ಸಂಘದ ನಿಯೋಗವು ಸಂಸದ ನಳಿನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ಕಾವೂರಿನ ಕುದುರೆಮುಖ ಅತಿಥಿ
ಗೃಹದಲ್ಲಿ ಭೇಟಿಯಾಯಿತು.
Advertisement
ಸಂಸ್ಥೆಯ ಅಭಿವೃದ್ಧಿ ಹೊಸ ಉದ್ಯೋಗಾವಕಾಶಗಳ ಸೃಷ್ಟಿ ಮಾಡುವ ಬಗ್ಗೆ, ಕೌಶಲಯುತ ಕಾರ್ಮಿಕರ ನೇಮಕಾತಿ, ಕಾರ್ಮಿಕರ ಮಕ್ಕಳಿಗೆ ಮೀಸಲಾತಿ ಮೊದಲಾದ ಬೇಡಿಕೆಗಳ ಬಗ್ಗೆ ಮನವಿಯನ್ನು ಸಲ್ಲಿಸಲಾಯಿತು. ಪ್ರಧಾನ ಮಂತ್ರಿಗಳ ಸ್ಕಿಲ್ ಇಂಡಿಯಾ ಯೋಜನೆಯಲ್ಲಿ ಈಗಾಗಲೇ ಸಂಸ್ಥೆಯು ತೊಡಗಿಸಿಕೊಂಡಿದ್ದು ಇದನ್ನು ಇನ್ನೂ ಉತ್ತಮ ರೀತಿಯಲ್ಲಿ ಬಳಸಿಕೊಂಡು ಉದ್ಯೋಗ ಸೃಷ್ಟಿ ಮಾಡುವಂತೆ ಒತ್ತಾಯಿಸಲಾಯಿತು.