Advertisement

ದೀಪೋತವಕ್ಕೆ ಜಾನಪದ ಮೆರಗು

01:09 PM Nov 27, 2019 | Naveen |

ಆನಂದಪುರ: ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನ ಇದ್ದಾಗ ಸಕಲವೂ ಸಿದ್ಧಿಯಾಗಲಿದೆ ಎಂದು ಮಾಜಿ ಶಾಸಕ ಎಚ್‌.ಎಂ. ಚಂದ್ರಶೇಖರಪ್ಪ ನುಡಿದರು. ಸಮೀಪದ ಮುರುಘಾಮಠದಲ್ಲಿ ಐತಿಹಾಸಿಕ ಕಂಚಿನ ದೀಪ ರಥೋತ್ಸವ ನಿಮಿತ್ತ ನಡೆದ ಸುಗ್ಗಿ ಸಂಭ್ರಮ- ಜಾನಪದಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಇಲ್ಲಿನ ಶ್ರೀಗಳಾದ ಡಾ| ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಧರ್ಮ, ಶಿಕ್ಷಣ, ಸಮಾಜಸೇವೆ, ಕ್ರೀಡೆ, ದಾಸೋಹ, ಕಲೆ-ಸಂಸ್ಕೃತಿ ಹೀಗೆ ಎಲ್ಲ ವಿಭಾಗಗಳಿಗೂ ಅತ್ಯಂತ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಮುರುಘಾಮಠದ ಡಾ| ಮಲ್ಲಿಜಾರ್ಜುನ ಮುರುಘರಾಜೇಂದ್ರಮಹಾ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗುತ್ತಲ ಕಲ್ಮಠದ ಶ್ರೀ ಪ್ರಭು ಮಹಾಸ್ವಾಮಿಗಳು, ಹೊಸನಗರದ ಮೂಲೆಗದ್ದೆ ಮಠದ ಶ್ರೀ ಚೆನ್ನಬಸವ ಮಹಾಸ್ವಾಮಿಗಳು, ರಾಮದುರ್ಗದ ವಿರಕ್ತ ಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳು, ತಾಪಂ ಸದಸ್ಯೆ ಆನಂದಿ ಲಿಂಗರಾಜ್‌, ಆಚಾಪುರ ಗ್ರಾಪಂ ಅಧ್ಯಕ್ಷ ಬಸವರಾಜ್‌, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಬೂದ್ಯಪ್ಪ ಹೊಸಕೊಪ್ಪ, ಮಾಜಿ ಅಧ್ಯಕ್ಷ ಬಿ. ಟಾಕಪ್ಪ, ದೀಪೋತ್ಸವ ಸಮಿತಿ ಅಧ್ಯಕ್ಷ ಬೆಳಕೋಡು ಹಾಲಸ್ವಾಮಿಗೌಡ, ಉಪಾಧ್ಯಕ್ಷ ಕುಮಾರಗೌಡ, ಕೋಶಾಧ್ಯಕ್ಷ ಶಾಂತಕುಮಾರ ಗೌಡ, ಸಹ ಕಾರ್ಯದರ್ಶಿ ಸುರೇಶ ಗೌಡ ಕೆಂಜಗಾಪುರ ಇನ್ನಿತರರು ಇದ್ದರು.

ಜಾನಪದ ಸಂಭ್ರಮದ ನಿಮಿತ್ತ ಶಿವಮೊಗ್ಗದ ಶ್ವೇತ ಮತ್ತುತಂಡದಿಂದ ಜಕ್ಕಣಕ್ಕ ಜಕ್ಕಣಕ್ಕ, ಜಲ್ಲೆ ಕಬ್ಬುವಲ್ಲಿ ವಸ್ತ್ರ ನೃತ್ಯಗಳು ಪ್ರೇಕ್ಷಕರನ್ನು ಸೆಳೆದವು. ಸಾಗರದ ಸುರೇಖ ಮತ್ತುತಂಡದಿಂದ ಲಂಬಾಣಿ ನೃತ್ಯ, ಡೊಳ್ಳು ಕುಣಿತ, ಭದ್ರಾ ವತಿಯ ಮರಿಯಮ್ಮ ಮತ್ತು ಸಂಗಡಿಗರಿಂದ ಕೋಲಾಟ, ಲಂಬಾಣಿ ನೃತ್ಯ, ಗೌತಮಪುರದ ವಿಶ್ವಕರ್ಮಚಂಡೆ ಬಳಗದ ಕಲಾವಿದರಿಂದ ಚಂಡೆಕುಣಿತ, ಮುರುಘಾಮಠದ ಎಸ್‌.ಜೆ.ಜಿ. ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಂದ ಜಾನಪದ ನೃತ್ಯ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next