Advertisement

5 ರಲ್ಲಿ 1 ಬೆಸ್ಟ್‌ ಬಸ್‌ ನಿರ್ವಾಹಕ, ಚಾಲಕರಲ್ಲಿ ಕ್ಯಾನ್ಸರ್‌ ಪತ್ತೆ?

10:02 AM May 07, 2019 | Team Udayavani |

ಮುಂಬಯಿ: ಐದರಲ್ಲಿ ಒಂದು ಬೆಸ್ಟ್‌ ಬಸ್‌ನ ನಿರ್ವಾಹಕ ಮತ್ತು ಚಾಲಕರಲ್ಲಿ ಬಾಯಿ ಮತ್ತು ನಾಲಗೆಯ ಪೂರ್ವ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇತ್ತೀಚೆಗೆ ನಡೆಸಿದ ಅಧ್ಯಯನದಿಂದ 4,000 ಸಾರ್ವಜನಿಕ ಸಾರಿಗೆ ಬಸ್‌ ಉದ್ಯೋಗಿಗಳಲ್ಲಿ ಕ್ಯಾನ್ಸರ್‌ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

Advertisement

ಕಳೆದ 3 ವರ್ಷಗಳಿಂದ ಬೃಹನ್ಮುಂಬಯಿ ಎಲೆಕ್ಟ್ರಿಕ್‌ ಸಪ್ಲೈ ಆ್ಯಂಡ್‌ ಟ್ರಾನ್ಸ್‌ಪೊàರ್ಟ್‌ (ಬೆಸ್ಟ್‌) ಸಂಸ್ಥೆಯು ತನ್ನ ಸಿಬಂದಿಗಳಿಗೆ ತಂಬಾಕು ಸೇವನೆ ಬಿಡುವಂತೆ ನಡೆಸಿದ ಅಭಿಯಾನದ 3 ವರ್ಷಗಳ ಪ್ರಥಮ ಭಾಗ ಇದಾಗಿದೆ. ತಂಬಾಕಿನ ಹಾನಿಕಾರಕ ಪರಿಣಾಮಗಳ ಬಗ್ಗೆ ಸಿಬಂದಿಗಳ ನಡುವೆ ಜ್ಞಾನ ಮತ್ತು ವರ್ತನೆಗಳನ್ನು ಅರ್ಥೈಯಿಸಲು ಈ ಅಭಿಯಾನವನ್ನು ನಡೆಸಲಾಗಿದ್ದು, 15,000 ನೌಕರರಿಗೆ ತಂಬಾಕು ಉತ್ಪನ್ನಗಳನ್ನು ಬಳಸುವುದನ್ನು ಬಿಟ್ಟುಬಿಡಲು ಸಲಹೆ ನೀಡಲಾಗಿದ್ದು, ಕನಿಷ್ಠ 5,000 ಮಂದಿ ತಂಬಾಕು ಸೇವೆಯಿಂದ ಮುಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

4,000 ನೌಕರರಲ್ಲಿ ಕ್ಯಾನ್ಸರ್‌ ಮಾದರಿಯನ್ನು ಕಂಡು ಹಿಡಿಯಲಾಗಿದ್ದು, ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ನಲ್ಲಿ ಪ್ರಕಟವಾದ ಸಮೀಕ್ಷೆಯ ವರದಿಯ ಪ್ರಕಾರ ಪರೀಕ್ಷೆಗೊಳಪಟ್ಟ 4,000 ಮಂದಿಯಲ್ಲಿ 743 ಮಂದಿ ಪ್ರಾಥಮಿಕ ಮೌಲ್ಯಮಾಪನದಲ್ಲಿ ಮೌಖೀಕ ಪೂರ್ವ-ಕ್ಯಾನ್ಸರ್‌ಗಳಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ.

