ನಾನು 2 ಬಾರಿ “ಮಿಸ್ ದಾವಣಗೆರೆ’ಯಾಗಿದ್ದೆ!
ಚಿಕ್ಕ ವಯಸ್ಸಿನಲ್ಲಿದ್ದಾಗಿನಿಂದಲೂ ಎಲ್ಲಾ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಪಿಯುಸಿಯಲ್ಲಿದ್ದಾಗ “ಮಿಸ್ ದಾವಣಗೆರೆ’ಯಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದೆ. ಪದವಿಯಲ್ಲಿದ್ದಾಗಲೂ ಮತ್ತೂಮ್ಮೆ ಸ್ಪಧಿ ìಸುವ ಅವಕಾಶ ಸಿಕ್ಕಿತ್ತು. ಆಗಲೂ “ಮಿಸ್ ದಾವಣಗೆರೆ’ಯಾಗಿ ಆಯ್ಕೆಯಾದೆ. ಬೆಂಗಳೂರು ವಿವಿಯಲ್ಲಿ ಎಂಎಸ್‌ಸಿ ಓದುವಾಗ “ಮಿಸ್ ಕ್ಯಾಂಪಸ್’ ಸ್ಪರ್ಧೆ ಗೆದ್ದಿದ್ದೆ. ಬ್ಯೂಟಿ ಪೇಜೆಂಟ್‌ಗಳನ್ನು ಗೆದ್ದಾಗ ಸಾಮಾನ್ಯವಾಗಿ ಬಣ್ಣದ ಲೋಕದ ಕಡೆಯೇ ಸೆಳೆತ ಆರಂಭವಾಗುತ್ತದೆ. ಆದರೆ, ನನ್ನ ಗಮನವೆಲ್ಲಾ ಐಎಎಸ್ ಪರೀಕ್ಷೆ ಕಡೆಗೇ ಇದ್ದಿದ್ದರಿಂದ ನಾನದನ್ನು ಮುಂದುವರಿಸಲಿಲ್ಲ.
Advertisement
ಲೇಡಿ ಬಾಸ್‌ನ ಒಪ್ಪೋದಿಲ್ಲ!ಪೊಲೀಸ್ ಇಲಾಖೆ ಎಂದರೇನೇ ಪುರುಷ ಪ್ರಧಾನ ಇಲಾಖೆ. ಅದೂ ಅಲ್ಲದೇ, ಇದು ಶ್ರೇಣಿಕೃತ ವ್ಯವಸ್ಥೆ. ಐಪಿಎಸ್ ಮುಗಿಸಿ ಬಂದವರು ಸೀದಾ ಎಸ್‌ಪಿ ಹುದ್ದೆಗೇರುತ್ತಾರೆ. ನಮ್ಮ ಕೆಳಗಡೆ ಮತ್ತಷ್ಟು ಹುದ್ದೆಗಳಿರುತ್ತವೆ. ಆ ಹುದ್ದೆಗಳಲ್ಲಿರುವವರು ಮಹಿಳೆಯೊಬ್ಬಳು ನಮ್ಮ ಮೇಲಿನ ಅ ಧಿಕಾರಿ ಎಂದು ಒಪ್ಪಿಕೊಳ್ಳಲೂ ಹಿಂದೇಟು ಹಾಕುತ್ತಾರೆ. ನಮ್ಮ ಮೇಲೆ ಹಿಡಿತ ಸಾ ಧಿಸಲು ಪ್ರಯತ್ನಿಸುತ್ತಾರೆ. ನಮ್ಮ ಮಾತನ್ನು ಕೇಳಿದರೆ ತಮ್ಮ ಘನತೆ ಕಡಿಮೆಯಾಗುತ್ತದೆ ಎನ್ನುವ ರೀತಿ ವರ್ತಿಸುತ್ತಾರೆ. ಆದರೆ, ಈಗೀಗ ಈ ಪರಿಸ್ಥಿತಿ ಸ್ವಲ್ಪ ಬದಲಾಗಿದೆ.
