Advertisement

ಆನಂದ್‌ ಮಹೀಂದ್ರಾ ಹಂಚಿಕೊಂಡ ಭಾರತದ ಸುಂದರ ತಾಣಗಳಲ್ಲಿ ಕರ್ನಾಟಕದ ಈ ಗ್ರಾಮವೂ ಸೇರಿದೆ!

01:54 PM Jun 12, 2023 | Team Udayavani |

ಮುಂಬೈ: ಖ್ಯಾತ ಉದ್ಯಮಿ ಆನಂದ್‌ ಮಹೀಂದ್ರಾ ಅವರು ತಮ್ಮ ಸೃಜನಶೀಲ ಹಾಗೂ ಸ್ಫೂರ್ತಿದಾಯಕ ಟ್ವೀಟ್‌ ಗಳನ್ನು ಮಾಡುವ ಮೂಲಕ ಜನಪ್ರಿಯರಾಗಿದ್ದಾರೆ. ಆ ನಿಟ್ಟಿನಲ್ಲಿ ಮಹೀಂದ್ರಾ& ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್‌ ಅವರು ಭಾರತದಲ್ಲಿ ತಾವು ಪ್ರಯಾಣಿಸಲು ಬಯಸುವ ದೇಶದ ಹತ್ತು ಸುಂದರ ಪ್ರದೇಶಗಳ (Bucket List) ಪಟ್ಟಿಯನ್ನು ಹಂಚಿಕೊಂಡಿದ್ದಾರೆ.

Advertisement

ಪ್ರಕೃತಿ ಸೌಂದರ್ಯದ ಸ್ಥಳಗಳ ಪಟ್ಟಿಯನ್ನು ಗಮನಿಸಿದರೆ ನಿಮಗೂ ಕೂಡಾ ಅಲ್ಲಿಗೆ ಭೇಟಿ ನೀಡಲು ಪ್ರೇರಣೆ ನೀಡುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಭಾರತದ ವಿವಿಧ ಸುಂದರ ಹಳ್ಳಿಗಳ ಬಗ್ಗೆ ಆನಂದ್‌ ಮಹೀಂದ್ರಾ ಅವರೇ ಮಂತ್ರ ಮುಗ್ಧರಾಗಿದ್ದಾರೆ. ಕುತೂಹಲದ ವಿಷಯವೇನೆಂದರೆ ಹತ್ತು ಹಳ್ಳಿಗಳಲ್ಲಿ ಕರ್ನಾಟಕದ ಒಂದು ಹಳ್ಳಿಯೂ ಸೇರಿದೆ.

ಭಾರತದಲ್ಲಿ ನಾನು ಪ್ರಯಾಣಿಸಲು ಬಯಸಿರುವ ಪಟ್ಟಿ ಈಗ ತುಂಬಿ ತುಳುಕುತ್ತಿದೆ ಎಂದು ಟ್ವೀಟ್‌ ಮಾಡಿರುವ ಆನಂದ್‌ ಮಹೀಂದ್ರಾ ಅವರು ಸುಂದರ ಹಳ್ಳಿಗಳ ಪಟ್ಟಿ ಹಾಗೂ ಫೋಟೊಗಳನ್ನು ಶೇರ್‌ ಮಾಡಿದ್ದಾರೆ. ಇದಕ್ಕೆ ಕಲರ್ಸ್‌ ಆಫ್‌ ಭಾರತ್‌ ಎಂದು ಕ್ಯಾಪ್ಶನ್‌ ನೀಡಿದ್ದಾರೆ.

ಹತ್ತು ಸುಂದರ ಹಳ್ಳಿಗಳ ಪಟ್ಟಿ ಯಾವುದು?

Advertisement

1)ಕಲ್ಪಾ(ಹಿಮಾಚಲ ಪ್ರದೇಶ), 2)ಮಾವ್ಲಿನ್ನಾಂಗ್‌ (ಮೇಘಾಲಯ), 3)ಕೊಲ್ಲೆಂನ್‌ ಗೋಡ್‌ ಹಳ್ಳಿ (ಕೇರಳದ ಪಾಲಕ್ಕಾಡ್)‌, 4)ಮಾಥೂರ್‌ ಗ್ರಾಮ (ಕನ್ಯಾಕುಮಾರಿ, ತಮಿಳುನಾಡು), 5)ವರಂಗಾ ಗ್ರಾಮ (ಕರ್ನಾಟಕ) 6) ಗೋರ್ಖಿ ಖೋಲಾ(ದಾರ್ಜಿಲಿಂಗ್‌, ಪಶ್ಚಿಮಬಂಗಾಳ), 7)ಜಿರಾಂಗ್‌ ಗ್ರಾಮ (ಒಡಿಶಾ), 8)ಜಿರೋ ಗ್ರಾಮ (ಅರುಣಾಚಲ ಪ್ರದೇಶ), 9)ಮನಾ (ಉತ್ತರಾಖಂಡ್)‌ 10) ಖಿಮ್ಸಾರ್‌ ಗ್ರಾಮ (ರಾಜಸ್ಥಾನ).

ಆನಂದ್‌ ಮಹೀಂದ್ರಾ ಅವರು ಹಂಚಿಕೊಂಡಿರುವ ಸುಂದರ ಹಳ್ಳಿಗಳ ಪ್ರಯಾಣದ ಪಟ್ಟಿಗೆ ಟ್ವೀಟರ್‌ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಆನಂದ್‌ ಮಹೀಂದ್ರಾ ಅವರು ಕರ್ನಾಟಕದ ನಂದಿ ಬೆಟ್ಟ ಮತ್ತು ಕೇರಳದ ಇಡುಕ್ಕಿ ಪ್ರದೇಶಕ್ಕೆ ಭೇಟಿ ನೀಡಬೇಕೆಂದು ಟ್ವೀಟರ್‌ ಬಳಕೆದಾರರು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next