ಕ್ಯಾನ್ಸರ್‌ ಮುನ್ಸೂಚಕ ಸ್ಥಿತಿಯಲ್ಲಿರುವ ರೋಗಿಗಳು ಮುಂದೆ ಕ್ಯಾನ್ಸರ್‌ಕಾರಕ ಗೆಡ್ಡೆಗಳಿಗೆ ಬದಲಾಗಬಲ್ಲ ಕೋಶಗಳ ಬೆಳವಣಿಗೆಯ ಕಾರಣದಿಂದ ಬಾಯಿಯ ಕ್ಯಾನ್ಸರ್‌ಗಳಿಗೆ ಹೆಚ್ಚು ಒಳಗಾಗುತ್ತಾರೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಸ್ಟ್‌ ಉದ್ಯೋಗಿಗಳ ಪೈಕಿ ಶೇ.42ರಷ್ಟು ಸಿಬಂದಿಗಳು ತಂಬಾಕು ವ್ಯಸನಿಯಾಗಿ¨ªಾರೆಂದು ಅಧ್ಯಯನಗಳು ಕಂಡುಕೊಂಡಿದ್ದು, ಶೇ. 90 ರಷ್ಟು ಮಂದಿ ಹೊಗೆಯಾಡದ ತಂಬಾಕು ಸೇವನೆಯ ಮೇಲೆ ಅವಲಂಬಿತರಾಗಿ¨ªಾರೆ. ತಂಬಾಕು ಉತ್ಪಾದನೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದರೆ, ಜಾಗತಿಕ ಮಟ್ಟದಲ್ಲಿ ತಂಬಾಕು ಸೇವನೆಯಲ್ಲಿ ಭಾರತವು ಎರಡನೇ ದೊಡ್ಡ ಗ್ರಾಹಕ ದೇಶವಾಗಿದೆ.

Advertisement

ಈ ಅಧ್ಯಯನದ ಮುಖ್ಯಸ್ಥ ಡಾ| ಗೌರವಿ ಮಿಶ್ರಾ ಅವರು, ಈ ಅಧ್ಯಯನದಲ್ಲಿ ದಾಖಲಾದ ಉದ್ಯೋಗಿಗಳಿಗೆ ಮೌಖೀಕ ಕ್ಯಾನ್ಸರ್‌ಗಳಿಗೆ ತಪಾಸಣೆ ಮಾಡುವ ಮೊದಲು ವಿವರವಾದ ಆರೋಗ್ಯ ಶಿಕ್ಷಣವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಭಾಗವಹಿಸುವವರ ಪೈಕಿ 1,691 ಮಂದಿ ತಂಬಾಕು ಬಳಕೆದಾರರಾಗಿದ್ದು, ಶೇ.92.31ರಷ್ಟು ಧೂಮಪಾನವಿಲ್ಲದ ತಂಬಾಕು ಬಳಕೆದಾರರಿದ್ದಾರೆ. ಪ್ರಾಥಮಿಕ ಮೌಲ್ಯ ಮಾಪನದಲ್ಲಿ ಮೌಖೀಕ ಪೂರ್ವ-ಕ್ಯಾನ್ಸರ್‌ಗಳಿಗೆ 743 ಮಂದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅವರ ರೋಗಲಕ್ಷಣಗಳನ್ನು ಅರಿತುಕೊಂಡು 592 ಮಂದಿಯನ್ನು ಉನ್ನತ ವೈದ್ಯಕೀಯ ಪರೀಕ್ಷೆಗೆ ಉÇÉೇಖೀಸಲಾಗಿದೆ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಒಂದು ಭಾಗವಾಗಿ, ತಂಬಾಕು ತ್ಯಜಿಸುವ ಬೆಸ್ಟ್‌ ನೌಕರರನ್ನು ಬೆಸ್ಟ್‌ ಸಂಸ್ಥೆಯು ಸಮ್ಮಾನಿಸುತ್ತಿದೆ. ನಿಕೋಟಿನ್‌ ರಿಪ್ಲೇಸೆ¾ಂಟ್‌ ಥೆರಪಿಯನ್ನು ನಾವು ಸುಮಾರು 1,400 ಉದ್ಯೋಗಿಗಳಿಗೆ ಮಾಡಿದ್ದೇವೆ. ವಾರಕ್ಕೊಮ್ಮೆ ಸಮಾಲೋಚನಾ, ಪರಸ್ಪರ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿ ಮತ್ತೆ ಅವರು ತಂಬಾಕು ಸೇವನೆಗೆ ಮರಳಿ ಹೋಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಡಾ| ಸಿಂಗಲ್‌ ಹೇಳಿದರು. 2008, ಅಕ್ಟೋಬರ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿರುವುದಲ್ಲದೆ, ಸಾರ್ವಜನಿಕ ಸಾರಿಗೆ ಬಸ್‌ ಆವರಣದಲ್ಲೂ ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next