Advertisement

Anant Nag; ಆಟ “ಅವನದು’…ಅಲೆದಾಟ ನಮ್ಮದು !

12:28 AM Aug 20, 2023 | Team Udayavani |

75 ನೇ ವಯಸ್ಸಿನಲ್ಲೂ 25 ವರ್ಷದ ಉತ್ಸಾಹ- ಹುಮ್ಮಸ್ಸು ಉಳಿಸಿಕೊಂಡವರು ನಟ ಅನಂತನಾಗ್‌. ಅವರ ಚಿತ್ರ ಬದುಕಿಗೆ ಈಗ 50 ವರ್ಷ. ವೃತ್ತಿ, ಬದುಕು, ಸಿನೆಮಾ, ಸಾಹಿತ್ಯ, ರಾಜಕೀಯ ಮುಂತಾದ ಸಂಗತಿಗಳ ಕುರಿತು ಅವರಿಲ್ಲಿ ಮಾತಾಡಿದ್ದಾರೆ…

Advertisement

ಸಂದರ್ಶನ: ಕುಸುಮಾ ಆಯರಹಳ್ಳಿ

ಸರ್‌, ಕಳೆದ 75 ವರ್ಷಗಳಲ್ಲಿ ನೀವು ನೋಡಿದ 75 ಮಳೆಗಾಲಗಳಲ್ಲಿ ಮರೆಯಲಾರದ ಮಳೆಗಾಲ ಯಾವುದು?
– ನಾನು ಬೆಳೆದದ್ದು ಕರಾವಳಿ. ಹಾಗಾಗಿ ಮಳೆಗಾಲ ಯಾವತ್ತಿಗೂ ಇಷ್ಟ. ಎಷ್ಟು ನೋಡಿದರೂ ನೋಡಬೇಕೆನಿಸುವ ಸಮುದ್ರದ ಹಾಗೆ, ನನಗೆ ಮಳೆಯನ್ನು ಎಷ್ಟು ನೋಡಿದರೂ ಸಾಕೆನಿಸುವುದಿಲ್ಲ. 75 ಆಗುವಾಗಲೂ ಮಳೆ ನೋಡ್ತಾ ಇದ್ರೆ ಅಷ್ಟೇ ಸಾಕೇನೋ ಅನಿಸುತ್ತೆ.

ನಿಮ್ಮ ಸಿನೆಮಾ ಪ್ರಯಣಕ್ಕೆ 50. ಬದುಕಿಗೆ 75. ಈ ಹೊತ್ತಲ್ಲಿ ತಮ್ಮ ಶಂಕರ್‌ ನಾಗ್‌ರನ್ನು ಹೇಗೆ ನೆನಪಿಸಿಕೊಳ್ತೀರಿ?
– ನಾನು ಬೆಳೆದ ವಾತಾವರಣದಲ್ಲಿ ಎಲ್ಲವೂ ಭಗವಂತನ ಕೈವಾಡ ಅಂತ ನಂಬಿದ್ದೇನೆ. ಕರ್ಮಸಿದ್ಧಾಂತದಲ್ಲಿ ನನ್ನ ನಂಬಿಕೆ. ಹಾಗಾಗಿ ಇದೆಲ್ಲವನ್ನೂ ನಾವು ಸ್ವೀಕರಿಸಲೇಬೇಕು. ಸಾವಿನ ದುಃಖಗಳಲ್ಲಿ ಮುಳುಗಿದರೆ ಬದುಕಿಲ್ಲ. ಹೊರಬರುವುದು ಸಹಜ ಕ್ರಿಯೆ. ಶ್ಮಶಾನ ವೈರಾಗ್ಯದ ಸ್ಥಿತಿಯಿಂದ ಹೊರಬರಲೇಬೇಕು. ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ಆಗ ನಾನು “ಶಂಕರನನ್ನು ತೆಗೆದುಕೊಂಡ ಹೋದ ಆ ಭಗವಂತನನ್ನು ನಾನು ಕ್ಷಮಿಸೋದಿಲ್ಲ’ ಅಂದಿ¨ªೆ. ಆಮೇಲೆ ಬಹಳ ಯೋಚಿಸಿದೆ. ದೇವರನ್ನು ಕ್ಷಮಿಸಲು ನಾನು ಯಾರು? ಏನಾಗಬೇಕಿತ್ತೋ ಅದಾಗಿದೆ ಅನಿಸಿತು.

ನಟನಾಗಿ ಯಾವಾಗಲೂ ನಿಮ್ಮ ಬೇಡಿಕೆ ಕಡಿಮೆ ಆಗಿಲ್ಲ. ಇದಕ್ಕೆ ನೀವು ಕಂಡುಕೊಂಡ ಸೂತ್ರ ಯಾವುದು?
– ಸಿಂಪಲ್ …. ನಾನು ನಾನಲ್ಲ. ಆ ಪಾತ್ರ. ಪಾತ್ರದೊಳಗೆ ಎಷ್ಟು ನನ್ನ ಅಹಂ ಬಿಟ್ಟು ಪರಕಾಯಪ್ರವೇಶ ಮಾಡ್ತೀನೋ, ಕತೆ ಬರೆದವರ ಪಾತ್ರವಾಗ್ತೀನೋ, ಬೇರೆ ವ್ಯಕ್ತಿತ್ವವಾಗ್ತಿàನೋ ಆಗ ಪಾತ್ರ ಗೆಲ್ಲತ್ತೆ. ನನ್ನನ್ನು ತೆಗೆದುಹಾಕಿ ಇನ್ನೊಬ್ಬನ ನಕಲಾಗ್ತೀನಿ.

Advertisement

ಈ ನಾಡು ನಿಮಗೆ ಪ್ರೀತಿ, ಖ್ಯಾತಿ, ಜತೆ ಗೊಂದಿಷ್ಟು ಟೀಕೆ- ಟಿಪ್ಪಣಿ ಎಲ್ಲವನ್ನೂ ಕೊಟ್ಟಿದೆ. ಈ ಸುದೀರ್ಘ‌ ಪ್ರಯಾಣ ಕೊಟ್ಟ ಅರಿವು ಯಾವುದು?
– ಇಷ್ಟೆಲ್ಲ ಆಗಿದೆ ನಿಜ. ಆದರೆ ಇದನ್ನು ನಾನು ಮಾಡಿದೆ ಅಂತ ಹೇಗೆ ಹೇಳ್ಳೋದು? ಈಗಷ್ಟೆ ಒಂದು ಪುಸ್ತಕ ಓದಿದೆ. ಅದರಲ್ಲೂ ಅದೇ ಇದೆ. ಯಾವುದನ್ನೂ ನಾನು ಮಾಡಿದೆ ಅಂದ್ಕೋ ಬೇಡ. ನಡೆಸೋ ಅವನಿಲ್ಲದಿದ್ದರೆ ಇದಾಗ್ತಿರಲಿಲ್ಲ ಅನಿಸತ್ತೆ.
(ಸಂದರ್ಶನದ ಪೂರ್ಣಪಾಠಕ್ಕೆ ಉದಯವಾಣಿ ಸಾಪ್ತಾಹಿಕ ಸಂಪದ ಇ ಪೇಪರ್‌ ಓದಿರಿ)

Advertisement

Udayavani is now on Telegram. Click here to join our channel and stay updated with the latest news.

Next