Advertisement

ಅಂಧೇರಿ ಶ್ರೀ ಲಕ್ಷ್ಮೀನಾರಾಯಣ ಮಂದಿರ: ವಾರ್ಷಿಕ ಪ್ರತಿಷ್ಠಾ ಮಹೋತ್ಸವ

03:12 PM Apr 08, 2021 | Team Udayavani |

ಮುಂಬಯಿ, ಎ. 7: ನಗರದ ತುಳು – ಕನ್ನಡಿಗರ ಹಿರಿಯ ಮತ್ತು ಪ್ರಥಮ ಧಾರ್ಮಿಕ ಸಂಸ್ಥೆ ಎಂದೆಣಿಸಿಕೊಂಡಿರುವ ಅಂಧೇರಿ ಪಶ್ಚಿಮ ವೀರದೇಸಾಯಿ ರೋಡ್‌ನ‌ ಶ್ರೀ ಲಕ್ಷ್ಮೀನಾರಾಯಣ ಮಂದಿರದ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ಮಾ. 29ರಂದು ಮಂದಿರದ ಪ್ರಧಾನ ಅರ್ಚಕರಾದ ವೇ| ಮೂ| ಗುರುಪ್ರಸಾದ್ ಭಟ್‌ ಅವರ ಪೌರೋಹಿತ್ಯದಲ್ಲಿ ನಡೆಯಿತು.

Advertisement

ಪೂಜಾ ಯಜಮಾನಿಕೆಯನ್ನು ಲೋಕನಾಥ ಪಿ. ಕಾಂಚನ್‌ ಅವರು ವಹಿಸಿದ್ದರು. ಬೆಳಗ್ಗೆ 8.30ರಿಂದ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ವಾಚನ, ಪ್ರಧಾನ ಹೋಮ, ನವಕಲಶ ಪೂಜೆ, ಪರಿವಾರ ಸಹಿತ ಶ್ರೀ ಲಕ್ಷ್ಮೀ ನಾರಾಯಣ ದೇವರಿಗೆ ಪಂಚಾಮೃತ ಮತ್ತು ಕಲಶಾಭಿಷೇಕ, ಮಹಾಪೂಜೆ ನಡೆಯಿತು. ಬಳಿಕ ಕುಂಟಾಡಿ ಸುರೇಶ್‌ ಭಟ್‌ ಅವರಿಂದ ಬಲಿ ಉತ್ಸವ, ಚೆಂಡೆ, ಜಾಗಟೆ, ಶಂಖ ನಾದದೊಂದಿಗೆ ಕುಣಿತ ಭಜನೆ, ಸಂಜೆ ರಂಗ ಪೂಜೆ, ಮಹಾಪೂಜೆ ನೆರವೇರಿತು.

ಜೀಟಿಗೆಯಲ್ಲಿ ವಾಸು ಎಸ್‌. ಉಪ್ಪೂರು ಮತ್ತು ಪುರಂದರ ಅಮೀನ್‌ ಅವರು ಸಹಕರಿಸಿದರು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಉತ್ಸವವನ್ನು
ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಉಪಾಧ್ಯಕ್ಷ ನಾಗೇಶ್‌ ಎಲ್‌. ಮೆಂಡನ್‌, ಜತೆ ಕಾರ್ಯದರ್ಶಿ ಹರಿಶ್ಚಂದ್ರ ಸಿ. ಕಾಂಚನ್‌, ಟ್ರಸ್ಟಿ ಗೋವಿಂದ ಎಸ್‌. ಪುತ್ರನ್‌, ಪ್ರಧಾನ ಕೋಶಾಧಿಕಾರಿ ಕೇಶವ ಪುತ್ರನ್‌, ಜತೆ ಕೋಶಾಧಿಕಾರಿ ಅಶೋಕ್ ಸುವರ್ಣ, ಸುರೇಂದ್ರ ಹಳೆಯಂಗಡಿ,
ಹರೀಶ್‌ ಪುತ್ರನ್‌, ಮೋಹನ್ ದಾಸ್‌ ಮೆಂಡನ್‌, ಜಗನ್ನಾಥ್‌ ಕಾಂಚನ್‌, ಭಕ್ತರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next