Advertisement

ಚಾಲಕರಿಲ್ಲದೆ ಉಪಯೋಗವಿಲ್ಲದ ಆ್ಯಂಬುಲೆನ್ಸ್‌ 

08:04 PM Dec 16, 2021 | Team Udayavani |

ಪುಂಜಾಲಕಟ್ಟೆ: ಜನರ ಆರೋಗ್ಯ ರಕ್ಷಣೆಗಾಗಿ ಸರಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಯೋಜನಕ್ಕೆ ಬಾರದೆ ಉಳಿಯುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಒದಗಿಸಿದ ಆ್ಯಂಬುಲೆನ್ಸ್‌ ವಾಮದಪದವು ಸಮುದಾಯ ಆಸ್ಪತ್ರೆಯಲ್ಲಿ ಚಾಲಕರಿಲ್ಲದೆ ರೋಗಿಗಳ ಉಪಯೋಗಕ್ಕೆ ಲಭ್ಯವಾಗದೆ ಶೆಡ್‌ನ‌ಲ್ಲೇ ಉಳಿದಿದೆ.

Advertisement

ಬಂಟ್ವಾಳ ತಾಲೂಕಿನ ವಾಮದಪದವು ಸಮುದಾಯ ಆಸ್ಪತ್ರೆಗೆ ಕಳೆದ ವರ್ಷ  ಕೋವಿಡ್‌ ಸಂದರ್ಭದಲ್ಲಿ ಆ್ಯಂಬುಲೆನ್ಸ್‌ ಒದಗಿಸಲಾಗಿತ್ತು. ಎರಡು ವಾರಗಳಿಂದ ಇಬ್ಬರು ಚಾಲಕರ ಪೈಕಿ ಒಬ್ಬರು ಒಂದು ತಿಂಗಳು ರಜೆಯಲ್ಲಿ ತೆರಳಿದ್ದಾರೆ. ಇನ್ನೊಬ್ಬರು ಹಲವು ವರ್ಷಗಳಿಂದ ನಿಯೋಜನೆಯ ಮೇರೆಗೆ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದಾರೆ. ಇದ ರಿಂದಾಗಿ ಈ ಆ್ಯಂಬುಲೆನ್ಸ್‌ಗೆ ಚಾಲಕರಿಲ್ಲದೆ ಅಸ್ಪತ್ರೆಯಲ್ಲಿಯೇ ಬಾಕಿಯಾಗಿದೆ. ಪ್ರಾ. ಆರೋಗ್ಯ ಕೇಂದ್ರಕ್ಕೆಂದೇ ಆ್ಯಂಬುಲೆನ್ಸ್‌ ಇದ್ದರೂ ತುರ್ತು ಸಂದರ್ಭದಲ್ಲಿ  108 ಆ್ಯಂಬುಲೆನ್ಸ್‌ ಅನ್ನು ಅವಲಂಬಿಸುವ ಅನಿ ವಾರ್ಯತೆ ಸೃಷ್ಟಿಯಾಗಿದೆ.

ಲಕ್ಷ್ಮಣ ಗೌಡ ಪೂರ್ಣಕಾಲಿಕ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರೆ,  ಇನ್ನೋರ್ವ ಚಾಲಕ  ರಾಮಣ್ಣ ಗುತ್ತಿಗೆ ಅಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಹಲವು ವರ್ಷಗಳಿಂದ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಯೋಜನೆಯ ಮೇರೆಗೆ ಕೆಲಸ ಮಾಡುತ್ತಿದ್ದಾರೆ. ಇವರ ವೇತನ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ  ನಡೆಯುತ್ತಿರುವುದರಿಂದ ಅವರ ನಿಯೋಜನೆಯನ್ನು ರದ್ದುಗೊಳಿಸಿ ವಾಮದಪದವು ಸರಕಾರಿ ಆಸ್ಪತ್ರೆಗೆ ಮರು ನೇಮಕ ಮಾಡುವಂತೆ ಒತ್ತಾಯಿಸಿ ಹಲವು ಬಾರಿ ಪತ್ರದ ಮೂಲಕ ಮನವಿ ಮಾಡಿದರೂ ಮೇಲಧಿಕಾರಿಗಳಿಂದ ಯಾವುದೇ ಸ್ಪಂದನೆ ಬಂದಿಲ್ಲ. ಲಕ್ಷ್ಮಣ್‌ ಗೌಡ ರಜೆಯಲ್ಲಿ ತೆರಳಿದ ಬಳಿಕವೂ ಮತ್ತೂಮ್ಮೆ ಜಿಲ್ಲಾ ಆರೋಗ್ಯಾಧಿಕಾರಿಗೆ ಪತ್ರ ಬರೆದು ಪ್ರಸ್ತುತ ಶಿರಾಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಾಲಕರ ನಿಯೋಜನೆಯನ್ನು ರದ್ದುಗೊಳಿಸಿ ವಾಮದಪದವು ಆಸ್ಪತ್ರೆಗೆ ಮರು ನೇಮಕ ಮಾಡಿ ಆದೇಶಿಸುವಂತೆ ಕೋರಲಾಗಿತ್ತು. ಪ್ರತ್ಯುತ್ತರವಾಗಿ ವಾಮದಪದವು ಆಸ್ಪತ್ರೆಯ  ಜೀಪ್‌ ಚಾಲಕರನ್ನೇ ನಿಯೋಜನೆ ಮಾಡಿ  ಆದೇಶಿಸಲಾಗಿದೆ. ಜೀಪ್‌ ಚಾಲಕರು ಕ್ಯಾಂಪ್‌ ಮತ್ತಿತರ ಆಸ್ಪತ್ರೆಯ ಕೆಲಸಗಳಿಗೆ ಜೀಪ್‌ ಬೇಕಾಗಿರುವುದರಿಂದ ಆ್ಯಂಬುಲೆನ್ಸ್‌ ಚಾಲಕರಿಲ್ಲದೆ ಅನಾಥವಾಗಿದೆ.

ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸಾಗಿಸಲು 108 ಆ್ಯಂಬುಲೆನ್ಸ್‌ನ ಮೊರೆ ಹೋಗಬೇಕಾಗಿದೆ. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಪ್ರಸ್ತುತ ಶಿರಾಡಿ ಪ್ರಾ.ಆ. ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಆ್ಯಂಬುಲೆನ್ಸ್‌ ಚಾಲಕರ ನಿಯೋಜನೆಯನ್ನು ರದ್ದುಗೊಳಿಸಿ ಇಲ್ಲಿಗೆ ಮರುನೇಮಕ ಮಾಡುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ. -ಡಾ| ಉಮೇಶ್‌ ಅಡ್ಯಂತ್ತಾಯ,  ವೈದ್ಯಾಧಿಕಾರಿ, ವಾಮದಪದವು ಪ್ರಾಥಮಿಕ ಆರೋಗ್ಯ ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next