Advertisement

ಅನಾರೋಗ್ಯಕರ ಜೀವನಶೈಲಿ ಕ್ಷಯರೋಗಕ್ಕೆ ಕಾರಣ

07:02 PM Apr 01, 2021 | Nagendra Trasi |

ವಿಜಯಪುರ: ಗಾಳಿಯಿಂದ ಹರಡುವ ಸೋಂಕು ಗುಣಧರ್ಮ ಹೊಂದಿರುವ ಕ್ಷಯ ರೋಗ ಸೋಂಕಿತ ಕೆಮ್ಮಿದಾಗ, ಸೀನಿದಾಗ, ಉಗುಳಿದಾಗ ಹೊರಬರುವ ದ್ರವ
ತುಂತುರು ಉಸಿರಿನ ಮೂಲಕ ಇತರರಿಗೆ ಹರಡುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಐ.ಎಸ್‌. ಧಾರವಾಡಕರ ಹೇಳಿದರು.

Advertisement

ಬುಧವಾರ ಜಿಲ್ಲೆಯ ತಿಕೋಟಾ ತಾಲೂಕಿನದ ಟಕ್ಕಳಕಿ ಗ್ರಾಪಂ ಆವರಣದಲ್ಲಿ ಜರುಗಿದ ತಾಲೂಕು ಮಟ್ಟದ ಕ್ಷಯ ರೋಗ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅನಾರೋಗ್ಯಕರ ಜೀವನಶೈಲಿಯೇ ಕ್ಷಯರೋಗಕ್ಕೆ ಕಾರಣವಾಗಿದ್ದು, ರೋಗಿಗಳು ತಕ್ಷಣ ಚಿಕಿತ್ಸೆ ಪಡೆದು, ಔಷಧ ಸೇವಿಸಿದರೆ ರೋಗ ನಿಗ್ರಹ ಸಾಧ್ಯ ಎಂದರು.

ಬಡತನ, ಅಪೌಷ್ಟಿಕತೆ, ಕಾಯಿಲೆ ಬಗ್ಗೆ ಅಜ್ಞಾನ, ಪರಿಸರ ಮಾಲಿನ್ಯ, ವಿವೇಚನೆ ರಹಿತವಾಗಿ ಎಲ್ಲೆಂದರಲ್ಲಿ ಉಗುಳುವ, ಸೀನುವ, ಕೆಮ್ಮುವ ಅಭ್ಯಾಸ ಇರುವವರು, ಕ್ಷಯ ರೋಗ ಇದ್ದರೂ ಒಪ್ಪಿಕೊಳ್ಳದೇ ಜೀವನಶೈಲಿ, ಕೈಗಾರೀಕರಣ, ಗಣಿಗಾರಿಕೆ, ಬೀಡಿ, ಸಿಗರೇಟ್‌ ಸೇವನೆಯಂಥ ದುಶ್ಚಟಗಳು ಕ್ಷಯರೋಗಕ್ಕೆ ಪ್ರಮುಖ ಕಾರಣ ಎಂದು ವಿವರಿಸಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ| ಕವಿತಾ ಮಾತನಾಡಿ, ಕ್ಷಯರೋಗ ಮುಕ್ತ ವಿಜಯಪುರ ಜಿಲ್ಲೆಯಲ್ಲಿ ಟಿಬಿ ರೋಗ ಸೋಲುತ್ತಿದೆ ದೇಶ ಗೆಲ್ಲುತ್ತಿದೆ ಎಂಬ ಬಲವಾದ ಘೋಷದೊಂದಿಗೆ ಎಲ್ಲರೂ ರೋಗ ನಿಗ್ರಹಕ್ಕೆ ಶ್ರಮಿಸಬೇಕು. ಕ್ಷಯರೋಗ ಮನುಕುಲವನ್ನು 4000 ವರ್ಷಗಳ ಪ್ರಾಚೀನತೆ ಹೊಂದಿದ್ದು ಈ ರೋಗ ಸಾಂಕ್ರಾಮಿಕವಾಗಿದೆ. ಆದರೆ ಮುನ್ನೆಚ್ಚರಿಕೆ ಕ್ರಮಗಳಿಂದ ರೋಗದ ಸೋಂಕು ಹರಡುವಿಕೆ ತಡೆಯಲು ಸಾಧ್ಯವಿದೆ ಎಂದರು.

ನೂರ್‌ ಅಹಮದ್‌ ಭಾಗವಾನ ಮಾತನಾಡಿ, ಜರ್ಮನ ರಾಬರ್ಟ್‌ ಕಾಕ್‌ ಎಂಬುವರು ಕ್ಷಯ ರೋಗವನ್ನು ಪತ್ತೆ ಹಚ್ಚಿದ್ದು ನಮ್ಮಲ್ಲೂ ಋಗ್ವೇದ ಕಾಲದಿಂದಲೂ
ಭಾರತವನ್ನು ಪೀಡಿಸುತ್ತಿರುವ ಕ್ಷಯ ರೋಗಕ್ಕೆ ಯಾವುದೇ ಔಷಧ ಇರಲಿಲ್ಲ. ಮೊದಲು ಬೆಂಬಲ ಆರೈಕೆ, ಉತ್ಕೃಷ್ಟ ಆಹಾರ, ಉತ್ತಮ ವಾತಾವರಣ, ಒಳ್ಳೆ ಗಾಳಿ, ಬೆಳಕು ಇವುಗಳಿಂದ ಮಾತ್ರ ಚಿಕಿತ್ಸೆ ಮಾಡಲಾಗುತ್ತಿತ್ತು. ಈಗ ಕ್ಷಯ ರೋಗಕ್ಕೆ ಔಷಧಿಯನ್ನು ಕಂಡು ಹಿಡಿದಿದ್ದು ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಮದುಕರ್‌ ಜಾಧವ, ರೇಖಾ ಪವಾರ, ಸಲೀಮಾ ಮೋಮಿನ್‌ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next