Advertisement

ಆನಂದ್‌ಸಿಂಗ್‌ ಡಿಸ್ಚಾರ್ಜ್‌

12:30 AM Feb 05, 2019 | Team Udayavani |

ಬೆಂಗಳೂರು: ಕಂಪ್ಲಿ ಕಾಂಗ್ರೆಸ್‌ ಶಾಸಕ ಗಣೇಶ್‌ ಅವರಿಂದ ಗಂಭೀರ ಹಲ್ಲೆಗೊಳಗಾಗಿ ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯನಗರ ಶಾಸಕ ಆನಂದ್‌ಸಿಂಗ್‌ ಸೋಮವಾರ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದರು. ಸಂಜೆ 7.40 ಗಂಟೆಗೆ ಶೇಷಾದ್ರಿಪುರ ಅಪೋಲೊ ಆಸ್ಪತ್ರೆಯಿಂದ ಆನಂದ್‌ಸಿಂಗ್‌ ಬಿಡುಗಡೆಯಾಗಿದ್ದು, ವಸಂತನಗರದ ತಮ್ಮ ಅಪಾರ್ಟ್‌ಮೆಂಟ್‌ಗೆ ತೆರಳಲಿದ್ದಾರೆ. ಅಲ್ಲೇ ವಿಶ್ರಾಂತಿ ಪಡೆಯಲಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Advertisement

ಆನಂದ್‌ ಸಿಂಗ್‌ ಅವರು ಈಗಾಗಲೇ ಬಹುತೇಕ ಗುಣಮುಖ ವಾಗಿದ್ದು ಆಸ್ಪತ್ರೆಯಲ್ಲಿದ್ದೇ ಚಿಕಿತ್ಸೆ ಪಡೆಯುವ ಅಗತ್ಯವಿಲ್ಲ. ನಿಯಮಿತ ವಾಗಿ ಆಸ್ಪತ್ರೆ ವೈದ್ಯರ ಸೂಚನೆ ಪ್ರಕಾರ ನಿಗದಿ ಪಡಿಸಿರುವ ದಿನದಂದು ಆಸ್ಪತ್ರೆಗೆ ಭೇಟಿ ನೀಡಿ ಅಗತ್ಯ ಚಿಕಿತ್ಸೆ ಪಡೆಯಬೇಕಿದೆ. ಮುಖ್ಯವಾಗಿ ವಿಶ್ರಾಂತಿ ಅಗತ್ಯವಿರುವುದರಿಂದ ಮನೆಯಲ್ಲೇ ಅವರು ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next