Advertisement

ಆಂಧ್ರಪ್ರದೇಶ ಎಸಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ

03:11 PM May 21, 2018 | udayavani editorial |

ಹೊಸದಿಲ್ಲಿ : ಆಂಧ್ರಪ್ರದೇಶದ ಎಸಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಎರಡು ಬೋಗಿಗಳಿಗೆ ಗ್ವಾಲಿಯರ್‌ನಲ್ಲಿ ಬಿರ್ಲಾನಗರ ಸ್ಟೇಶನ್‌ ಬಳಿ ಬೆಂಕಿಹೊತ್ತಿಕೊಂಡ ಘಟನೆ ಇಂದು ಸೋಮವಾರ ಬೆಳಗ್ಗೆ ನಡೆದಿದೆ.

Advertisement

ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿವೆ ಆದರೆ ಯಾವುದೇ ಜೀವಹಾನಿ ಅಗಿಲ್ಲ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. 

ಗ್ವಾಲಿಯರ್‌ನ ಬಿರ್ಲಾ ನಗರ ನಿಲ್ದಾಣದ ಸಮೀಪ ಬೆಳಗ್ಗೆ 11.50ರ ಹೊತ್ತಿಗೆ ರೈಲು ಸಾಗುತ್ತಿದ್ದಾಗ ಅದರ ಬಿ6 ಸಂಖ್ಯೆಯ ಕೋಚ್‌ನಲ್ಲಿ ಬೆಂಕಿ ಉರಿಯುತ್ತಿರುವುದು ಕಂಡು ಬಂತು. 

ಹೈಟೆನ್‌ಶನ್‌ ವಯರ್‌ ರೈಲಿನ ಮೇಲೆ ಉರುಳಿ ಬಿದ್ದ ಪರಿಣಾಮವಾಗಿ ಬಿ6 ಮತ್ತು ಬಿ7 ಕೋಚ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ರೈಲ್ವೆ ಪಿಆರ್‌ಓ ಮನೋಜ್‌ ಕುಮಾರ್‌ ತಿಳಿಸಿದ್ದಾರೆ. 

ಕೂಡಲೇ ರೈಲನ್ನು ನಿಲ್ಲಿಸಿ ಬಿ6 ಮತ್ತು ಬಿ7 ಕೋಚ್‌ಗಳಲ್ಲಿನ ಪ್ರಯಾಣಿಕರನ್ನು ಗಾರ್ಡ್‌ಗಳು ಇತರ ಕೋಚ್‌ಗಳಿಗೆ ವರ್ಗಾಯಿಸಿದರು. 

Advertisement

ಇನ್ನೋರ್ವ ರೈಲ್ವೆ ಅಧಿಕಾರಿ ಅಮಿತ್‌ ಮಾಳವೀಯ ತಿಳಿಸಿರುವ ಪ್ರಕಾರ ಬೆಂಕಿ ಹೊತ್ತಿಕೊಂಡ ಎರಡು ಬೋಗಿಗಳನ್ನು ರೈಲಿನಿಂದ ಪ್ರತ್ಯೇಕಿಸಲಾಗಿ ಉಳಿದ ಬೋಗಿಗಳು ಗ್ವಾಲಿಯರ್‌ನತ್ತ ಸಾಗಿದವು. 

ಬೆಂಕಿಯನ್ನು ನಂದಿಸಲು ಒಡನೆಯೇ ಮೂರು ಅಗ್ನಿಶಾಮಕಗಳನ್ನು ಕಳುಹಿಸಲಾಯಿತು; ಅವುಗಳ ಜಂಟಿ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಂದಿಸಲಾಯಿತು.

ರೈಲು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಹೊಸದಿಲ್ಲಿಯ ಹಜರತ್‌ ನಿಜಾಮುದ್ದೀನ್‌ ನಿಲ್ದಾಣಕ್ಕೆ ಹೋಗುತ್ತಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next