Advertisement

Halebeedu: ಜೈನರ ಗುತ್ತಿಯತ್ತ ಹರಿದು ಬಂದ ಭಕ್ತಸಾಗರ

01:03 AM Dec 02, 2024 | Team Udayavani |

ಹಳೇಬೀಡು: ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಕ ಮಹೊತ್ಸವದ 3ನೇ ದಿನವಾದ ರವಿವಾರ ಮುಂಜಾನೆ ಜನ್ಮಕಲ್ಯಾಣಕ ನಡೆಯಿತು. ಜೈನರ ಗುತ್ತಿಯತ್ತ ಹರಿದು ಬಂದ ಭಕ್ತಸಾಗರ ಹರಿದುಬರುತ್ತಿದೆ.

Advertisement

ಆಚಾರ್ಯ ವಿಶುದ್ಧ ಸಾಗರ ಮುನಿ ಮುಹಾ ಮಹಾರಾಜರು, ಆಚಾರ್ಯ ಚಂದ್ರಪ್ರಭ ಮುನಿ ಮಹಾರಾಜರು ಹಾಗೂ ವೀರ ಸಾಗರ ಮುನಿ ಮಹಾರಾಜರ ಸಾನಿಧ್ಯದಲ್ಲಿ ಧಾರ್ಮಿಕ ವಿಧಿ ನೆರವೇರಿದವು.

ಮೂರ್ತಿ ಪ್ರತಿಷ್ಠಾಪನೆ ಪರಿಪೂರ್ಣವಾಗಲು ಪಂಚಕಲ್ಯಾಣಕ ಅತಿಮುಖ್ಯ. ಜಿನ ಮಂದಿರ ಹಾಗೂ ಮೂರ್ತಿ ಪ್ರತಿಷ್ಠಾಪನೆ ಪರಿಪೂರ್ಣವಾಗಲು ಪಂಚಕಲ್ಯಾಣಕ ಮಹೋತ್ಸವ ಅತಿ ಮುಖ್ಯ. ಜೈನರಗುತ್ತಿ ಪಂಚಕಲ್ಯಾಣಕ ಮಹೋತ್ಸವ ಅತ್ಯಗತ್ಯ ಎಂದು ಪಂಚಕಲ್ಯಾಣಕ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕುಣಿಗಲ್‌ ಬ್ರಹ್ಮದೇವಯ್ಯ ಹೇಳಿದರು.

ವರ್ಷದಿಂದ ಸಿದ್ಧತೆ
ಜೈನರ ಪವಿತ್ರ ಆಚರಣೆಗಳಲ್ಲಿ ಪಂಚಕಲ್ಯಾಣಕ ಪ್ರಮುಖ ವಿಧಾನವಾಗಿದೆ. ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಕ ಮಹೋತ್ಸವದಲ್ಲಿ 21 ದಿಗಂಬರ ಜೈನ ಮುನಿಗಳು ಸಾನಿಧ್ಯ ವಹಿಸಿದ್ದಾರೆ. ವೀರ ಸಾಗರ ಮುನಿ ಮಹಾರಾಜರ ಮಾರ್ಗದರ್ಶನದಲ್ಲಿ ಪಂšಕಲ್ಯಾಣಕ ಯಶಸ್ವಿಯಾಗಿ ಸಾಗುತ್ತಿದೆ ಎಂದರು.

ಕಾರ್ಯದರ್ಶಿ ನೇಮಿರಾಜ ಅರಿಗ, ಪಾಣಿ ಮಂಗಳೂರು ಧರಣೇಂದ್ರ, ಪ್ರಮೋದ್‌, ಜಯೇಂದ್ರ ಕುಮಾರ್‌, ನಾಗೇಂದ್ರ ಪ್ರಸಾದ್‌, ಧವನ್‌, ಪದ್ಮಿನಿ ಪದ್ಮರಾಜ್‌, ರೇಖಾ ಧವನ್‌, ವಾಣಿ ರತ್ನಾಕರ, ಶೀಲಾ ನಾಗರಾಜ್‌ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next