ಮುಂಬಯಿ: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಭಾರತದ “ಒರಿಜಿನಲ್ ಟೆಸ್ಲಾ” ಎಂದು ಆಕರ್ಷಕ ಎತ್ತಿನ ಬಂಡಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಇದು ಸಂಪೂರ್ಣವಾಗಿ ಸ್ವಯಂ ಚಾಲಿತವಾಗಿದೆ ಮತ್ತು ಗೂಗಲ್ ನಕ್ಷೆಗಳಿಂದ ನ್ಯಾವಿಗೇಷನ್ ಸಹಾಯದ ಅಗತ್ಯವಿಲ್ಲ ಎಂದು ಬರೆಯಲಾಗಿದೆ.
ಮರಳಿ ಭವಿಷ್ಯದತ್ತ…ಎಂದು ಪೋಸ್ಟ್ ಮಾಡಿ ಟೆಸ್ಲಾ ಸಂಸ್ಥಾಪಕ ಮತ್ತು ಸಿಇಒ ಎಲೆನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ ಅವರಿಂದ ಪೋಸ್ಟ್‌ಗೆ ಪ್ರತಿಕ್ರಿಯೆಯನ್ನು ಕೋರಿದ್ದರು.
ಈ ಚಿತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಲವರು ಹಳೆಯ ನೆನಪುಗಳನ್ನು ಮೆಲುಕು ಹಾಕಿ ಇಂಧನ ಬೆಲೆ ಏರಿಕೆ ವೇಳೆ ಇದೇ ಉತ್ತಮ ಎಂದೂ ಪ್ರತಿಕ್ರಿಯಿಸಿದ್ದಾರೆ.
ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ಚಿತ್ರದಲ್ಲಿ ಎರಡು ಎತ್ತುಗಳು ಮಾರ್ಗದರ್ಶನವಿಲ್ಲದೆ ಬಂಡಿಯನ್ನು ಎಳೆಯುವುದನ್ನು ತೋರಿಸಿದೆ, ಅದರಲ್ಲಿರುವ ಜನರು ಮಲಗಿ ಪ್ರಯಾಣಿಸುತ್ತಿದ್ದರು.