Advertisement

ಆಂಧ್ರ ಸಿಎಂ ಆಪ್ತ ಎಂದು ನಂಬಿಸಿ ಕೋಟಿ, ಕೋಟಿ ರೂಪಾಯಿ ವಂಚಿಸಿದ ಮಾಜಿ ಕ್ರಿಕೆಟಿಗ!

01:25 PM Mar 15, 2023 | Team Udayavani |

ಆಂಧ್ರಪ್ರದೇಶ: ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಆಪ್ತ ಸಹಾಯಕ ಎಂದು  ಪರಿಚಯಿಸಿಕೊಂಡು ಕಂಪೆನಿಯೊಂದರಿಂದ 12 ಲಕ್ಷ ರೂ. ಪಡೆದುಕೊಂಡು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರ ಪ್ರದೇಶದ ಮಾಜಿ ರಣಜಿ ಕ್ರಿಕೆಟಿಗ ನಾಗರಾಜು ಬುಡುಮೂರು ಎಂಬಾತನನ್ನು ಪೊಲೀಸರು ಬಂಧಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

Advertisement

ಘಟನೆ ಹಿನ್ನೆಲೆ: ಕಳೆದ ಡಿಸೆಂಬರ್‌ ನಲ್ಲಿ ಆಂಧ್ರ ಪ್ರದೇಶ ತಂಡದ ಮಾಜಿ ಕ್ರಿಕೆಟಿಗ ನಾಗರಾಜು ಬುಡುಮೂರು ಮುಂಬಯಿ ಮೂಲದ ಎಲೆಕ್ಟ್ರಾನಿಕ್ ಕಂಪನಿಯೊಂದಕ್ಕೆ ಕರೆ ಮಾಡಿ ತಾನು ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡು ರಾಜ್ಯದ ಯುವ ಕ್ರಿಕೆಟ್‌ ಆಟಗಾರನೊಬ್ಬನಿಗೆ ಪ್ರಾಯೋಜಕತ್ವ ಮಾಡಲು ನಿಮ್ಮ ಕಂಪೆನಿಯ ಸಹಾಯಬೇಕು ಎಂದು ಹೇಳಿ ಕಂಪೆನಿ ಸಿಬ್ಬಂದಿ ಅವರ ಮನವೊಲಿಸಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯೊಂದಿಗೆ ಇರುವ ನಕಲಿ ದಾಖಲಾತಿಯನ್ನು ಇಮೇಲ್‌ ಮಾಡಿದ್ದ

ಕ್ರಿಕೆಟ್‌ ಮಂಡಳಿಯ ಖಾತೆ ಎಂದು ಕಂಪೆನಿ 12 ಲಕ್ಷ ರೂ.ವನ್ನು ನಾಗರಾಜು ಬುಡುಮೂರು ಅವರು ಕೊಟ್ಟ ಖಾತೆಗೆ ವರ್ಗಾವಣೆ ಮಾಡುತ್ತದೆ. ಆದರೆ ಆದಾದ ಬಳಿಕ ಕ್ರಿಕೆಟ್‌ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ. ತಮಗೆ ವಂಚನೆ ಆಗಿದೆ ಎಂದು ಕಂಪೆನಿಗೆ ಅರಿವಾಗಿ ಪೊಲೀಸರಿಗೆ ದೂರು ನೀಡಿದೆ.

ಮುಂಬಯಿ ಸೈಬರ್‌ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ನಾಗರಾಜು ಬುಡುಮೂರುನನ್ನು ಆಂಧ್ರ ಪ್ರದೇಶದಲ್ಲಿ ಬಂಧಿಸಿ. ಆತನಿಂದ 7 ಲಕ್ಷ ರೂ.ವಶಕ್ಕೆ ಪಡೆದುಕೊಂಡಿದ್ದಾರೆ.

ಯಾರು ಈತ ನಾಗರಾಜು ಬುಡುಮೂರು?:

Advertisement

ನಾಗರಾಜು ನಾಗರಾಜು ಬುಡುಮೂರು 2014 -2016 ರವರೆಗೆ ಆಂಧ್ರದ ಪರವಾಗಿ ರಣಜಿಯನ್ನು ಆಡಿದ್ದಾರೆ. ಐಪಿಎಲ್‌ ನಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಸದಸ್ಯರಾಗಿದ್ದರು. 2018 ರ ಬಳಿಕ ಕ್ರಿಕೆಟ್‌ ನಿಂದ ಅವಕಾಶ ವಂಚಿತನಾದ ಬಳಿಕ ದುಬಾರಿ ಜೀವನವನ್ನು ನಡೆಸಲು ಸಾಧ್ಯವಾಗದೇ ಇದ್ದಾಗ, ನಾಗರಾಜ್‌ ಈ ದಾರಿಗೆ ಇಳಿದಿದ್ದ.

ಇದಲ್ಲದೇ ಈತನ ವಿರುದ್ಧ ಕನಿಷ್ಠ 60 ಕಂಪನಿಗಳಿಗೆ 3 ಕೋಟಿ ರೂ. ವಂಚನೆ ಮಾಡಿದ ಆರೋಪವಿದೆ.  ಆಂಧ್ರಪ್ರದೇಶ ಮತ್ತು ತೆಲಂಗಾಣದ ವ್ಯಾಪಾರ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಖ್ಯಾತನಾಮರ ಹೆಸರು ಹೇಳಿಕೊಂಡು ಅವರಿಂದ ಪ್ರಾಯೋಜಕತ್ವವನ್ನು ಪಡೆಯುವ ನೆಪದಿಂದ ಹಣ ಲೂಟಿ ಮಾಡಿ ವಂಚಿಸುತ್ತಿದ್ದ. ಈ ಹಿಂದೆ 10 ಪ್ರಕರಣಗಳಲ್ಲಿ ಅವರನ್ನು ಬಂಧಿಸಲಾಗಿತ್ತು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next