Advertisement

ಅನಂತ ಬದುಕಿನ ಚಿತ್ರಣ: ರಿಷಬ್‌ ಶೆಟ್ಟಿ ಸಾರಥ್ಯದಲ್ಲಿ ಅನಂತನಾಗ್‌ ಸಿನಿಜೀವನದ ಸಾಕ್ಷ್ಯಚಿತ್ರ

08:42 AM Aug 04, 2021 | Team Udayavani |

ಬೆಂಗಳೂರು: ಕನ್ನಡದ ಹಿರಿಯ ನಟ ಅನಂತನಾಗ್‌ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗುತ್ತಿದ್ದು, ಅಭಿಮಾನಿಗಳ ಜೊತೆಗೆ ತಾರೆಯರು ಕೂಡ ಈ ಅಭಿಯಾನಕ್ಕೆಕೈ ಜೋಡಿಸುತ್ತಿದ್ದಾರೆ. ಈಗಾಗಲೇ ರಕ್ಷಿತ್‌ ಶೆಟ್ಟಿ, ಪುನೀತ್‌ ರಾಜಕುಮಾರ್‌, ಯಶ್‌, ದುನಿಯಾ ವಿಜಯ್‌ ಹೀಗೆ ಕನ್ನಡದ ಅನೇಕ ಸ್ಟಾರ್‌ ನಟರು ಅಪ್ರತಿಮ ನಟ ಅನಂತನಾಗ್‌ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ಇದೇ ವೇಳೆ ನಟ ಕಂ ನಿರ್ದೇಶಕ ರಿಷಬ್‌ ಶೆಟ್ಟಿ ಮತ್ತು ತಂಡ ಅನಂತನಾಗ್‌ ಅವರ ಜೀವನ ಮತ್ತು ಸಿನಿ ಸಾಧನೆಯನ್ನು ಬಿಂಬಿಸುವ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದು, ಈ ಸಾಕ್ಷ್ಯಚಿತ್ರದ ಮೂಲಕ ಅಪರೂಪದ ಕಲಾವಿದ ಅನಂತನಾಗ್‌ ಅವರ ಸಿನಿಮಾ ಯಾನವನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡಲಾಗಿದೆ.

ಅನಂತನಾಗ್‌ ಅವರ ಹುಟ್ಟು, ಜೀವನ, ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಹೀಗೆ ಅನೇಕ ವಿಷಯಗಳ ಮೇಲೆ ಈ ಸಾಕ್ಷ್ಯಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಇನ್ನು ಈ ಸಾಕ್ಷ್ಯಚಿತ್ರವನ್ನು ರಿಷಬ್‌ ಶೆಟ್ಟಿ ಫಿಲಂಸ್‌ ಯೂ-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಸಾಕ್ಷ್ಯಚಿತ್ರಕ್ಕೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳಿಂದ ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next