Advertisement
ವಿಡಿಯೋದಲ್ಲಿ 5 ವರ್ಷದ ಬಾಲಕಿಯೊಬ್ಬಳು 95 ವರ್ಷವಾದಾಗ ಹೇಗೆ ಕಾಣಿಸುತ್ತಾಳೆ ಎಂಬುದನ್ನು ವಿವರಿಸುತ್ತದೆ. ಕೃತಕ ಬುದ್ದಿಮತ್ತೆಯ ಈ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಎಐನ ಸಾಮರ್ಥ್ಯಕ್ಕೆ ನಾನು ಭಯಪಡುತ್ತಿಲ್ಲ…ಒಂದು ವೇಳೆ ಅದು ತುಂಬಾ ಕಾಡುವ ಸುಂದರ ಮತ್ತು ಮಾನವೀಯತೆ ಸೃಷ್ಟಿಸಲು ಸಾಧ್ಯವಾದರೆ ಎಂಬುದಾಗಿ ಕ್ಯಾಪ್ಶನ್ ಬರೆದು ಆನಂದ್ ಮಹೀಂದ್ರಾ ಅವರು ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ವಿಡಿಯೋಕ್ಕೆ ಹಲವು ಟ್ವಿಟರ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದು, ಇದು ಸುಂದರ ಮತ್ತು ವಿಸ್ಮಯಕಾರಿಯಾಗಿದೆ. ವಾಸ್ತವದ ಗ್ರಹಿಕೆಯನ್ನು ಕಳೆದುಕೊಳ್ಳದಂತೆ ನೆನಪಿಸುವಂತಿದೆ ಎಂದು ತಿಳಿಸಿದ್ದಾರೆ. ಇದು ನಿಜವಾಗಿಯೂ ಅದ್ಭುತವಾಗಿದೆ. AI ರೂಪಾಂತರಗೊಳಿಸುವ ವಿಧಾನವನ್ನು ಗ್ರಹಿಸಲು ಕಷ್ಟವಾಗುತ್ತದೆ. ಚಿತ್ರಗಳನ್ನು ರಚಿಸುವುದರಿಂದ ಹಿಡಿದು ಭಾಷಾಂತರ, ಹಾಡು ಬರೆಯುವವರೆಗೂ ಎಐ ಆವರಿಸಿಕೊಂಡಿದ್ದು, ಭವಿಷ್ಯದಲ್ಲಿ AI ಸಂಪೂರ್ಣವಾಗಿ ನಮ್ಮ ಅವಿಭಾಜ್ಯ ಅಂಗವಾಗಲಿದೆ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.