Advertisement

Anantnag; ಲಷ್ಕರ್ ಕಮಾಂಡರ್ ಸೇರಿ ಇಬ್ಬರು ಉಗ್ರರನ್ನು ಸುತ್ತುವರಿದ ಭದ್ರತಾ ಪಡೆಗಳು

12:31 PM Sep 14, 2023 | Team Udayavani |

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶದಲ್ಲಿ ಗುರುವಾರ ನಡೆದ ಭದ್ರತಾ ಪಡೆಗಳ ಎನ್ ಕೌಂಟರ್ ನಲ್ಲಿ ಲಷ್ಕರ್ ಎ ತೊಯಿಬಾ ಕಮಾಂಡರ್ ಉಜೈರ್ ಖಾನ್ ಸೇರಿ ಇಬ್ಬರು ಉಗ್ರರು ಸಿಕ್ಕಿ ಬಿದ್ದಿದ್ದಾರೆ.

Advertisement

ಬುಧವಾರ ಆರಂಭವಾದ ಕೋಕರ್ನಾಗ್ ಎನ್‌ ಕೌಂಟರ್‌ ನಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನಕ್ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಭಟ್ ಹುತಾತ್ಮರಾಗಿದ್ದರು.

ಇದನ್ನೂ ಓದಿ:Asia Cup 2023; ಗಿಲ್, ರೋಹಿತ್, ವಿರಾಟ್, ರಾಹುಲ್ ಔಟಾದ ರೀತಿಗೆ ಗಂಭೀರ್ ಅಸಮಾಧಾನ

“ಈ ನಡೆಯುತ್ತಿರುವ ಕಾರ್ಯಾಚರಣೆಯ ಸಮಯದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನಕ್ ಮತ್ತು ಡಿಎಸ್‌ಪಿ ಹುಮಾಯೂನ್ ಭಟ್ ಅವರ ಅಚಲ ಶೌರ್ಯಕ್ಕೆ ಗೌರವಪೂರ್ವಕ ಶ್ರದ್ಧಾಂಜಲಿ. ಉಝೈರ್ ಖಾನ್ ಸೇರಿದಂತೆ 2 ಎಲ್‌ ಇಟಿ ಭಯೋತ್ಪಾದಕರನ್ನು ಸುತ್ತುವರೆದಿರುವ ನಮ್ಮ ಪಡೆಗಳು ಅಚಲ ಸಂಕಲ್ಪದೊಂದಿಗೆ ಮುಂದುವರಿಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next