Advertisement

ಆನಂದ್‌ ಆಡಿಯೋಗೆ ಇಪ್ಪತ್ತರ ಸಂಭ್ರಮ

02:49 PM Mar 31, 2019 | Lakshmi GovindaRaju |

ಕನ್ನಡ ಚಿತ್ರರಂಗದಲ್ಲಿ ಆನಂದ್‌ ಆಡಿಯೋ ಸಂಸ್ಥೆ ತನ್ನದೇ ಆದ ಛಾಪು ಮೂಡಿಸಿದೆ. ಸಾವಿರಾರು ಹಾಡುಗಳನ್ನು ಹೊರತರುವ ಮೂಲಕ ಕೇಳುಗರ ಮೊಗದಲ್ಲಿ “ಆನಂದ’ ತಂದಿರುವ ಆನಂದ್‌ ಸಂಸ್ಥೆಯ ಮೊಗದಲ್ಲೂ ಇದೀಗ ಆನಂದ ಮೂಡಿದೆ.

Advertisement

ಹೌದು, ಆನಂದ್‌ ಆಡಿಯೋ ಸಂಸ್ಥೆ ಈಗ ಬರೋಬ್ಬರಿ ಎರಡು ದಶಕವನ್ನು ಯಶಸ್ವಿಯಾಗಿ ಪೂರೈಸಿದೆ. ಇಪ್ಪತ್ತು ವರ್ಷಗಳ ಸಂಭ್ರಮದಲ್ಲಿರುವ ಆನಂದ್‌ ಆಡಿಯೋ ಸಂಸ್ಥೆ, ಇದುವರೆಗೆ ಅದೆಷ್ಟೋ ಸೂಪರ್‌ ಹಿಟ್‌ ಹಾಡುಗಳನ್ನೂ ಕೇಳುಗರಿಗೆ ನೀಡಿದೆ.

ಎರಡು ದಶಕಗಳ ಸಂಭ್ರಮದಲ್ಲಿರುವ ಆನಂದ್‌ ಆಡಿಯೋ ಸಂಸ್ಥೆಯ ಮಾಲೀಕ ಶ್ಯಾಮ್‌, ಸಂಸ್ಥೆ ಕುರಿತು ಹೇಳುವುದಿಷ್ಟು. “ಇದು ಬರೋಬ್ಬರಿ ಎರಡು ದಶಕಗಳ ನಿರಂತರ ನಡಿಗೆ. ಇದೇನು ಸಣ್ಣ ಹಾದಿಯೇನಲ್ಲ. ದೊಡ್ಡ ಕನಸು ಇಟ್ಟುಕೊಂಡೇ ಇಲ್ಲಿಗೆ ಬಂದಿದ್ದು ಸಾರ್ಥಕವಾಗಿದೆ.

ನನ್ನ ಅಣ್ಣ ಮೋಹನ್‌ ಛಾಬ್ರಿಯ ಅವರು ಹಾಕಿಕೊಟ್ಟ ಬುನಾದಿ ಭದ್ರವಾಗಿದೆ. ಆರಂಭದಲ್ಲಿ ನಾವು ಇಲ್ಲಿಯವರೆಗೆ ರೀಚ್‌ ಆಗ್ತಿàವಿ ಅಂದುಕೊಂಡಿರಲಿಲ್ಲ. ಈ ಯಶಸ್ಸು, ನಮ್ಮ ಕನ್ನಡ ಚಿತ್ರರಂಗ ಮತ್ತು ಕನ್ನಡ ಪ್ರೇಕ್ಷಕರು, ಹಾಡು ಕೇಳುಗರಿಗೆ ಸಲ್ಲಬೇಕು.

ಈ ಎರಡು ದಶಕದಲ್ಲಿ 700 ಕ್ಕೂ ಹೆಚ್ಚು ಚಿತ್ರಗಳ ಸುಮಾರು ಮೂರು ಸಾವಿರ ಹಾಡುಗಳನ್ನು ನಮ್ಮ ಆನಂದ್‌ ಆಡಿಯೋ ಸಂಸ್ಥೆ ಬಿಡುಗಡೆ ಮಾಡಿದೆ. ಇದಲ್ಲದೆ, ಭಕ್ತಿಗೀತೆ ಹಾಗೂ ಜನಪದ ಗೀತೆ ಸೇರಿದಂತೆ ಇತರೆ 12 ಸಾವಿರ ಹಾಡುಗಳು ಸಹ ಬಿಡುಗಡೆಯಾಗಿವೆ.

