Advertisement

Udupi ಹಣ ಬಳಕೆಯ ವಿಧಗಳ ತಿಳುವಳಿಕೆ ಅತ್ಯಗತ್ಯ

11:04 PM Aug 18, 2023 | Team Udayavani |

ಉಡುಪಿ: ಸಮಾಜದ ಪ್ರತಿಯೊಬ್ಬರೂ ಹಣಕಾಸಿನ ವ್ಯವಹಾರದ ಬಗ್ಗೆ ಅಥವಾ ಹಣ ಬಳಕೆಯ ವಿಧಗಳ ಬಗ್ಗೆ ತಿಳುವಳಿಕೆ ಹೊಂದುವುದು ಅತಿ ಅಗತ್ಯ ಎಂದು ಆರ್‌ಬಿಐ ಬೆಂಗಳೂರು ಪ್ರಾದೇಶಿಕ ಕಚೇರಿಯ ಮುಖ್ಯ ಮಹಾ ಪ್ರಬಂಧಕ ಪಿ.ಎನ್‌. ರಘನಾಥ ಹೇಳಿದರು.

Advertisement

ಆರ್‌ಬಿಐ ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗ, ಲೀಡ್‌ ಡಿಸ್ಟ್ರಿಕ್ಟ್ ಆಫೀಸ್‌, ಉಡುಪಿಯ ಕೆನರಾ ಬ್ಯಾಂಕ್‌ ಜಂಟಿಯಾಗಿ ಆಯೋಜಿಸಿದ ಕ್ಷೇತ್ರ ಮಟ್ಟದ ಆರ್ಥಿಕ ಸಾಕ್ಷರತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರ್‌ಬಿಐ ಪ್ರಾದೇಶಿಕ ಕಚೇರಿಯ ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗದ ಮಹಾ ಪ್ರಬಂಧಕಿ ಸುನಂದಾ ಬಾತ್ರಾ ಉದ್ಘಾಟಿಸಿ, ಜನ ಸಾಮಾನ್ಯರು, ಸ್ವ ಸಹಾಯ ಸಂಘದ ಸದಸ್ಯರು ಹಣಕಾಸಿನ ವ್ಯವಹಾರದಲ್ಲಿ ಸಾಕ್ಷರತೆ ಪಡೆದುಕೊಳ್ಳಬೇಕು. ಕೆವೈಸಿ ನೀಡುವಲ್ಲಿ ಅಥವಾ ಸೇವೆಯಲ್ಲಿ ತೊಂದರೆಯಾದಾಗ ತತ್‌ಕ್ಷಣವೇ ಬ್ಯಾಂಕ್‌ನ ಗಮನಕ್ಕೆ ತಂದರೆ ಸಮಸ್ಯೆ ಬಗೆಹರಿಸಲು ಅನುಕೂಲವಾಗಲಿದೆ. ಎಲ್ಲರೂ ಆರ್ಥಿಕ ವ್ಯವಹಾರದ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಮಣಿಪಾಲ ಕೆನರಾ ಬ್ಯಾಂಕಿನ ಮಹಾ ಪ್ರಬಂಧಕ ಎಂ.ಜಿ. ಪಂಡಿತ್‌ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ವಿವರ ಪಡೆದು, ಇತರರಿಗೆ ತಿಳಿಸಬೇಕು. ಸಣ್ಣ ಉದ್ಯಮ ಆರಂಭಿಸಲು ಸಹ ಹಣ ವಿನಿಯೋಗ ಮಾಡಬಹುದು ಎಂದು ಹೇಳಿದರು.

ನರ್ಬಾಡ್‌ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಸಂಗೀತಾ ಖರ್ತಾ, ಜಿ.ಪಂ. ಎನ್‌ಆರ್‌ಎಲ್‌ಎಂ ಯೋಜನಾ ನಿರ್ದೇಶಕ ನವೀನ ಕುಮಾರ್‌ಎಚ್‌.ಡಿ., ಎಲ್‌ಆರ್‌ಎಲ್‌ಎಂ ಜಿಲ್ಲಾ ಸಂಯೋಜಕಿ ನವ್ಯಾ, ಆರ್‌ಬಿಐ ಬೆಂಗಳೂರಿನ ಮ್ಯಾನೇಜರ್‌ ಅಬ್ದುಲ್‌ ರಜಾಕ್‌ ಎನ್‌., ಪ್ರಶಾಂತ ಸಿ.ಬಿ., ಮಾಲತಿ ಎಸ್‌. ನಾಯ್ಕ, ವೀಣಾ ಶಾನುಭಾಗ್‌ ವಿವಿಧ ವಿಷಯದ ಬಗ್ಗೆ ಮಾಹಿತಿ ಹಂಚಿಕೊಂಡರು.

ವಿವಿಧ ಬ್ಯಾಂಕಿನ ಅಧಿಕಾರಿಗಳ ಜತೆಗೆ ಸಂವಾದ ನಡೆಯಿತು. ಆರ್ಥಿಕ ಸಾಕ್ಷರತೆಯ ಸಂಯೋಜಕಿ ವೀರಾ, ತಾಲೂಕಿನ ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.

Advertisement

ಆರ್‌ಬಿಐ ವ್ಯವಸ್ಥಾಪಕರಾದ ತನು ನಂಜಪ್ಪ ಸ್ವಾಗತಿಸಿದರು. ಉಡುಪಿ ಲೀಡ್‌ ಬ್ಯಾಂಕಿನ ಮ್ಯಾನೇಜರ್‌ ಪಿ.ಎಂ.ಪಿಂಜಾರ್‌ ವಂದಿಸಿದರು. ರುಡ್‌ಸೆಟ್‌ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್‌, ನವ್ಯಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next