Advertisement

ಅನಂತ್‌ನಾಗ್‌ ಹೇಳಿದ “ಇಂಗ್ಲೀಷ್‌’ಪಾಠ

10:38 PM Aug 21, 2019 | mahesh |

ಇಂಗ್ಲಿಷ್‌ ಗೊತ್ತಿಲ್ಲದ ಕಾರಣಕ್ಕೆ ಪ್ರೀತಿಯಿಂದ ದೂರವಿರಬೇಕಾದ ಪರಿಸ್ಥಿತಿಯನ್ನು ಎದುರಿಸುವ ಯುವಕನೊಬ್ಬನ ಸುತ್ತ ಹೆಣೆದ ಕಥೆಯನ್ನು ಹೊಂದಿರುವ ಸಿನೆಮಾವೇ ಇಂಗ್ಲೀಷ್‌. ಮಾಲ್ನಲ್ಲಿ ವೇಷ ಹಾಕಿ ಕುಣಿಯುವ ಯುವಕನೋರ್ವನಿಗೆ ಯುವತಿಯಲ್ಲಿ ಪ್ರೀತಿ ಮೂಡುತ್ತದೆ. ಆದರೆ ಆಕೆ ಇಂಗ್ಲಿಷ್‌ ಕಲಿತವಳು, ಈತನಿಗೆ ಇಂಗ್ಲಿಷ್‌ ಗೊತ್ತಿರುವುದಿಲ್ಲ. ಆತನಿಗೆ ಇಂಗ್ಲಿಷ್‌ ಗೊತ್ತಿಲ್ಲ ಎಂದು ಅವಳು ಇವನಿಂದ ದೂರವಾಗಲು ಪ್ರಯತ್ನಿಸುತ್ತಾಳೆ. ಇದರಿಂದ ಬೇಸರಗೊಳ್ಳುವ ಆತ, ತನ್ನ ಗೆಳೆಯರ ಸಹಾಯ ಪಡೆದು ಹೇಗಾದರೂ ಮಾಡಿ ಇಂಗ್ಲಿಷ್‌ ಕಲಿಯಬೇಕು ಎಂದು ಪಣ ತೊಡುತ್ತಾನೆ. ಅದಕ್ಕಾಗಿ ತೀವ್ರ ಶ್ರಮಪಡುತ್ತಾನೆ. ಇದರಿಂದ ಆಕೆಗೆ ಯುವಕನ ಮೇಲೆ ಪ್ರೀತಿ ಮೂಡುತ್ತದೆ. ಆದರೆ ಆಕೆಯ ಮನೆಯವರು ಆತನನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಾರೆ. ಬಳಿಕ ಮತ್ತಷ್ಟು ಸಾಧನೆ ಮಾಡಿ ಅವರ ಮನವೊಲಿಸುವಲ್ಲೂ ಆತ ಯಶಸ್ವಿಯಾಗುತ್ತಾನೆ. ಇವೆಲ್ಲವುಗಳ ಹಿಂದಿರುವುದು ಇಂಗ್ಲಿಷ್‌!

Advertisement

ಸೂರಜ್‌ ಶೆಟ್ಟಿ ನಿರ್ದೇಶನ, ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ನಿರ್ಮಾಣದ ‘ಇಂಗ್ಲಿಷ್‌’ ಸಿನೆಮಾ ಚಿತ್ರೀಕರಣ ಪೂರ್ಣಗೊಳಿಸಿದೆ. ಇದರಲ್ಲಿ ಖ್ಯಾತ ನಟ ಅನಂತನಾಗ್‌ ಅವರು ನಟಿಸಿರುವುದು ಚಿತ್ರದ ಬಹುದೊಡ್ಡ ವಿಶೇಷ.

ಪೃಥ್ವಿ ಅಂಬಾರ್‌, ನವ್ಯಾ ಪೂಜಾರಿ, ನವೀನ್‌ ಡಿ. ಪಡೀಲ್, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ, ದೀಪಕ್‌ ರೈ ಪಾಣಾಜೆ, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ರವಿ ರಾಮಕುಂಜ ಮುಂತಾದವರು ತಾರಾಗಣದಲ್ಲಿರುವ ಈ ಸಿನೆಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಸೂರಜ್‌ ಶೆಟ್ಟಿ ಅವರದ್ದು. ಶಶಿರಾಜ್‌ ಕಾವೂರು ಮತ್ತು ಅರ್ಜುನ್‌ ಲೂಯಿಸ್‌ ಅವರ ಸಾಹಿತ್ಯವಿದ್ದು, ಛಾಯಾಚಿತ್ರಗ್ರಹಣದಲ್ಲಿ ಕೃಷ್ಣ ಸಾರಥಿ, ಮನು ಶೇರಿಗಾರ ಸಂಕಲನವಿದೆ. ಸಂಗೀತದಲ್ಲಿ ಮಣಿಕಾಂತ್‌ ಕೊಡುಗೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next