Advertisement
ರಾಜ್ಯ ಮಾತ್ರವಲ್ಲದೆ, ಮಹಾರಾಷ್ಟ್ರ, ತೆಲಂಗಾಣದಿಂದ ಸಹಸ್ರಾರು ಸಂಖ್ಯೆಯಲ್ಲಿ ಬಸವಾನುಯಾಯಿಗಳು ಭಾಗವಹಿಸಿದ್ದರು.ಕೂಡಲಸಂಗಮದ ಶ್ರೀ ಮಾತೆ ಮಹಾದೇವಿ, ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಭಾಲ್ಕಿಯ ಡಾ| ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪಥ ಸಂಚಲನ ನಡೆಸಲಾಯಿತು. ರ್ಯಾಲಿಗೂ ಮುನ್ನ ನೆಹರು ಕ್ರೀಡಾಂಗಣದಲ್ಲಿ ಬಹಿರಂಗ ಸಮಾವೇಶ ನಡೆಯಿತು. ನಾಡಿನ ಹಲವು ಮಠಾಧೀಶರು, ಸ್ವಾಮೀಜಿಗಳು ಮತ್ತು ಜಿಲ್ಲೆಯ ಶಾಸಕರು ಸಾಕ್ಷಿಯಾದರು.
Related Articles
ವೈಷ್ಣವರು. ಇವರಡೂ ಸೇರಿ ಒಂದು ಹಿಂದೂ ಆಗಿದೆ. ಶೈವದಲ್ಲಿ 7 ಪ್ರಭೇದಗಳಿದ್ದು, ಆ ಸಪ್ತಶೈವಗಳಲ್ಲಿ ವೀರಶೈವ ಒಂದು ಪಂಥ ಎಂದು ಸ್ಪಷ್ಟಪಡಿಸಲಾಗಿದೆ. ಕರ್ನಾಟಕದಲ್ಲಿ ಇರುವವರೆಲ್ಲ ಲಿಂಗಾಯತರೇ ಇದ್ದು, ಆ ಲಿಂಗಾಯತರೆ ವೀರಶೈವ ಮಹಾಸಭೆಯ
ಅಜ್ಞಾನಯುಕ್ತ ಗೊಂದಲದಿಂದ ತಮ್ಮನ್ನು ತಾವು ವೀರಶೈವ ಎಂದು ಹೇಳಿಕೊಳ್ಳುತ್ತಿರುವುದು ವಿಷಾದದ ಸಂಗತಿ. ಮಹಾರಾಷ್ಟ್ರದಲ್ಲಿ ವೀರಶೈವ ಮಹಾಸಭೆಯವರು ತಾವು ವೀರಶೈವರಲ್ಲ, ಅಖಂಡ ಲಿಂಗಾಯತರು ಎಂದು ಹೇಳಿ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ವೀರಶೈವ ಮಹಾಸಭೆಯವರು ಕೇಳುವುದಾದರೆ ವೀರಶೈವಕ್ಕೆ ಪ್ರತ್ಯೇಕ ಮಾನ್ಯತೆ
ಕೇಳಲಿ. ಲಿಂಗಾಯತದೊಂದಿಗೆ ವೀರಶೈವ ಪದ ಕೂಡಿಸಿ ಹೇಳಬಾರದು ಎಂದು ಆಗ್ರಹಿಸಲಾಗಿದೆ.
Advertisement
ಲಿಂಗಾಯತ ಜಾತಿ ಪತ್ರ ನೀಡಿ: ವೀರಶೈವ ಮಹಾಸಭಾದವರು ವೀರಶೈವ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ಕೇಂದ್ರದಿಂದ ತಿರಸ್ಕೃತಗೊಂಡಿದೆ. ವೀರಶೈವ ಪದವನ್ನು ಲಿಂಗಾಯತಕ್ಕೆ ಸಮಾನವಾಗಿ ಬಳಸುವುದರಿಂದ ಮಾನ್ಯತೆ ಸಿಗಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುವಾಗ ಕೇವಲ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕಮಾನ್ಯತೆ ನೀಡುವಂತೆ ಆಗ್ರಹಿಸಬೇಕು ಎಂದು ಕೋರಲಾಗಿದೆ. ಜೈನ, ಬೌದ್ಧ, ಸಿಖ್, ಇಸ್ಲಾಂ ಮತ್ತು ಕೈಸ್ತ ಧರ್ಮಗಳಂತೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ್ಯ ಧರ್ಮದ ಮಾನ್ಯತೆ ನೀಡಬೇಕು. ರಾಜ್ಯಾದ್ಯಂತ ಎಲ್ಲ ತಹಶೀಲ್ದಾರರು ಲಿಂಗಾಯತರಿಗೆ ವೀರಶೈವ- ಲಿಂಗಾಯತ ಎಂದು ಜಾತಿ ಪ್ರಮಾಣಪತ್ರ ನೀಡುವುದನ್ನು ನಿಲ್ಲಿಸಬೇಕು. ಹೈಕೋರ್ಟ್ ಈ ನಿಟ್ಟಿನಲ್ಲಿ ಆದೇಶ ನೀಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅಹ್ಮದಪುರದ ರಾಷ್ಟ್ರೀಯ ಸಂತ ಡಾ| ಶಿವಲಿಂಗ ಶಿವಾಚಾರ್ಯರು, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಅಕ್ಕ ಅನ್ನಪೂರ್ಣ ತಾಯಿ, ಅಕ್ಕ ಗಂಗಾಂಬಿಕೆ, ಶ್ರೀ ಚನ್ನಬಸವಾನಂದ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಕೊರಣೇಶ್ವರ ಸ್ವಾಮೀಜಿ, ಶ್ರೀ ಗುರುಬಸವ ದೇವರು, ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಅಭಿನವ ಷಣ್ಮುಖ ಸ್ವಾಮೀಜಿ, ಶ್ರೀ ರೇವಣಸಿದ್ದ ಸ್ವಾಮೀಜಿ, ಶ್ರೀ ಮಾತೆ ಸತ್ಯಾದೇವಿ, ಶ್ರೀ ಪ್ರಭುಲಿಂಗ ಸ್ವಾಮೀಜಿ, ಮಾತೆ ದಾನೇಶ್ವರಿ, ಶಾಸಕರಾದ ರಾಜಶೇಖರ ಪಾಟೀಲ, ಮಲ್ಲಿಕಾರ್ಜುನ ಖೂಬಾ, ಪ್ರಭು ಚವ್ಹಾಣ, ಅಶೋಕ ಖೇಣಿ, ರಹೀಮ್ ಖಾನ್, ವಿಜಯಸಿಂಗ್, ಮಾಜಿ ಶಾಸಕ
ಪ್ರಕಾಶ ಖಂಡ್ರೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ರ್ಯಾಲಿಯಲ್ಲಿ ಭಾಗವಹಿಸಿದ್ದರು. ವೀರಶೈವ-ಲಿಂಗಾಯತ ಒಂದೇ: ಕಾಶೀ ಜಗದ್ಗುರು
ಸೊಲ್ಲಾಪುರ: ವೀರಶೈವ-ಲಿಂಗಾಯತ ಒಂದೇ ಧರ್ಮ. ಇದನ್ನು ಕೆಲವರು ಬೇರೆ ಬೇರೆ ಎಂದು ಹೇಳುತ್ತಿದ್ದಾರೆ. ಇದರಿಂದ
ಸಮಾಜದಲ್ಲಿ ಗೊಂದಲ ನಿರ್ಮಾಣವಾಗುತ್ತಿದೆ. ಲಿಂಗಾಯತ ಸ್ವತಂತ್ರ ಧರ್ಮವೆಂದು ಹೇಳುತ್ತಿರುವುದು ತಪ್ಪು. ವೀರಶೈವ
ಧರ್ಮ ಸನಾತನ ವೈದಿಕ ಧರ್ಮವಾಗಿದ್ದು, ಇದರ ಸಂಸ್ಥಾಪಕ ಪಂಚಾಚಾರ್ಯರು ಎಂದು ವಾರಣಾಸಿ ಜಂಗಮವಾಡಿಯ
ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಚಿವ ಖಂಡ್ರೆ ಗೈರು: ಅಸಮಾಧಾನ
ಬೀದರ: ನಗರದ ನಡೆದ ಲಿಂಗಾಯತ ರ್ಯಾಲಿಯಲ್ಲಿ ಜಿಲ್ಲೆಯ ಬಹುತೇಕ ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ವೀರಶೈವ ಮಹಾಸಭೆ ಪ್ರಧಾನ ಕಾರ್ಯದರ್ಶಿ ಈಶ್ವರ
ಖಂಡ್ರೆ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಅಷ್ಟೇ ಅಲ್ಲ, ಮಹಾಸಭೆಯೊಂದಿಗೆ ಗುರುತಿಸಿಕೊಂಡಿರುವ ಜಿಲ್ಲೆಯ ಕೆಲ
