Advertisement
ಮನೆಯಲ್ಲಿ ಬಡತನವಿದ್ದರೂ ಪ್ರೀತಿಗೆ ಬಡತನವಿಲ್ಲ ಎಂಬಂತೆ ಮಾನಪ್ಪ ಬಡಿಗೇರ ಹಾಗೂ ಪತ್ನಿ ಸರೋಜಿನಿ ಮಗ ಬಸವರಾಜನೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಆದರೆ ಕೊರೊನಾ ಯಾವ ಕಡೆಯಿಂದ ತಗುಲಿತೋ ಗೊತ್ತಿಲ್ಲ. ಕೇವಲ 20 ದಿನದಲ್ಲಿ ಇಬ್ಬರನ್ನೂ ಬಲಿ ಪಡೆದು ಕುಟುಂಬವನ್ನೇ ಹಿಂಡಿ ಹಿಪ್ಪೆ ಮಾಡಿ ಪುಟ್ಟ ಬಾಲಕನನ್ನು ಅನಾಥವಾಗಿಸಿದೆ.
Related Articles
Advertisement
ದತ್ತು ಪಡೆಯಲಿ: ಕೋವಿಡ್‌ನಿಂದ ಅನಾಥರಾದ ಮಕ್ಕಳಿಗಾಗಿ ರಾಜ್ಯ ಸರ್ಕಾರ ಬಾಲ ಸೇವಾ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಅನಾಥ ಮಕ್ಕಳ ಆರೈಕೆ, ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತುಕೊಳ್ಳುವ ಘೋಷಣೆ ಮಾಡಿದೆ. ಸಂಬಂಧಿಕರ ಮನೆಯಲ್ಲಿ ಮಗು ಆಸರೆ ಪಡೆಯುತ್ತಿದ್ದರೆ ಅಂತ ಮಕ್ಕಳಿಗೆಮಾಸಿಕ 3,500 ರೂ. ನೀಡುವುದರ ಜತೆಗೆದತ್ತು ಪಡೆಯುವುದಾಗಿ ಘೋಷಿಸಿದಂತೆ ಈಪುಟ್ಟ ಬಾಲಕನ ಆಸರೆಗೆ ಸರ್ಕಾರ ಮುಂದೆ ಬರಬೇಕಿದೆ.
ಸಹಾಯ ಮಾಡಿ : ಕೋವಿಡ್ ಕ್ರೌರ್ಯಕ್ಕೆ ಅನಾಥವಾಗಿರುವ ಬಾಲಕ ಬಸವರಾಜ ಮಾನಪ್ಪ ಬಡಿಗೇರ ಪೋಷಣೆಗಾಗಿ ಬಾಲಕ ಬಸವರಾಜನ ಎಸ್‌ಬಿಐ ಬ್ಯಾಂಕ್ ಖಾತೆ ನಂ. 38727014246(ಐಎಫ್‌ಎಸ್‌ಸಿ ಕೋಡ್ ಎಸ್‌ಬಿಐ ನಂ.40313, ಮೋ. 9902606415 ಉಳ್ಳವರು ಸಹಾಯ ಮಾಡಬಹುದು.
ಕೋವಿಡ್‌ನಿಂದ ಅನಾಥವಾದ ಮಕ್ಕಳ ಬಗ್ಗೆ ಸರ್ವೇ ಕಾರ್ಯ ನಡೆಯುತ್ತಿದೆ.ಅವಳಿ ತಾಲೂಕಿನಲ್ಲಿ ಎಲ್ಲಯೂ ಕೂಡಾ ಇಂತಹ ಘಟನೆ ನಡೆದಿಲ್ಲ. ಮೈಲೇಶ್ವರ ಗ್ರಾಮದಲ್ಲಿ ಕೋವಿಡ್‌ನಿಂದ ತಂದೆ ತಾಯಿ ಕಳೆದುಕೊಂಡು 8 ವರ್ಷದ ಬಾಲಕ ಅನಾಥವಾಗಿದ್ದ ಬಗ್ಗೆ ಮಾಹಿತಿಯಿಲ್ಲ. ಇದರಬಗ್ಗೆ ಪರಿಶೀಲಿಸಿ ಅನಾಥವಾದ ಬಾಲಕಬಸವರಾಜನಿಗೆ ಆಸರೆಯಾಗುವ ಕಾರ್ಯ ಮಾಡುತ್ತೇನೆ.– ಸಾವಿತ್ರಿ ಗುಗ್ಗರಿ, ಸಿಡಿಪಿಒ, ತಾಳಿಕೋಟೆ
–ಜಿ.ಟಿ. ಘೋರ್ಪಡೆ