Advertisement

3 ತಿಂಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಬಂದ್‌!

04:10 PM Nov 13, 2019 | Naveen |

ಆನಂದಪುರ: ಸಮೀಪದ ಆಚಾಪುರ ಗ್ರಾಪಂನಲ್ಲಿ ಗ್ರಾಮೀಣ ಕುಡಿಯುವ ನೀರಿನ ಶುದ್ಧ ಘಟಕದ ಯೋಜನೆಯಲ್ಲಿ ಪ್ರಾರಂಭವಾದ ಕುಡಿಯುವ ನೀರಿನ ಘಟಕ ಯಾತ್ರಿಕ ತೊಂದರೆಯಾಗಿ 3 ತಿಂಗಳು ಕಳೆದರೂ ದುರಸ್ತಿ ಮಾಡದೆ ಈ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿಲ್ಲದೆ ತೊಂದರೆಯಾಗಿದೆ.

Advertisement

ಆಚಾಪುರ ಗ್ರಾಪಂನ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹೊಂದಿಕೊಂಡಂತೆ ಸ್ಥಳೀಯ ಸರ್ಕಾರಿ ಕನ್ನಡ ಶಾಲಾ ಆವರಣದಲ್ಲಿ ಈ ಘಟಕವನ್ನು ಆಳವಡಿಸಲಾಗಿದೆ. ಇದು 2017-18ನೇ ಸಾಲಿನಲ್ಲಿ ಕಾಮಗಾರಿ ಮುಕ್ತಾಯವಾಗಿದ್ದು ಅಂದಿನ ಕಂದಾಯ ಮಂತ್ರಿಯಾಗಿದ್ದ ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ಈ ಘಟಕ ಉದ್ಘಾಟನೆಯಾಗಿತ್ತು. ಈಗ ಕೇವಲ ಒಂದು ವರ್ಷವಾಗುತ್ತಿದ್ದಂತೆ ಈ ಘಟಕ ಹಾಳಾಗಿದೆ.

ಈ ಘಟಕ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಗ್ರಾಮೀಣ ಕುಡಿಯುವ ನೀರಿನ ಶುದ್ಧ ಘಟಕದ ಯೋಜನೆ ದೂಳು ಹಿಡಿಯುತ್ತಿದೆ. ಈ ಘಟಕದಿಂದ ಆಚಾಪುರ, ಇಸ್ಲಾಂಪುರ, ಮುರುಘಾಮಠ ಸೇರಿದಂತೆ ಸುಮಾರು 3 ಕಿಮೀ ದೂರದಲ್ಲಿರುವ ಆನಂದಪುರ ಹಾಗೂ ಯಡೇಹಳ್ಳಿ ಇತರೆ ಭಾಗದಿಂದ ಜನರು ಈ ಕುಡಿಯುವ ನೀರು ತೆಗೆದುಕೊಂಡು ಹೋಗುತಿದ್ದರು.

ಅದರೆ ಕಳೆದ 3 ತಿಂಗಳಿಂದ ಘಟಕ ಹಾಳಾಗಿದ್ದು ನೀರು ಇಲ್ಲದಂತಾಗಿದೆ. ಅಲ್ಲದೆ ಇಲ್ಲಿನ ಸರ್ಕಾರಿ ಕನ್ನಡ ಶಾಲೆಗೂ ಈ ನೀರನ್ನು ಬಳಕೆ ಮಾಡಲಾಗುತಿತ್ತು. ಅವರಿಗೂ ನೀರು ಇಲ್ಲದಂತಾಗಿದೆ. ಹಾಗೆಯೇ ಆಚಾಪುರ ಗ್ರಾಪಂನವರು ಈ ನೀರಿಗಾಗಿ ಜನರಿಗೆ ಮುಂಗಡವಾಗಿ ಹಣ ತಗೆದುಕೊಂಡು ಟೋಕನ್‌ ನೀಡಿದ್ದರು.

ಆದರೆ ಈಗ ಪ್ರತಿ ದಿನ ಟೋಕನ್‌ ಹಿಡಿದು ನೀರು ಬರುತ್ತದೆ ಎಂದು ನೋಡುವ ಪರಿಸ್ಥಿತಿ ಉಂಟಾಗಿದೆ. ಗ್ರಾಪಂನವರು ಜಿಪಂ ಇಂಜಿನಿಯರ್‌ ವಿಭಾಗಕ್ಕೆ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ತಿಳಿಸಿದ್ದಾರೆ. ಈ ಶುದ್ಧ ಕುಡಿಯುವ ನೀರಿನ ಘಟಕಗಳು ಬಹುತೇಕ ಭಾಗದಲ್ಲಿ ನಿಮಾರ್ಣವಾಗಿದ್ದು ನಾನಾ ತೊಂದರೆಯಿಂದ ಘಟಕ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next