Advertisement

ಆನಂದಪುರ: ಸಂಭ್ರಮದ ವೀರಾಂಜನೇಯ ರಥೋತ್ಸವ

05:05 PM Jan 27, 2020 | Naveen |

ಆನಂದಪುರ: ಧಾರ್ಮಿಕ ಕಾರ್ಯಕ್ರಮಗಳು ಅವಿರತವಾಗಿ ನಡೆಯುತ್ತಿದ್ದರೆ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಜನರ ನಡುವೆ ಪರಸ್ಪರ ಸಹಕಾರ, ಅನ್ಯೋನ್ಯತೆಯ ಭಾವ ಜಾಗೃತವಾಗುತ್ತದೆ ಎಂದು ಸಿಗಂದೂರು ಚೌಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಡಾ| ರಾಮಪ್ಪ ಹೇಳಿದರು.

Advertisement

ಇಲ್ಲಿನ ಬಸವನ ಬೀದಿಯ ಶ್ರೀ ವೀರಾಂಜನೇಯ ದೇವಾಲಯದಲ್ಲಿ ನಡೆದ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇವಾಲಯದ ವತಿಯಿಂದ ನಿರ್ಮಾಣವಾಗುತ್ತಿರುವ ಸುಂದರ ಸಮುದಾಯ ಭವನ ಆದಷ್ಟು ಬೇಗ ಲೋಕಾರ್ಪಣೆಗೊಳ್ಳಲಿ. ದೇವಾಲಯ ಸಮಿತಿಯವರ ಶ್ರಮದಿಂದ ಇನ್ನಷ್ಟು ಸಾಮಾಜಿಕ- ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು.

ವೀರಾಂಜನೇಯ ದೇವಾಲಯದ ಅಧ್ಯಕ್ಷ ಹಾಲಪ್ಪ, ಕಾರ್ಯದರ್ಶಿ ಜಗನ್ನಾಥ್‌, ಉಮಾಮಹೇಶ್ವರ ದೇವಾಲಯದ ಟ್ರಸ್ಟಿ ಸಿ. ಎಂ. ಎನ್‌. ಶಾಸ್ತ್ರಿ, ದೇವಾಲಯದ ಪ್ರಧಾನ ಅರ್ಚಕ ಕೆಂಜಿಗಾಪುರ ಶ್ರೀಧರ್‌ ಭಟ್‌, ಅರ್ಚಕ ಶ್ರೀಕಾಂತ್‌ ಜೋಷಿ, ಬೆಂಗಳೂರಿನ ಚಸ್ಮಾಸ್‌ ಸಂಸ್ಥೆಯ ಅಮೃತ್‌ ನಾಯಕ್‌ ಮತ್ತಿತರರು ಇದ್ದರು. ರಥೋತ್ಸವ ಹಾಗೂ ಸಭಾ ಕಾರ್ಯಕ್ರಮದ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next