Advertisement

ಪೂರ್ವಜರು ಕಂಡ ಕನಸು ಸಾಕಾರ: ಪಾಟೀಲ

07:10 AM Mar 01, 2019 | |

ಇಂಡಿ: ನಮ್ಮ ಪೂರ್ವಜರು ಕಂಡ ಕನಸು ನನಸಾಗಿರುವ ಸಮಾಧಾನ ನನಗಿದೆ. 2013ರ ಚುನಾವಣೆಯಲ್ಲಿ ಆಯ್ಕೆಯಾದ ನಂತರ ಲಚ್ಯಾಣದ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಭೀಮಾಶಂಕರ ಸಕ್ಕರೆ ಕಾರ್ಖಾನೆ ಪ್ರಾರಂಭಿಸದಿದ್ದರೆ ರಾಜಕೀಯ ನಿವೃತ್ತಿಯಾಗುವೆ ಎಂದು ಪ್ರಮಾಣ ಮಾಡಿದ್ದೆ. ಅದರಂತೆ ಭೀಮಾಶಂಕರ ಸಹಕಾರಿ ಸಕ್ಕರೆ ಆರಂಭಿಸಿ ರೈತರ ಆಸ್ತಿಯನ್ನಾಗಿ ಮಾಡಿದ್ದೇನೆ ಎಂದು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನೂತನ ಅಧ್ಯಕ್ಷ, ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳೀದರು.

Advertisement

ತಾಲೂಕಿನ ಮರಗೂರ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮರಗೂರದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಬಹುದಿನಗಳಿಂದ ನನೆಗುದಿಗೆ ಬೀಳಲು ಅನೇಕ ಕಾರಣಗಳಿರಬಹುದು. ಯಾವುದೇ ಒಂದು
ಕೆಲಸಗಳು ಆಗಬೇಕಾದರೆ ಭಗವಂತನ ಕರುಣೆ ಇದ್ದಾಗ ಮಾತ್ರ ಸಾಧ್ಯ. ದೇವರ ಶಕ್ತಿ ಇಲ್ಲದೆ ಹುಲ್ಲು ಕಡ್ಡಿ ಅಲಗಾಡದು. ತಾಲೂಕಿನ ಸರ್ವ ಜನಾಂಗ ನೀಡಿರುವ ರಾಜಕೀಯ ಶಕ್ತಿಯಿಂದ ಇಂತಹ ಕಾರ್ಯ ಆಗಿದೆ ಎಂದು ಹೇಳಿದರು.
 
ಕಳೆದ ಅವಧಿಯಲ್ಲಿ ಆಗಿನ ಕಾಂಗ್ರೆಸ್‌ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಅಂದಿನ ಸಹಕಾರ ಸಚಿವ ಮಹಾದೇವ ಪ್ರಸಾದ ಅವರು ಸಹಾಯ ಮಾಡಿದ್ದಾರೆ. ಅಲ್ಲದೆ ಡಿಸಿಸಿ ಬ್ಯಾಂಕ್‌, ಅಪೆಕ್ಸ್‌ ಬ್ಯಾಂಕ್‌, ಭೀರೇಶ್ವರ ಕೋ ಆಪರೇಟಿವ್‌ ಬ್ಯಾಂಕ್‌ ಹೀಗೆ ಅನೇಕ ಕ್ಷೇತ್ರಗಳಿಂದ ಸಾಲ ಮಾಡಿ ಕಾರ್ಖಾನೆ ಸ್ಥಾಪಿಸಲಾಗಿದೆ. ಇದು ರಾಜ್ಯದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಂತೆ ಉತ್ತುಂಗ ಮಟ್ಟಕ್ಕೆ ಬೆಳೆಯಲಿ ಎಂಬ ಉದ್ದೇಶ ಹೊಂದಿದ್ದೇವೆ ಎಂದರು.

ತಾಪಂ ಅಧ್ಯಕ್ಷ ಶೇಖರ ನಾಯಕ, ಎಸ್‌. ಎಸ್‌. ಚನಗೊಂಡ, ನೂತನವಾಗಿ ಆಯ್ಕೆಯಾದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ವಿಶ್ವನಾಥ ಬಿರಾದಾರ, ನಿರ್ದೇಶಕರಾದ ಜಟ್ಟೆಪ್ಪ ರವಳಿ, ಸುರೇಶಗೌಡ ಪಾಟೀಲ, ಸಿದ್ದಣ್ಣಾ ಬಿರಾದಾರ, ಅಶೋಕ ಗಜಾಕೋಶ, ಅರ್ಜುನ
ನಾಯ್ಕೋಡಿ, ಮಲ್ಲನಗೌಡ ಪಾಟೀಲ, ಬಸಣ್ಣಾ ಕೋರೆ, ಧಾನಮ್ಮಾ ಬಿರಾದಾರ, ಲಲಿತಾ ನಡಗೇರಿ, ಸಂಬಾಜಿರಾವ ಮಿಸಾಳೆ, ಎಂ.ಡಿ. ಅಶೋಕ ಮೂರಬ, ವಿಶೇಷಾಧಿಕಾರಿ ಮಲ್ಲು, ಚಿದಾನಂದ ನಿಂಬಾಳ, ಭೀಮಾಶಂಕರ ಮುರಗುಂಡಿ, ಪ್ರಶಾಂತ ಕಾಳೆ, ಜಾವೀದ ಮೋಮಿನ, ಧನರಾಜ ಮುಜಗೊಂಡ, ಸದಾಶಿವ ಪ್ಯಾಟಿ, ಮಹೇಶ ಹೊನ್ನಬಿಂದಗಿ, ಅವಿನಾಶ ಬಗಲಿ, ಜಬ್ಬರಣ್ಣಾ ಅರಬ, ಅಜೀತ ಧನಶೆಟ್ಟಿ, ಧರ್ಮು ಸಾಲೋಟಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next