ , ಕೂಡಲೇ ಆಂಬ್ಯುಲೆನ್ಸ್ ವಾಹನ ತರಿಸಿ ಮಹಿಳೆ ಮತ್ತು ಮಗುವನ್ನು ವಿಜಯವಾಡ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾತ್ರವಲ್ಲದೆ ಜಿಲ್ಲಾ ವೈದ್ಯಾಧಿಕಾರಿಯನ್ನು  ತರಾಟೆಗೆ ತೆಗೆದುಕೊಂಡು ಇಂತಹ ಘಟನೆ ಮರುಕಳಿಸಬಾರದೆಂದು ಎಚ್ಚರಿಕೆ ನೀಡಿದ್ದಾರೆ. ಅದರ ಜೊತೆಗೆ ಜಿಲ್ಲಾಧಿಕಾರಿಗೆ  ಘಟನೆಯ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next