Advertisement

ಮೊದಲಿನಿಂದಲೂ ಸಂಗೀತವನ್ನೇ ಬೆನ್ನತ್ತಿ ಬಂದಿರುವ ನಮ್ಮ ಸಂಸ್ಥೆ ಉತ್ತಮ ಗೀತೆಗಳನ್ನೇ ಖರೀದಿಸಿ, ಕೇಳುಗರಿಗೆ ಆನಂದ ಮೂಡಿಸಿದೆ. ಸುದೀಪ್‌, ಗಣೇಶ್‌ ಅವರ ಮೊದಲ ಚಿತ್ರಗಳ ಹಾಡುಗಳು ನಮ್ಮ ಸಂಸ್ಥೆಯಿಂದಲೇ ಹೊರಬಂದಿವೆ ಎಂಬ ಹೆಗ್ಗಳಿಕೆ ನಮ್ಮದು.

ಹಾಗೆಯೇ, ಧ್ರುವ ಸರ್ಜಾ ಅವರ ಮೊದಲ ಚಿತ್ರದ ಹಾಡುಗಳು ಸಹ ನಮ್ಮ ಸಂಸ್ಥೆ ಮೂಲಕ ಹೊರಬಂದಿವೆ. ಇಲ್ಲಿ ಸ್ಟಾರ್‌ ಅಂತಲ್ಲ, ಹೊಸಬರ ಚಿತ್ರಗಳ ಒಳ್ಳೆಯ ಹಾಡುಗಳು ಸಹ ಹೊರಬಂದಿವೆ’ ಎಂದು ವಿವರ ಕೊಡುತ್ತಾರೆ ಶ್ಯಾಮ್‌.

ಆರಂಭದಲ್ಲಿ ಕ್ಯಾಸೆಟ್‌, ಸಿಡಿ ಇದ್ದಾಗ, ವ್ಯಾಪಾರ ಬೇರೆ ರೀತಿಯಲ್ಲಿತ್ತು. ಆದರೆ, ಯುಟ್ಯೂಬ್‌, ಆನ್‌ಲೈನ್‌, ಆ್ಯಪ್‌ ಬಂದಿದ್ದೇ ತಡ, ಹಾಡುಗಳಿಗೆ ಹೆಚ್ಚು ಮಾರ್ಕೆಟ್‌ ಸಿಗುತ್ತಿಲ್ಲ ಎನ್ನುವುದು ಶ್ಯಾಮ್‌ ಮಾತು. “ಒಳ್ಳೆಯ ವಿಷಯವೆಂದರೆ, ಪೈರಸಿ ನಿಂತಿದೆ.

ಈಗಂತೂ ಎಲ್ಲರೂ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಯಾವ ಗೀತೆ ಬೇಕೋ ಆ ಗೀತೆ ಕೇಳುವ ಅವಕಾಶವಿದೆ. ಇಷ್ಟರಲ್ಲೇ ಆನಂದ್‌ ಆಡಿಯೋ ಸಂಸ್ಥೆ ಹೊಸ ಕೊಡುಗೆ ನೀಡಲಿದೆ. ಈ ವರ್ಷ ಇನ್ನೊಂದು ಲೆವೆಲ್‌ಗೆ ಹೋಗಲಿದೆ. ಐದು ದೊಡ್ಡ ಚಿತ್ರಗಳು ಸಂಸ್ಥೆಯ ಪಾಲಾಗಿವೆ.

“ಭರಾಟೆ’, “ಕೋಟಿಗೊಬ್ಬ 3′,”99”,”ಅಮರ್‌’,”ಮದಗಜ’ ಹೀಗೆ ಇನ್ನೂ ಸ್ಟಾರ್‌ ಚಿತ್ರಗಳಿವೆ. ಇವೆಲ್ಲದರ ಜೊತೆಗೆ 20 ವರ್ಷದ ಸಂಭ್ರಮಕ್ಕಾಗಿ ಸಂಸ್ಥೆ ಮೂಲಕ ದೊಡ್ಡ ಕಾರ್ಯಕ್ರಮ ಆಯೋಜಿಸುವ ಯೋಚನೆಯೂ ಇದೆ. ಆನಂದ್‌ ಜೊತೆಗೂಡಿ ಆ ಬಗ್ಗೆ ಕಲರ್‌ಫ‌ುಲ್‌ ಕಾರ್ಯಕ್ರಮ ಮಾಡಲಿದ್ದೇವೆ’ ಎನ್ನುತ್ತಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next