Advertisement

ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್

09:15 AM Jul 02, 2024 | Team Udayavani |

ಆಂಧ್ರಪ್ರದೇಶ: ಇತ್ತೀಚಿಗೆಗಷ್ಟೇ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪವನ್ ಕಲ್ಯಾಣ್ ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ ಅದರಂತೆ ಆಂಧ್ರ ಪ್ರದೇಶದ ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸಿ ತನ್ನ ಸಂಬಳ ಮತ್ತು ಕಚೇರಿಗೆ ಹೊಸ ಪೀಠೋಪಕರಣ ಸೇರಿದಂತೆ ಯಾವುದೇ ವಿಶೇಷ ಭತ್ಯೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

Advertisement

ಉಪಮುಖ್ಯಮಂತ್ರೀಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತನ್ನ ಕಚೇರಿಯನ್ನು ನವೀಕರಿಸುವ ಜೊತೆಗೆ ಹೊಸ ಪಿಠೋಪಕರಗಳನ್ನು ಅಳವಡಿಸುವ ಕುರಿತು ಅಧಿಕಾರಿಗಳು ಕೇಳಿದಾಗ ಸದ್ಯ ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಹಾಗಾಗಿ ಸದ್ಯಕ್ಕೆ ಯಾವುದೇ ಪೀಠೋಪಕರಣ ಸೇರಿದಂತೆ ಕಚೇರಿ ನವೀಕರಿಸುವ ಉದ್ದೇಶ ಇಲ್ಲ ಅದರ ಜೊತೆಗೆ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುವವರೆಗೆ ನಾನು ಸಂಬಳವನ್ನು ಪಡೆಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಹಾಗೇನಾದರೂ ಬೇಕಿದ್ದರೆ ನಾನೇ ತರುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಮೂರು ದಿನಗಳ ಕಾಲ ಸದನಕ್ಕೆ ಹಾಜರಾಗಿದ್ದಕ್ಕಾಗಿ 35,000 ರೂ.ಗಳ ಸಂಬಳಕ್ಕೆ ಸಂಬಂಧಿಸಿದ ದಾಖಲೆಗಳ ಮೇಲೆ ಸಹಿ ತೆಗೆದುಕೊಳ್ಳಲು ಸಚಿವಾಲಯದ ಅಧಿಕಾರಿಗಳು ಬಂದಿದ್ದರು, ಆದರೆ ನನಗೆ ಸಧ್ಯಕ್ಕೆ ಸಂಬಳ ಬೇಡ ಎಂದು ಹೇಳಿದ್ದೇನೆ ಪವನ್ ಕಲ್ಯಾಣ್ ಹೇಳಿದ್ದಾರೆ.

ಈ ಕುರಿತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಆಂಧ್ರದ ಉಪಮುಖ್ಯಮಂತ್ರಿಯಾಗಿರುವ ಪಾವಂ ಕಲ್ಯಾಣ್ ಅವರು ಪಂಚಾಯತ್ ರಾಜ್ ಇಲಾಖೆಯಲ್ಲಿ ಹಣದ ಕೊರತೆಇರುವ ನಿಟ್ಟಿನಲ್ಲಿ ತನ್ನ ಸಂಬಳವನ್ನು ಪಡೆದುಕೊಳ್ಳಲು ನಿರಾಕರಿಸಿದ್ದಾರೆ, ಅಲ್ಲದೆ ತಮ್ಮ ಕಚೇರಿಯನ್ನು ನವೀಕರಿಸುವುದು ಬೇಡವೆಂದು ಹೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Advertisement
Advertisement

Udayavani is now on Telegram. Click here to join our channel and stay updated with the latest news.

Next