ಕೊಪ್ಪಳ: ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರ್ಪಡೆ ಮಾಡಬೇಕು ಎನ್ನುವುದು ಅಲ್ಲಿನ ಜನರ ಬೇಡಿಕೆಯಿದೆ. ಹೋರಾಟ ಮಾಡುವುದು. ಬೇಡಿಕೆಯಿಡುವುದು ಅವರ ಹಕ್ಕಾಗಿದೆ. ಸರ್ಕಾರವು ಭೌಗೋಳಿಕ, ತಾಂತ್ರಿಕವಾಗಿ ಪರಿಶೀಲಿಸಿ, ಆಕ್ಷೇಪಣೆಯನ್ನು ಆಲಿಸಿ ಮುಂದೆ ತೀರ್ಮಾನ ಕೈಗೊಳ್ಳಲಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಿಲ್ಲೆಯ ಮೂಲ ಸೌಕರ್ಯಕ್ಕಾಗಿ ಅಖಂಡ ಬಳ್ಳಾರಿ ಜಿಲ್ಲೆಯಿದ್ದಾಗ ಸುಪ್ರೀಂ ಕೋರ್ಟ್‌ನ ನಿಯಮದ ಪ್ರಕಾರ 1600ಕೋಟಿ ರೂ. ಇದೆ. ಈಗ ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳಿಗೆ ಶೇಕಡಾವಾರು ಏಷ್ಟು ಬರಬೇಕೋ ? ಅಷ್ಟು ಅನುದಾನ ಬರುವ ಸಂಭವವಿದೆ ಎಂದರು.
ಇದನ್ನೂ ಓದಿ : ಅಧಿಕಾರಿಗಳನ್ನು ಅವಾಚ್ಯವಾಗಿ ನಿಂದಿಸಿದ ಶಾಸಕ ದೇಸಾಯಿ : ವಿಡಿಯೋ ವೈರಲ್
ವಿಶ್ವನಾಥ್ ಸಚಿವ ಸ್ಥಾನ ತಪ್ಪಿ ಹೋದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ರಿಗೆ ಯಾವುದೇ ಅನ್ಯಾಯ ಆಗಿಲ್ಲ. ಅವರಿಗೆ ಅನ್ಯಾಯವಾದರೆ ಖಂಡಿತವಾಗಿಯೂ ನಾವು ಅವರ ಬೆನ್ನಿಗೆ ನಿಲ್ಲಲಿದ್ದೇವೆ. ಅವರಿಗೆ ಸಚಿವ ಸ್ಥಾನ ಕೊಡುವುದು ವಿಳಂಬವಾಗಿದ್ದಕ್ಕೆ ಕೆಲವೊಂದು ಮಾತು ಆಡಿರಬಹುದು. ನಾವೆಲ್ಲರೂ ಅವರ ಹಿಂದಿದ್ದೇವೆ ಎಂದರು.
ಸಿಎಂ ಬದಲಾವಣೆಯ ವಿಚಾರದ ಕುರಿತು ಮಾತಾನಾಡಿದ ಅವರು, ಅದೆಲ್ಲ ಸುಮ್ಮನೆ ಮಾಧ್ಯಮದಲ್ಲಿ ಚರ್ಚೆಯಾಗುತ್ತದೆ. ಕೆಲವರು ಸಿಎಂ ಬದಲಾವಣೆ ಆಗುವ ವಿಚಾರ ಹೇಳುತ್ತಿರುತ್ತಾರೆ. ಅವೆಲ್ಲಾ ಸರಿಯೆಂದು ಹೇಳೊದಕ್ಕೆ ಆಗಲ್ಲ. ಸಿಎಂ ಬಿಎಸ್ ವೈ ಅವರೇ ಪೂರ್ಣಾವಧಿ ಸಿಎಂ ಆಗಿರುತ್ತಾರೆ ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದರು.