Advertisement

ಕಾಯ್ದೆಯಂತೆ ಸೌಲಭ್ಯ ಕೇಳಿದ ಆಂಧ್ರ ಸಿಎಂ

12:28 PM Feb 19, 2018 | Team Udayavani |

ಬೆಂಗಳೂರು: ರಾಜ್ಯಗಳ ಪುನರ್‌ ವಿಂಗಡಣೆ ಕಾಯ್ದೆ ಅನ್ವಯ ಕೇಂದ್ರ ಸರ್ಕಾರ ಆಂಧ್ರ ಪ್ರದೇಶಕ್ಕೆ ನ್ಯಾಯ ನೀಡಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

Advertisement

ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಂಧ್ರಪ್ರದೇಶ ವಿಭಜನೆ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರನ್ನು 29 ಬಾರಿ ಭೇಟಿ ಮಾಡಿ, ಕಾಯ್ದೆ ಅನ್ವಯ ದೊರೆಯುವ ಸವಲತ್ತುಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ. ಸಂಸತ್ತನಲ್ಲೂ ಈ ಬಗ್ಗೆ ಭರವಸೆ ನೀಡಿರುವ ಕೇಂದ್ರ ಸರ್ಕಾರ, ಅಗತ್ಯ ಸೌಲಭ್ಯ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶಕ್ಕೆ ನೀಡಿರುವ ಭರವಸೆಯಂತೆ ಕೇಂದ್ರ ಸರ್ಕಾರ ನಡೆದುಕೊಂಡಿಲ್ಲ ಎಂದು ಆಂಧ್ರದ ಜನತೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅಕ್ಕಪಕ್ಕದ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳು ನಾಡಿನಲ್ಲಿ ಬೆಂಗಳೂರು ಮತ್ತು ಚೆನೈನಂತಹ ಮಹಾನಗರಗಳಿವೆ ಆದರೆ, ಆಂಧ್ರ ಪ್ರದೇಶಕ್ಕೆ ಯಾವುದೇ ರಾಜಧಾನಿಯಿಲ್ಲ ಹೀಗಾಗಿ ಅಮರಾವತಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದ ಸಹಾಯ ಹಸ್ತ ಬಯಸುತ್ತಿದ್ದೇನೆ ಎಂದು ಅವರು ಹೇಳಿದರು. 

ಆಂಧ್ರ ಪ್ರದೇಶ ವಿಭಜನೆಯಿಂದ ಆದಾಯ ಕೊರತೆಯಾಗಿದ್ದು, ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ, 35 ಸಾವಿರ ರೂ. ತಲಾ ಆದಾಯ ಕಡಿಮೆಯಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದರು. ಕೇಂದ್ರ ಸರ್ಕಾರದ  ನಿರ್ಲಕ್ಷ ಧೋರಣೆಯಿಂದ ಎನ್‌ಡಿಎಯಿಂದ ಹೊರ ಬರುವ ಬಗ್ಗೆ ಕೇಳಿದ ಪ್ರಶ್ನೆಗೆ ಕೆಲವು ಸಮಸ್ಯೆಗಳಿವೆ ಅವುಗಳನ್ನು ಪರಿಹರಿಸಿಕೊಳ್ಳಲು ನಾವು ಪ್ರಯತ್ನ ಮಾಡುತ್ತೇವೆ. ನಮ್ಮ ಪಕ್ಷದ ಸಂಸದರು ಕೇಂದ್ರ ಸಂಪುಟದಲ್ಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next