Advertisement

ಓಲಾ ಕ್ಯಾಬ್‌ ಡ್ರೈವರ್‌ ಈಗ ಸೇನಾಧಿಕಾರಿ: ಇದು ಓಂ ಪೈಠಣೆ ಸಾಧನೆ

11:02 AM Mar 08, 2018 | Team Udayavani |

ಪುಣೆ: ಜೀವನ ನಿರ್ವಹಣೆಗಾಗಿ ಓಲಾ ಕ್ಯಾಬ್‌ ಡ್ರೈವರ್‌ ಆಗಿ ದುಡಿಯುತ್ತಿದ್ದ ಇಲ್ಲಿನ ಓಂ ಪೈಠಣೆ ಎಂಬ ತರುಣ ಇದೇ ಮಾರ್ಚ್‌ 10ರಂದು ಚೆನ್ನೈನಲ್ಲಿನ ಸೇನಾಧಿಕಾರಿಗಳ ತರಬೇತಿ ಕೇಂದ್ರದಲ್ಲಿ ತನ್ನ ತರಬೇತಿಯನ್ನು ಮುಗಿಸಿಕೊಂಡು ಭಾರತೀಯ ಸೇನೆಗೆ ಓರ್ವ ಅಧಿಕಾರಿಯಾಗಿ ಸೇರಲಿದ್ದಾರೆ. ಪೈಠಣೆ ಅವರ ಈ ಸಾಧನೆಯ ಬಗ್ಗೆ ಅವರ ಕುಟುಂಬದವರಿಗೆ ತುಂಬ ಹೆಮ್ಮೆ ಎನಿಸಿದೆ. 

Advertisement

ಮಗನ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ, ಸ್ವತಃ ತಾನೂ ಓರ್ವ ಕ್ಯಾಬ್‌ ಡ್ರೈವರ್‌ ಆಗಿ ತನ್ನ ಕುಟುಂಬವನ್ನು ನಡೆಸಿದ್ದ, ಪೈಠಣೆ ಅವರ ತಂದೆ ಉತ್ತಮ್‌ ಪೈಠಣೆ ಹೀಗೆ ಹೇಳುತ್ತಾರೆ: ಮಗನಿಗೆ ಭಾರತೀಯ ಸೇನೆ ಸೇರಬೇಕೆಂಬ ಆಸೆ ಚಿಕ್ಕಂದಿನಿಂದಲೂ ಇತ್ತು. ಈಗ ಆತನ ಕನಸು ನನಸಾಗುತ್ತಿದೆ; ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ಅವನಿಗೆ ಪ್ರಾಪ್ತವಾಗಿದೆ.

ಓಂ ಪೈಠಣೆ ಸಹೋದರ ಆದಿನಾಥ್‌ ತನ್ನ ಅಣ್ಣನ ಸಾಧನೆಯ ಬಗ್ಗೆ ಹೆಮ್ಮೆಯಿಂದ ಹೀಗೆ ಹೇಳುತ್ತಾರೆ: ಆತ ಕಲಿಕೆ ಮತ್ತು ಸಂಪಾದನೆಯನ್ನು ಜತೆಜತೆಗೆ ನಡೆಸುತ್ತಿದ್ದ. ಮನೆಗೆ ಆರ್ಥಿಕವಾಗಿ ನೆರವಾಗುವುದಕ್ಕಾಗಿ ಆತ ದುಡಿಯುವುದು ಅನಿವಾರ್ಯವಾಗಿತ್ತು. ನಮ್ಮ ತಂದೆ 25 ವರ್ಷ ಡ್ರೈವರ್‌ ಆಗಿ ದುಡಿದವರು. ಅವರಿಗೆ ತಮ್ಮ ಮಕ್ಕಳು ಯಾರೂ ಈ ವೃತ್ತಿಗೆ ಇಳಿಯುವುದು ಬೇಡ ಎಂಬ ಅಭಿಪ್ರಾಯವಿತ್ತು. ತಾನು ಡ್ರೈವಿಂಗ್‌ ಮಾಡುತ್ತಿದ್ದುದನ್ನು ಆತ ತಂದೆಯಿಂದ ಮುಚ್ಚಿಟ್ಟಿದ್ದ. ಆದರೂ ಅಣ್ಣ ಡ್ರೈವಿಂಗ್‌ ಮಾಡುತ್ತಲೇ ಕಲಿತು ಸೇನೆಯನ್ನು ಸೇರಿಕೊಂಡ. 

ಓಂ ಪೈಠಣೆ ಸೇನೆಯನ್ನು ಸೇರಿಕೊಂಡ ಸುದ್ದಿ ಆತನ ತಂದೆ ಉತ್ತಮ್‌, ತಾಯಿ ಸುಶೀಲಾ ಮತ್ತು ಸಹೋದರಿ ಮೋನಿಕಾಗೆ ಗೊತ್ತಾದದ್ದೇ ಮೊನ್ನೆ ಸೋಮವಾರ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾದ ಸಂದರ್ಶನದಿಂದ. ಓಂ ಸಾಧನೆ ಮನೆಯವರಿಗೆ ಅಪರಿಮಿತ ಹರ್ಷ ತಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next