Advertisement

ಪ್ರೇಯಸಿ ಜತೆ ಮದುವೆ ಮಾಡಿಸಿದ ಪತ್ನಿ!

12:24 AM Sep 29, 2022 | Team Udayavani |

ತಿರುಪತಿ: 2 ಜಡೆಗಳು ಒಂದಾಗಿರುವುದು ಸಾಧ್ಯವೇ ಇಲ್ಲ ಎಂಬುದು ಸಾಮಾನ್ಯ ಪ್ರತೀತಿ. ಅದರಲ್ಲೂ ಗಂಡನಿಗೆ ಮತ್ತೊಂದು ಯುವತಿಯೊಂದಿಗೆ ಸಂಬಂಧ ಇದೆ ಎಂದು ತಿಳಿದರೆ ಆ ಕುಟುಂಬದಲ್ಲಿ ನೆಮ್ಮದಿ ಅಂತ್ಯವೆಂದೇ ಅರ್ಥ.

Advertisement

ಆದರೆ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಪತ್ನಿಯೊಬ್ಬಳು ತನ್ನ ಗಂಡನ ಇನ್ನೊಂದು ಸಂಬಂಧದ ಬಗ್ಗೆ ತಿಳಿದು, ತಾನೇ ಮುಂದೆ ನಿಂತು ಇಬ್ಬರ ವಿವಾಹ ಮಾಡಿಸಿದ್ದಾಳೆ. ಅಷ್ಟೇ ಅಲ್ಲದೇ ಸದ್ಯ ಮೂವರು ಒಟ್ಟಿಗೆ ಒಂದೇ ಮನೆಯಲ್ಲಿ ಸಂಸಾರ ನಡೆಸುತ್ತಿದ್ದಾರೆ. ವೀಡಿಯೋ ಎಡಿಟರ್‌ ಆಗಿರುವ ಕಲ್ಯಾಣ ಕಡಪದ ವಿಮಲಾ ಅವರೊಂದಿಗೆ ವಿವಾಹವಾಗಿದ್ದರು. ಆದರೆ ವಿಶಾಖಪಟ್ಟಣದ ನಿತ್ಯಶ್ರೀ ಅವರೊಂದಿಗೆ ಸಂಬಂಧ ಹೊಂದಿದ್ದರು.

ಕಳೆದ ಬುಧವಾರ ಪತ್ನಿ ವಿಮಲಾ ಅವರೇ ಮುಂದೆ ನಿಂತು ಕಲ್ಯಾಣ ಮತ್ತು ನಿತ್ಯಶ್ರೀ ಅವರ ಮದುವೆ ಮಾಡಿಸಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next