Advertisement

Anand Nyamagouda: ಬಿಜೆಪಿಯ ಮಾಜಿ ಮುಖ್ಯಮಂತ್ರಿಯೊಬ್ಬರ ಅಶ್ಲೀಲ ಸಿಡಿ ಶೀಘ್ರ ಹೊರಕ್ಕೆ

10:20 PM Aug 24, 2024 | Team Udayavani |

ಬಾಗಲಕೋಟೆ: ಬಿಜೆಪಿಯ ಮಾಜಿ ಮುಖ್ಯಮಂತ್ರಿಯೊಬ್ಬರ ಅಶ್ಲೀಲ‌ ಸಿಡಿ ಶೀಘ್ರವೇ ಹೊರ ಬರಲಿದೆ ಎಂದು ಜಮಖಂಡಿಯ‌ ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಆನಂದ ನ್ಯಾಮಗೌಡ ಬಾಂಬ್ ಸಿಡಿಸಿದ್ದಾರೆ.

Advertisement

ಜಮಖಂಡಿ ನಗರದ ದೇಸಾಯಿ ವೃತ್ತದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ “ಇವತ್ತು ಒಂದು ಹೊಸ ಸುದ್ದಿ ಬಂದಿದೆ. ಆ ಸುದ್ದಿ ‌ಇವತ್ತೆ  ಕೇಳಿನಿ. ಅದೇನಪ್ಪಾ ಅಂದ್ರೆ , ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ಒಂದು ಅಶ್ಲೀಲ‌ ಸಿಡಿ ಹೊರಗೆ ಬರೋದಿದೆ. ಆ ಅಶ್ಲೀಲ‌ ಸಿಡಿ ಬಿಜೆಪಿಯವರದ್ದೆ” ಎಂದರು.

ಬಿಜೆಪಿ ಮಾಜಿ ‌ಮುಖ್ಯಮಂತ್ರಿಯ ಅಶ್ಲೀಲ ಸಿಡಿ ಶೀಘ್ರದಲ್ಲಿ ಬಿಡುಗಡೆಯಾಗುತ್ತೆ ಅಂತ ಇವತ್ತು ಕೇಳಲ್ಪಟ್ಟಿದ್ದೀನಿ ಆದರೆ, ಆ ಮಾಜಿ ಸಿಎಂ ಎಂಬುವುದರ ಬಗ್ಗೆ  ಹೆಸರು ಬಹಿರಂಗಪಡಿಸಲಿಲ್ಲ ಎಂದರು. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಹಿನ್ನೆಲೆ ರಾಜ್ಯಪಾಲರ ನಡೆ ಖಂಡಿಸಿ ನಡೆದ ಪ್ರತಿಭಟನಾ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next