ಸಿನಿಮಾದಲ್ಲಿ ತೋರಿಸುವಂತೆ ಕರ್ನಾಟಕ ಪೊಲೀಸ್ ಪರಿಸ್ಥಿತಿ ಇಲ್ಲ. ಕಾನೂನು ಪ್ರಕಾರ ನಡೆಯುತ್ತಿದ್ದೇವೆ ಅಂದ್ರೆ ಯಾವ ರಾಜಕಾರಣಿಯೂ ನಮಗೆ ತೊಂದರೆ ನೀಡುವುದಿಲ್ಲ. ರಾಜ್ಯದಲ್ಲಿ ಒಬ್ಬ ಐಪಿಎಸ್ ಅ ಧಿಕಾರಿ ಮೇಲೆ ಒಂದು ಪಕ್ಷದ ಅಥವಾ ಒಬ್ಬ ರಾಜಕಾರಣಿಯ ಹಿಡಿತ ಇಲ್ಲ. ಆದರೆ ರಾಜಕಾರಣಿಗಳು ನಮ್ಮನ್ನು ಪರೀಕ್ಷಿಸುತ್ತಾರೆ. ನಾವು ಯಾವ ಆಮಿಷಗಳಿಗೂ ಬಗ್ಗಲ್ಲ. ಕರ್ತವ್ಯದ ಜೊತೆ ರಾಜಿಯಾಗುವುದಿಲ್ಲ ಎಂದು ಒಮ್ಮೆ ತಿಳಿದರೆ ಅವರು ನಮ್ಮಿಂದ ದೂರಾನೇ ಇರ್ತಾರೆ. ಕೆಲವೊಮ್ಮೆ ನಮ್ಮ ಇಂಥ ವರ್ತನೆಗಳಿಂದ ನಮಗೆ ಒಳ್ಳೆಯ ಪೋಸ್ಟಿಂಗ್ ಸಿಗದೇ ಇರಬಹುದು. ಆದರೆ, ನಮ್ಮ ಕರ್ತವ್ಯ ನಿಭಾಯಿಸಲು ಯಾವ ತೊಡಕೂ ಆಗುವುದಿಲ್ಲ. ಮುಖ ನೋಡದೇ ಮದ್ವೆಯಾದೆ!
ನನ್ನ ಕ್ಷೇತ್ರದಲ್ಲಿರುವವರನ್ನೇ ಮದುವೆಯಾಗಬೇಕೆಂದು ಕನಸು ಕಂಡಿದ್ದೆ. ನನ್ನ ಪೋಷಕರಿಗೆ ಅಂಥವರು ಯಾರೂ ಗೊತ್ತಿರಲಿಲ್ಲ. ಒರಿಸ್ಸಾದಲ್ಲಿ ಐಎಎಸ್ ಅ ಧಿಕಾರಿಯೊಬ್ಬರಿದ್ದಾರೆ. ನನಗಿಂತ 2 ವರ್ಷ ಸೀನಿಯರ್ ಅಂತ ಗೊತ್ತಾಯಿತು. ನನ್ನ ಪೋಷಕರು ಅವರಿಗೆ ಪತ್ರ ಬರೆದರು. ಅವರಿದ್ದದ್ದು ನಕ್ಸಲ್ ಪೀಡಿತ ಪ್ರದೇಶ, ಅವರಿಗೆ ನನ್ನ ಪೋಷಕರ ಪತ್ರ ತಲುಪಿದ್ದೇ 1 ತಿಂಗಳ ಬಳಿಕ, ನಂತರ ಅವರು ನನ್ನನ್ನು ಹೈದರಾಬಾದಿನಲ್ಲಿ ಭೇಟಿಯಾಗಿ ನಂತರ ಒಪ್ಪಿ$ಕೊಂಡರು. ನಾನು ಅವರನ್ನು ನೋಡದೆಯೇ ಒಪ್ಪಿಕೊಂಡಿದ್ದೆ. ನೋಡುವ ಅಗತ್ಯವೇ ಇರಲಿಲ್ಲ. ಅವರು ಐಎಎಸ್‌ನಲ್ಲಿ 8ನೇ ರ್‍ಯಾಂಕ್ ಪಡೆದಿದ್ದರು. ಅದರಲ್ಲೂ ಐಐಟಿ- ಮುಂಬೈನಲ್ಲಿ ಓದಿದ್ದವರು. ನಮ್ಮಿಬ್ಬರ ಹಿನ್ನೆಲೆಗಳೂ ಒಂದೇ ರೀತಿ ಇದ್ದವು. ಮೊದಲಾಗಿ ಕರ್ನಾಟಕಕ್ಕೆ ಬಂದು ನೆಲೆಸಲು ಅವರು ತಯಾರಿದ್ದರು.
