Advertisement
ಎಂಜಿಎಂ ಕಾಲೇಜು ಬಳಿಯಲ್ಲಿರುವ ಎಸ್‌ಎಸ್ ರೆಸಿಡೆನ್ಸಿಯಲ್ಲಿ ರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ಘಟನೆ ನಡೆಯಿತು. ಕಟ್ಟಡದ 4ನೇ ಮಹಡಿ ಏರಿದ ಹೆಬ್ಟಾವು ವೆಂಟಿಲೇಟರ್ ಮೂಲಕ ಕೊಠಡಿ ಸಂಖ್ಯೆ 404ರೊಳಗೆ ಪ್ರವೇಶಿಸಿತ್ತು. ಈ ವೇಳೆ ಭಾರದ ಒತ್ತಡಕ್ಕೆ ಗಾಜು ಒಡೆದ ಕಾರಣ ಮನೆಯವರು ಎಚ್ಚೆತ್ತುಕೊಂಡರು. ನೋಡುವಾಗ ಆಶ್ಚರ್ಯ ಕಾದಿತ್ತು. ಸುಮಾರು 8 ಅಡಿ ಉದ್ದದ ಹೆಬ್ಟಾವು ಅತ್ತಿಂದಿತ್ತ ಹೋಗುತ್ತಿತ್ತು!
ಫ್ಲ್ಯಾಟ್ ನಿವಾಸಿಗಳ ಈ ಕಾರ್ಯಾಚರಣೆ ರಾತ್ರಿ ಇಡೀ ನಡೆದಿತ್ತು. ಬಳಿಕ ಪಕ್ಕದ ಮನೆಯೊಂದರ ನಿವಾಸಿ ಗೋಪಾಲ್ ಎಂಬವರು ಹಾವನ್ನು ಕೆಳಕ್ಕೆ ಬೀಳಿಸುವಲ್ಲಿ ಯಶಸ್ವಿಯಾದರು. ಬಳಿಕ ಅದನ್ನು ಗೋಣಿಚೀಲಕ್ಕೆ ಹಾಕಿ ಪೆರಂಪಳ್ಳಿ ಬಳಿ ಇರುವ ಕಾಡಿಗೆ ಬಿಡಲಾಯಿತು. ಈ ಎಲ್ಲ ಕಾರ್ಯಾಚರಣೆಗಳು ಮಗಿಯುವಾಗ ಬೆಳಗ್ಗೆ 7 ಸರಿದಿತ್ತು. 4ರಿಂದ 2; 2ರಿಂದ ಮತ್ತೆ 4!
ಆ ಕೊಠಡಿಯಲ್ಲಿದ್ದದ್ದು ಇಬ್ಬರು ಮಾತ್ರ. ಏನು ಮಾಡುವುದೆಂದು ತೋಚದ ಅವರು ಪಕ್ಕದ ಕೊಠಡಿಯವರಿಗೆಲ್ಲ ಮಾಹಿತಿ ನೀಡಿದರು. ಉರಗ ತಜ್ಞರನ್ನು ಸಂಪರ್ಕಿಸುವ ಕೆಲಸ ನಡೆಯಿತಾದರೂ ರಾತ್ರಿ ವೇಳೆಯಾದ ಕಾರಣ ಯಾರು ಕೂಡ ಕರೆ ಸ್ವೀಕರಿಸಲಿಲ್ಲ. ಈ ನಡುವೆ ಹೆಬ್ಟಾವು 4ನೇ ಮಹಡಿಯಿಂದ 2ನೇ ಮಹಡಿಯತ್ತ ಧಾವಿಸಿತು. ಹಾವನ್ನು ಕೆಳಕ್ಕೆ ಬೀಳಿಸುವ ಪ್ರಯತ್ನ ಮಾಡಲಾಯಿತಾದರೂ ಯಶಸ್ವಿಯಾಗಲಿಲ್ಲ. ಜನರು ಉಪಟಳ ಮಾಡುತ್ತಿದ್ದಾರೆ ಎಂದು ಅರಿತುಕೊಂಡೋ ಏನೋ ಹೆಬ್ಟಾವು ಮತ್ತೆ ಸಾಗಿದ್ದು ಅದೇ 4ನೇ ಮಹಡಿಗೆ!