Advertisement

ಅನನ್ಯಾ ಕಂಠಸಿರಿಯಲ್ಲಿ ‘ಪೆಂಟಗನ್‌’ಥೀಮ್‌ ಸಾಂಗ್

02:30 PM Apr 03, 2023 | Team Udayavani |

ಗುರು ದೇಶಪಾಂಡೆ ಸಾರಥ್ಯದಲ್ಲಿ ಮೂಡಿ ಬರುತ್ತಿರುವ “ಪೆಂಟಗನ್‌’ ಸಿನಿಮಾದ ಥೀಮ್‌ ಸಾಂಗ್‌ ಬಿಡುಗಡೆಯಾಗಿದೆ. ನಿರ್ದೇಶಕ ರಾಘು ಶಿವಮೊಗ್ಗ ಸಾಹಿತ್ಯದಲ್ಲಿ ಮೂಡಿ ಬಂದಿರುವ ಈ ಗೀತೆಗೆ ಗಾಯಕಿ ಅನನ್ಯಾ ಭಟ್‌ ಧ್ವನಿಯಾಗಿದ್ದು, ಮಣಿಕಾಂತ್‌ ಕದ್ರಿ ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ.

Advertisement

ಅಂದಹಾಗೆ, “ಪೆಂಟಗನ್‌’ ಸಿನಿಮಾ ಐದು ಜನ ನಿರ್ದೇಶಕರು, ಐದು ಕಥೆಗಳು, ಐದು ಜನ ಬರಹಗಾರರು, ಐದು ಹೀರೋಗಳ ಜೊತೆಗೆ ಐದು ವಿಷಯಗಳನ್ನು ಇಟ್ಟುಕೊಂಡು ತೆರೆಗೆ ಬರುತ್ತಿದೆ.

“ಸಿನಿಮಾದಲ್ಲಿರುವ ಈ ಐದು ಕಥೆಗಳನ್ನು, ಅದರ ವಿಷಯಗಳನ್ನು ಬೆಸೆಯುವಂತಹ ಮತ್ತು ಆ ಆಶಯವನ್ನು ಹಿಡಿದಿಡುವಂತಹ ಗೀತೆ ಇದಾಗಿದೆ. ಎಲ್ಲ ವಯಸ್ಸಿನವರಿಗೂ ಇಷ್ಟವಾಗುವಂತಹ ಕಥೆಗಳನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಸಾಕಷ್ಟು ಪ್ರಯೋಗಗಳನ್ನು ಮಾಡಲಾಗಿದೆ. ಹಾಗಂತ ಇದು ಕೇವಲ ಪ್ರಯೋಗಾತ್ಮಕ ಸಿನಿಮಾವಲ್ಲ, ಪಕ್ಕಾ ಕಮರ್ಷಿಯಲ್‌ ಚಿತ್ರ. ನೋಡುಗನಿಗೆ ಏನೆಲ್ಲ ಬೇಕಿದೆಯೋ ಎಲ್ಲವನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಹೊಸ ಆಲೋಚನೆಯ ನಿರ್ದೇಶಕರು, ಬರಹಗಾರರು ಮತ್ತು ಹೊಸ ಕಲಾವಿದರು ಕೂಡ ಸಿನಿಮಾದ ಭಾಗವಾಗಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಈ ಸಿನಿಮಾ ಹೊಸ ಅನುಭವನ್ನು ನೀಡಲಿದೆ’ ಎಂಬುದು “ಪೆಂಟಗನ್‌’ ನಿರ್ಮಾಪಕ ಕಂ ನಿರ್ದೇಶಕ ಗುರು ದೇಶಪಾಂಡೆ ಮಾತು

Advertisement

Udayavani is now on Telegram. Click here to join our channel and stay updated with the latest news.

Next