Related Articles
2002ರಲ್ಲಿ ನಾನು ಗದಗ್‌ನಲ್ಲಿ ಎಸ್‌ಪಿ ಆಗಿದ್ದ ವೇಳೆ ನರಗುಂದ ತಾಲೂಕಿನ ಶಾಸಕ ಬಿ.ಆರ್. ಯಾವಗಲ್ ಅವರನ್ನು ಬಂ ಧಿಸಬೇಕಾಯಿತು. ಯಾವಗಲ್ ಅವರಿಗೆ ಕಾಂಗ್ರೆಸ್‌ನಿಂದ ಚುನಾವಣೆ ಟಿಕೆಟ್ ಸಿಕ್ಕಿರಲಿಲ್ಲ. ಅದಕ್ಕಾಗಿ ಅವರು ನರಗುಂದದ ಬಸ್ ನಿಲ್ದಾಣದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಭಾಷಣದಿಂದ ಉದ್ರಿಕ್ತರಾದ ಗುಂಪೊಂದು ಗಲಭೆ ಎಬ್ಬಿಸಿತ್ತು. ನಮ್ಮ ಸಿಬ್ಬಂದಿ ಗಲಭೆಯಲ್ಲಿ ಪಾಲ್ಗೊಂಡಿದ್ದ ಕೆಲ ಪುಂಡರನ್ನು ಬಂ ಧಿಸಿದರು. ಆದರೆ, ಇಷ್ಟೆಲ್ಲಾ ಅವಾಂತರಕ್ಕೆ ಕಾರಣರಾದ ಮಾಜಿ ಶಾಸಕರು ಹತ್ತಿರವೂ ಸುಳಿಯಲಿಲ್ಲ. ಆದರೆ, ನಾನು ಯಾವಗಲ್‌ರನ್ನು ಠಾಣೆಗೆ ಕರೆತರಲು ಡಿಎಸ್‌ಪಿಗೆ ಹೇಳಿದೆ. ಅವರಿಗೆ ಯಾವಗಲ್ ಜೊತೆ ಉತ್ತಮ ಒಡನಾಟವಿತ್ತು. ಮೇಡಂ, ನನಗೆ ಯಾವಗಲ್ ಸಿಗಲೇ ಇಲ್ಲ ಎಂದು ಡಿಎಸ್‌ಪಿ ಸುಳ್ಳು ಹೇಳಿದರು. ನಾನೂ ಪಟ್ಟು ಬಿಡಲಿಲ್ಲ. ಕಡೆಗೂ ನನ್ನ ಒತ್ತಡಕ್ಕೆ ಮಣಿದು ಯಾವಗಲ್‌ರನ್ನು ಠಾಣೆಗೆ ಕರೆಸಿದರು. ಕರೆಸುವ ಮುನ್ನ ನನ್ನ ಅಡಿ ಕೆಲಸ ಮಾಡುವ ಡಿಸಿಪಿ, ಅವರ ಮೇಲೆ ಕ್ರಮ ಕೈಗೊಳ್ಳದಂತೆ ನನಗೇ ತಾಕೀತು ಮಾಡಿದ್ದರು! ಯಾವಗಲ್ ಕಚೇರಿಗೆ ಬರುತ್ತಿದ್ದಂತೆ ನಾನು ಅವರನ್ನು ಬಂ ಧಿಸಿದೆ. ಅವರಿಗೆ ಸಹಾಯ ಮಾಡಲು ಮುಂದಾಗಿದ್ದ ಡಿಸಿಪಿ ಮೇಲೂ ದೂರು ನೀಡಿ ಅವರು ಅಮಾನತ್ತಾಗುವಂತೆ ಮಾಡಿದ್ದೆ. ಈ ರೀತಿ ರಾಜಕಾರಣಿಗಳ ವಿರುದ್ಧ ಕ್ರಮ ಜರುಗಿಸಿದ ಘಟನೆಗಳು ಸಾಕಷ್ಟಿವೆ.