ಮುಖಂಡರು ಗೈರಾಗಿದ್ದರು. ಖಂಡ್ರೆ ಅನುಪಸ್ಥಿತಿಗೆ ರ್ಯಾಲಿಯಲ್ಲಿ ಭಾಗವಹಿಸಿದ್ದ ಜನರಿಂದ ಅಸಮಾಧಾನವೂ ವ್ಯಕ್ತವಾಯಿತು. ಮಹಾಸಭೆಗೆ ಜೋತು ಬೀಳದೆ ರಾಜೀನಾಮ ಕೊಟ್ಟು, ಲಿಂಗಾಯತ ಧರ್ಮಕ್ಕೆ ಬೆಂಬಲಿಸಲಿ ಎಂಬ ಮಾತುಗಳು ಕೇಳಿಬಂದವು. ಬಸವ ನಾಮಸ್ಮರಣೆ, ಕರತಾಡನ ಹಣೆ ಮೇಲೆ ವಿಭೂತಿ, ಮೈಮೇಲೆ ಬಿಳಿ ವಸ್ತ್ರ, ಮೇಲೊಂದು ಸ್ಕಾರ್ಪ್ ಧರಿಸಿದ್ದ ಶರಣ-
ಶರಣೆಯರ ಕೈಯಲ್ಲಿ ಷಟಸ್ಥಲ ಧ್ವಜ ಮತ್ತು ಪ್ರತ್ಯೇಕ ಧರ್ಮ ಬೇಡಿಕೆ ನಾಮಫಲಕ ರಾರಾಜಿಸಿದರೆ ಬಾಯಿಯಲ್ಲಿ ಬಸವ ನಾಮ ಸ್ಮರಣೆ ಕರಾಡತನ. ಇದು ನಗರದಲ್ಲಿ ನಡೆದ ಲಿಂಗಾಯತ ರ್ಯಾಲಿ ವೇಳೆ ಕಂಡು ಬಂದ ದೃಶ್ಯ. ನಾಡಿನ ವಿವಿಧೆಡೆಯಿಂದ
ಆಗಮಿಸಿದ್ದ ಬಸವಾನುಯಾಯಿಗಳು ಜಾಥಾದಲ್ಲಿ ಹೆಜ್ಜೆ ಹಾಕಿದರು. ಒಂದಾದ ಮಠಾಧೀಶರು ಬಸವಣ್ಣನ ಹೆಸರಿನಲ್ಲಿ ಮಠಾ ಧೀಶರು ಬಸವ ದಳ, ಬಸವ ಕೇಂದ್ರ, ಭಾರತೀಯ ಬಸವ ಬಳಗ ಸೇರಿ ಹಲವು ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಕೆಲವು ವಿಚಾರಗಳಲ್ಲಿ ಸ್ವಾಮೀಜಿಗಳಲ್ಲೇ ಒಮ್ಮತ ಇಲ್ಲ. ತಮ್ಮದೇಯಾದ ಮಾರ್ಗದಲ್ಲಿ ಬಸವ ತತ್ವದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಲಿಂಗಾಯತಕ್ಕೆ ಧರ್ಮದ ಮಾನ್ಯತೆಗಾಗಿನ ಹೋರಾಟಕ್ಕಾಗಿ ಮಠಾಧಿಧೀಶರು ಎಲ್ಲವನ್ನು ಮರೆತು ಒಗ್ಗಟ್ಟಿನ ಬಲ ಪ್ರದರ್ಶಿಸಿರುವುದು ವಿಶೇಷ. ರ್ಯಾಲಿಯಲ್ಲಿ ಜನವೋ ಜನ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗೆ ಅಗ್ರಹಿಸಿ ನಡೆದ ಲಿಂಗಾಯತ ರ್ಯಾಲಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಬೀದರ ಜಿಲ್ಲೆ ಸೇರಿದಂತೆ ಕಲಬುರಗಿ,ಯಾದಗಿರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಮಾತ್ರವಲ್ಲದೇ ಮಹಾರಾಷ್ಟ್ರದ ಉದಗೀರ, ಲಾತೂರ, ಸೊಲ್ಲಾಪುರ, ಉಮರ್ಗಾ, ತೆಲಂಗಾಣದ ಹೈದ್ರಾಬಾದ, ಜಹೀರಾಬಾದ್ ಸೇರಿದಂತೆ ವಿವಿಧಡೆಯಿಂದ ವಾಹನ, ಬೈಕ್‌ಗಳಲ್ಲಿ ಆಗಮಿಸಿದ್ದರು. ಭಾರಿ ಮಳೆಗೆ ಅಸ್ತವ್ಯಸ್ತ: ಲಿಂಗಾಯತ ರ್ಯಾಲಿ ನೆಹರು ಕ್ರೀಡಾಂಗಣದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ
ಜಿಲ್ಲಾಧಿ ಕಾರಿ ಕಚೇರಿಗೆ ಆಗಮಿಸುತ್ತಿದ್ದಂತೆ ಭಾರಿ ಮಳೆ ಸುರಿದು ಅಸ್ತವ್ಯಸ್ತ ಆಯಿತು. ಆದಾಗ್ಯೂ ಹುಮ್ಮಸ್ಸಿನಲ್ಲಿದ್ದ ಜನರು ಮಳೆಯನ್ನು ಲೆಕ್ಕಿಸದೇ ರ್ಯಾಲಿಯಲ್ಲಿ ಹೆಜ್ಜೆ ಹಾಕಿದರು. ಮಳೆಯಲ್ಲೇ ಮಾತಾ ಮಹಾದೇವಿ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.