Advertisement

ಕೇಳಿದ ಖಾತೆ ಸಿಗದೆ ಇದ್ದರೆ ಶಾಸಕನಾಗಿಯೇ ಇರುತ್ತೇನೆ: ಆನಂದ್ ಸಿಂಗ್ ಅಸಮಾಧಾನ

02:25 PM Aug 07, 2021 | Team Udayavani |

ಬಳ್ಳಾರಿ: ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಖಾತೆ ಹಂಚಿಕೆಯಾದ ಬೆನ್ನಲ್ಲೇ ಪರಿಸರ ಸಚಿವ ಆನಂದ್‌ ಸಿಂಗ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಖಾತೆ ಬದಲಾಯಿಸುವಂತೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕೇಳುವೆ ಎಂದಿದ್ದಾರೆ.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಒಂದು ಖಾತೆಯನ್ನು ಕೇಳಿದ್ದರೆ, ಬೇರೊಂದು ಖಾತೆಯನ್ನು ನೀಡಲಾಗಿದೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಖಾತೆ ಬದಲಾಯಿಸುವಂತೆ ಕೇಳುವೆ. ಒಂದು ವೇಳೆ ಕೇಳಿದ ಖಾತೆಯನ್ನು ಕೊಡದೇ ಇದ್ದರೆ ಶಾಸಕನಾಗಿ ಉಳಿಯುವುದೇ ಒಳಿತು ಎನ್ನುವುದು ನನ್ನ ನಿಲುವಾಗಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:‘ಜನತಾ ಪರಿವಾರ ಸರ್ಕಾರ’ದ ಛಾಯೆ ಕಳೆಯಲು ಸಂಘ ಹಿನ್ನೆಲೆಯವರಿಗೆ ಬಂಪರ್: ಏನಿದು ಲೆಕ್ಕಾಚಾರ?

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಮೊದಲು ರಾಜೀನಾಮೆ ನೀಡಿದ್ದು ನಾನು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. 2019 ಮೇ ಒಂದನೇ ತಾರೀಖು ಮೊದಲು ನಾನು ರಾಜೀನಾಮೆ ನೀಡಿದ್ದೇನೆ. ಹಾಗಂತ ನನ್ನಿಂದಲೇ ಸರ್ಕಾರ ಬಂದಿದೆ ಎನ್ನುವುದಲ್ಲ. ನನ್ನಂತೆ ಹಲವು ಜನರು ಸಹ ರಾಜೀನಾಮೆ ನೀಡಿದ್ದಾರೆ. ಆ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವಧಿಯಲ್ಲೂ ಕೇವಲ ಎರಡನೇ ದಿನಗಳಲ್ಲಿ ಮೂರು ಖಾತೆಗಳನ್ನು ಬದಲಾಯಿಸಿದ್ದಾರೆ. ಇದು ಅವಮಾನವಲ್ಲ. ಆದರೆ, ನಿರಾಶೆ ಮಾಡಿದ್ದಕ್ಕೆ ಬೇಸರವಾಗಿದೆ. ಹಾಗಾಗಿ ಮತ್ತೊಮ್ಮೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮನವಿ ಮಾಡಿಕೊಳ್ಳುವೆ. ಒಂದು ವೇಳೆ ಕೊಡದಿದ್ದಲ್ಲಿ ನನ್ನ ದಾರಿಯನ್ನು ನಾನು ನೋಡಿಕೊಳ್ಳುವೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next