Advertisement

ಆಯ್ಕೆಗೆ ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ

12:30 AM Feb 10, 2019 | Team Udayavani |

ಮಂಗಳೂರು/ಉಡುಪಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ  ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದೆ. ಈ ಸಂಬಂಧ ಎಐಸಿಸಿ ವೀಕ್ಷಕರು ಪಕ್ಷದ ಪ್ರಮುಖರು, ವಿವಿಧ ಘಟಕಗಳ ಅಧ್ಯಕ್ಷರಿಂದ ಶನಿವಾರ ಮಂಗಳೂರಿನಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಅಭಿಪ್ರಾಯ ಸಂಗ್ರಹಿಸಿದರು. 

Advertisement

ಕರ್ನಾಟಕದ ಉಸ್ತುವಾರಿಗಳಾಗಿರುವ ಎಐಸಿಸಿ ಕಾರ್ಯದರ್ಶಿಗಳಾದ ಪಿ.ಸಿ. ವಿಷ್ಣುನಾಥ್‌, ಮಾಣಿಕ್ಯಂ ಠಾಕೂರ್‌, ಮಧು ಯಕ್ಷಿ ಗೌಡ ಅವರು ವೀಕ್ಷಕರಾಗಿ ಆಗಮಿಸಿದ್ದರು. 

ದಕ್ಷಿಣ ಕನ್ನಡ: 10ಕ್ಕೂ ಅಧಿಕ ಆಕಾಂಕ್ಷಿಗಳು
ದ.ಕ. ಕ್ಷೇತ್ರಕ್ಕೆ  ಅಭ್ಯರ್ಥಿಗಳ ಆಯ್ಕೆಗೆ  ಸಂಬಂಧಪಟ್ಟು  92 ಮಂದಿ ಅಭಿಪ್ರಾಯಗಳನ್ನು ನೀಡಿದರು. ಪ್ರತಿಯೊಬ್ಬರನ್ನೂ ಕರೆದು ಅಭಿಪ್ರಾಯ ಪಡೆದರು. ಕೊಠಡಿಗೆ ವೀಕ್ಷಕರ ಹೊರತಾಗಿ ಬೇರಾರಿಗೂ ಪ್ರವೇಶವಿರಲಿಲ್ಲ. ಇದೇ ವೇಳೆ ದ.ಕ.ದಿಂದ ಅಭ್ಯರ್ಥಿತನ  ಬಯಸಿ 10ಕ್ಕೂ  ಹೆಚ್ಚು ಮಂದಿ ಕೋರಿಕೆ ಸಲ್ಲಿಸಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜ, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಜಿಲ್ಲಾ ಯುವಕಾಂಗ್ರೆಸ್‌ ಅಧ್ಯಕ್ಷ  ಮಿಥುನ್‌ ರೈ, ಆರ್‌ಬಿಐ ಮಾಜಿ ನಿರ್ದೇಶಕ ನವೀನ್‌ ಭಂಡಾರಿ, ಸುಳ್ಯದ ಮುಖಂಡ ಧನಂಜಯ ಅಡ³ಂಗಾಯ, ಕೆಪಿಸಿಸಿ ಕಾರ್ಯದರ್ಶಿ ಮಮತಾ ಗಟ್ಟಿ ಕೋರಿಕೆ ಸಲ್ಲಿಸಿದ್ದಾಗಿ ಮೂಲಗಳು ಹೇಳಿವೆ. 

ಉಡುಪಿಯಿಂದ ಇಬ್ಬರು
ಉಡುಪಿಚಿಕ್ಕಮಗಳೂರು  ಕ್ಷೇತ್ರದಿಂದ ಮಾಜಿ ಸಚಿವರಾದ ವಿನಯಕುಮಾರ ಸೊರಕೆ ಮತ್ತು ಪ್ರಮೋದ್‌ ಮಧ್ವರಾಜ್‌ ಅಭ್ಯರ್ಥಿಗಳಾಗಲು ಉತ್ಸುಕರಾಗಿದ್ದಾರೆ. ಸೊರಕೆಯವರು ದ.ಕ. ಸ್ಥಾನದ ಮೇಲೂ ಕಣ್ಣಿಟ್ಟಿದ್ದು, ಅವರಿಗೆ ಅಲ್ಲಿ ಸಿಕ್ಕರೆ, ಉಡುಪಿಯಲ್ಲಿ ಮಧ್ವರಾಜ್‌ ಪರವಾಗಿ ಒಲವಿದೆ. ಇನ್ನು, ಅನಿವಾಸಿ ಭಾರತೀಯ ಕನ್ನಡಿಗರ ವೇದಿಕೆ ಮಾಜಿ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣ, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ| ವಿಜಯಕುಮಾರ್‌ ಅವರ ಹೆಸರೂ ಕೇಳಿ ಬಂದಿತು ಎಂದು ಮೂಲಗಳು ಹೇಳಿವೆ. ಮುನಿಯಾಲು ಉದಯಕುಮಾರ ಶೆಟ್ಟಿ, ಅಮೃತ್‌ ಶೆಣೈ, ಪ್ರಖ್ಯಾತ ಶೆಟ್ಟಿಯವರೂ ಆಕಾಂಕ್ಷಿಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next