Advertisement

ಹೊಸಗುಂದ ಉತ್ಸವ ಆಹ್ವಾನ ಪತ್ರಿಕೆ ಬಿಡುಗಡೆ

07:11 PM Nov 11, 2019 | Naveen |

ಆನಂದಪುರ: ಇಂದಿನ ಸಮಾಜಕ್ಕೆ ಹಿಂದಿನ ಉತ್ಸವಗಳ ನೆನಪು ಅತ್ಯವಶ್ಯಕವಾಗಿದೆ ಎಂದು ಜಾನಪದ ಕಲಾವಿದ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಟಾಕಪ್ಪ ಕಣ್ಣೂರು ಹೇಳಿದರು.

Advertisement

ಸಮೀಪದ ಹೊಸಗುಂದದಲ್ಲಿ ನ. 16, 17, 18ರಂದು ನಡೆಯುವ ಹೊಸಗುಂದ ಉತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದಿನ ಯುವ ಜನಾಂಗಕ್ಕೆ ನಮ್ಮ ನಾಡಿನ ಹಿಂದಿನ ರಾಜ- ಮಹಾರಾಜರ ಕಾಲದಇತಿಹಾಸ ತಿಳಿಸುವ ಅಗತ್ಯವಿದೆ ಎಂದರು. ಹೊಸಗುಂದ ಉತ್ಸವದಲ್ಲಿ ವಿವಿಧ ಜಾನಪದ ವೈಭವ ನಡೆಯಲಿದೆ. 16ರಂದು ಬೆಳಗ್ಗೆ 10.30ಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ ವತಿಯಿಂದ ಶಿಥಿಲಾವಸ್ಥೆಯ ದೇಗುಲಗಳು ವಿಚಾರವಾಗಿ ವಿಚಾರ ಸಂಕಿರಣ ನಡೆಯಲಿದೆ.

ಸಂಜೆ 6 ರಿಂದ 7ರ ವರೆಗೆ ಜಾನಪದ ಸಂಭ್ರಮ, ನಂತರ ಗಂಗಾವತಿ ಪ್ರಾಣೇಶ್‌ ತಂಡದಿಂದ ನಗೆಹಬ್ಬ, 17ರಂದು ಬೆಳಗ್ಗೆ ಸಾವಯವ ಕೃಷಿ, ಬದುಕು,ಆಹಾರ ಕ್ಷೇತ್ರದಲ್ಲಿ ಸಾವಯವ ಭೋಜನ, ಕೃಷಿ ಮತ್ತು ಬದುಕು ಕುರಿತು ವಿಚಾರ ವಿನಿಮಯ, ಸಂಜೆ 6ಕ್ಕೆ ಜಾನಪದ ಸಂಭ್ರಮ, 7 ರಿಂದ ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕರಾದ ಹನುಮಂತ, ಚನ್ನಪ್ಪ, ಸುಹಾನ ಮತ್ತು ತಂಡದವರಿಂದ ಸುಮಧುರ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

18ರಂದು ಬೆಳಗ್ಗೆ 7 ರಿಂದ 12 ಗಂಟೆಯವರೆಗೆ ಪರಿಸರ ಪ್ರವಾಸ, ಹೊಸಗುಂದ ಕಾಡಿನಲ್ಲಿ, ಸಂಜೆ 5 ರಿಂದ 6ರ ವರೆಗೆ ಜಾನಪದ ಸಂಭ್ರಮ, 7 ರಿಂದ ಖ್ಯಾತ ತಬಲಾ ಮಾಂತ್ರಿಕ ಆನೂರು ಅನಂತಕೃಷ್ಣ ಶರ್ಮಾ ಮತ್ತು ಸ್ಯಾಕ್ಸೋಫೋನ್‌ ಖ್ಯಾತಿಯ ಶ್ರೀಧರ್‌ ಸಾಗರ್‌ ತಂಡದಿಂದ ವಾದ್ಯ ಸಂಗೀತ ನಡೆಯಲಿದೆ.

ಅಲ್ಲದೆ ಇದೇ ಪ್ರಥಮ ಬಾರಿಗೆ ಶ್ರೀ ಉಮಾಮಹೇಶ್ವರನಿಗೆ ವೈಭವದ ಲಕ್ಷ ದೀಪೋತ್ಸವ ನಡೆಯಲಿದೆ. ಉತ್ಸವದಲ್ಲಿ ವಿವಿಧ ಸಂಘ- ಸಂಸ್ಥೆಗಳಿಂದ ವಿವಿದ ಖಾದ್ಯಗಳು (ತಿಂಡಿ ತಿನಿಸುಗಳ ಅಂಗಡಿಗಳು)ಜನರಿಗೆ ಒಂದೇ ಸ್ಥಳದಲ್ಲಿ ದೂರೆಯುವಂತಾಗುತ್ತದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಉಮಾಮಹೇಶ್ವರ ದೇವಾಲಯದ ಟ್ರಸ್ಟ್‌ ಅಧ್ಯಕ್ಷ ಸಿ.ಎಂ.ಎನ್‌. ಶಾಸ್ತ್ರಿ, ಸಾಗರ ಶಂಕರ ಮಠದ ಆಶ್ವಿ‌ನ್‌, ನಂಜುಂಡಸ್ವಾಮಿ , ಜ್ಯೋತಿ ಕೋವಿ, ಹಾಲಪ್ಪ, ಶಂಕರ್‌ನಾಯಕ್ಕ್ , ಬಸವರಾಜ್‌ ಗೌಡ್ರು, ನಾಗರಾಜ್‌ ಸಾಗರ್‌, ಗಿರೀಶ್‌ ಕೋವಿ, ಮಂಜಪ್ಪ, ಹುರಳಿ ನಾರಾಯಣಪ್ಪ, ಹಿತಕರ ಜೈನ್‌, ದಿನೇಶ್‌, ಗೋಪಾಲ್‌, ಕಂಜಗುಣಿ ನಾರಾಯಣಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next