Advertisement
ಸಮೀಪದ ಹೊಸಗುಂದದಲ್ಲಿ ಭಾನುವಾರ ಹೊಸಗುಂದ ಉತ್ಸವದ ಅಂಗವಾಗಿ ಏರ್ಪಡಿಸಿದ್ದ “ಕೃಷಿ ಮತ್ತು ಬದುಕು’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಸಾವಯವ ಕೃಷಿ ಪದ್ಧತಿಗೆ ವಿಶ್ವದಾದ್ಯಂತ ಮಾನ್ಯತೆ ಸಿಗುತ್ತಿದೆ. ಬೇರೆ ಬೇರೆ ಕೃಷಿ ಪದ್ಧತಿಗಳಿದ್ದಾಗ್ಯೂ ಅವೆಲ್ಲವೂ ಕೃಷಿಕರಲ್ಲಿ ಹೊಸ ಉತ್ಸಾಹವನ್ನು ತುಂಬುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಕೃಷಿಯೊಂದಿಗೆ ನಮ್ಮ ರೈತರು ಸಹಬಾಳ್ವೆ ನಡೆಸುವಂತೆ ಆಗಬೇಕು. ಇಂತಹ ವಿಚಾರ ಸಂಕಿರಣದ ಮೂಲಕ ಕೃಷಿಯಲ್ಲಿ ಉನ್ನತಿ ಸಾಧಿಸುವ ಬಗ್ಗೆ ಅರಿತುಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
Related Articles
Advertisement
ಇಂದಿನ ದಿನಮಾನಗಳಲ್ಲಿ ಕೃಷಿಕ ತೀರಾ ಹತಾಶನಾಗಿದ್ದಾನೆ. ಆತನಲ್ಲಿ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎನ್ನುವ ಉತ್ಸಾಹ ಉಳಿದಿಲ್ಲ. ನಮ್ಮ ವ್ಯವಸ್ಥೆ ಸಹ ರೈತರಲ್ಲಿ ಆತ್ಮಚೈತನ್ಯ ತುಂಬುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿಲ್ಲ. ರೈತರಲ್ಲಿ ಉತ್ಸಾಹ ಕಡಿಮೆ ಆಗುತ್ತಿರುವ ಬಗ್ಗೆ ಆತ್ಮಾವಲೋಕನದ ಅಗತ್ಯವಿದೆ. ನಮ್ಮ ಮಗ, ಮಗಳು, ಸೊಸೆ ಕೃಷಿಯಲ್ಲಿಯೇ ಬದುಕಿನ ಸಂತೃಪ್ತಿ ಕಟ್ಟಿಕೊಳ್ಳುವ ಮನೋಭೂಮಿಕೆ ವೃದ್ಧಿಸುವ ಅಗತ್ಯವಿದೆ. ಇಂತಹ ಕಾರ್ಯಾಗಾರಗಳು ಕೃಷಿಯ ಮೇಲೆ ಬೆಳಕು ಚೆಲ್ಲಿ ರೈತರ ಮೊಗದಲ್ಲಿ ಕುಂದಿರುವ ಉತ್ಸಾಹದ ಚಿಲುಮೆಯನ್ನು ಮತ್ತೆ ಚಿಮ್ಮಿಸುವಂತೆ ಆಗಬೇಕು ಎಂದು ತಿಳಿಸಿದರು.
“ಜೀವ ಚೈತನ್ಯ ಕೃಷಿ’ ವಿಷಯ ಕುರಿತು ಬೆಂಗಳೂರಿನ ಬಯೋ ಡೈನಾಮಿಕ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷ ಡಾ| ಸಂದೀಪ್ ಕಾಮತ್, “ಎಲ್ಲರ ಒಳಿತಿಗಾಗಿ ಸಾವಯವ ಕೃಷಿ’ ವಿಷಯ ಕುರಿತು ಬೆಂಗಳೂರು ಗ್ರೀನ್‌ಪಾತ್ ಆರ್ಗ್ಯಾನಿಕ್‌ನ ಎಚ್. ಆರ್. ಜಯರಾಮ್, ಶೂನ್ಯ ಬಂಡವಾಳ ಕೃಷಿ ಕುರಿತು ಪ್ರಗತಿಪರ ಕೃಷಿಕ ಸಿ.ಜಿ.ಹರ್ಷವರ್ಧನ್ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಅಮೆರಿಕಾದ ಮೌಂಟೇನ್ ರೋಸ್ ಹರ್ಬ್ಸ್ ಸಂಸ್ಥೆ ವತಿಯಿಂದ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಪದವಿ ಶಿಕ್ಷಣ ಪಡೆಯಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಹೊಸಗುಂದದ ಗಣಪತಿ ಶೆಟ್ಟಿ ಅವರ ಪುತ್ರಿ ಹರ್ಷಿತಾ ಅವರಿಗೆ ರೂ. 35 ಸಾವಿರ ರೂ. ಆರ್ಥಿಕ ಸಹಕಾರ ನೀಡಲಾಯಿತು.
ನವದೆಹಲಿ ಭಾರತೀಪೀಠದ ಶ್ರೀ ಸರ್ವಾನಂದ ಸರಸ್ವತಿ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಜ್ಯೋತಿ ಕೋವಿ, ಸುಧೀಂದ್ರ ದೇಶಪಾಂಡೆ, ಜೇಕಬ್ ಇನ್ನಿತರರು ಇದ್ದರು. ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಮುಖ್ಯಸ್ಥ ಸಿ.ಎಂ.ಎನ್. ಶಾಸ್ತ್ರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧ್ವರಾಜ್ ನಿರೂಪಿಸಿದರು.