Advertisement
– ಹೆಸರು ಕೆಡಿಸಿಕೊಳ್ಳದಿದ್ದರೆ, ಹೋರಾಟಕ್ಕೆ ಬಲ! ನಮ್ಮ ರೆಪ್ಯುಟೇಷನ್ ಸರಿಯಾಗಿ ಇಟ್ಟುಕೊಂಡರೆ ಅದೇ ನಮಗೆ ಹಲವಾರು ಕಷ್ಟದ ಸಂದರ್ಭದಲ್ಲಿ ಸಹಾಯಕ್ಕೆ ಬರುತ್ತದೆ. ನಾವು ಒಮ್ಮೆ ದಕ್ಷರು, ಪ್ರಾಮಾಣಿಕರು, ಕಾನೂನಿನ ಚೌಕಟ್ಟು ಮೀರದೇ ಕೆಲಸ ಮಾಡುವವರು ಎಂದು ತೋರಿಸಿಕೊಂಡರೆ ಯಾರೂ ನಮ್ಮಿಂದ ಅನಗತ್ಯ, ಕಾನೂನು ಬಾಹಿರವಾದ ಸಹಾಯಗಳನ್ನು ನಿರೀಕ್ಷಿಸುವುದಿಲ್ಲ. ಎಷ್ಟೋ ಸಂದರ್ಭದಲ್ಲಿ ದಕ್ಷ ಅ ಧಿಕಾರಿಗಳೂ ಯಾವುದಾದರೊಂದು ಕಡೆ ರಾಜಿಯಾಗಿಬಿಡುತ್ತಾರೆ. ರಾಜಕಾರಣಿಗಳು ಹೇಳಿದ ಕಾನೂನು ಮೀರಿದ ಕೆಲಸವನ್ನು ಮಾಡಿರುತ್ತಾರೆ. ಅಂಥವರು ರಾಜಕಾರಣಿಗಳಿಂದ ಸ್ವಲ್ಪ$ಮಟ್ಟಿನ ಒತ್ತಡ ಅನುಭವಿಸುತ್ತಾರೆ. – ರಾಜಿಯಾಗದಿದ್ದರೆ ಪದೇಪದೇ ಟ್ರಾನ್ಸ್‌ಫರ್!
16 ವರ್ಷಗಳ ಸೇವೆಯಲ್ಲಿ ನಾನು 30ಕ್ಕೂ ಹೆಚ್ಚು ಬಾರಿ ವರ್ಗವಾಗಿದ್ದೇನೆ. ಎಸ್‌ಪಿ ಮಟ್ಟದಲ್ಲಿರೋ ಎಲ್ಲಾ ನಾನ್ ಎಕ್ಸಿಕ್ಯುಟೀವ್ ಪೋಸ್ಟ್‌ಗಳಲ್ಲೂ ನಾನು ಕಾರ್ಯನಿರ್ವಹಿಸಿದ್ದೇನೆ. ನಾಲ್ಕು ಜಿಲ್ಲೆಗಳಲ್ಲಿ ನಾನು ಎಸ್‌ಪಿಯಾಗಿ ಅ ಧಿಕಾರ ನಿರ್ವಹಿಸಿದ್ದೇನೆ. ಅದೂ ಎಲ್ಲಾ ಉತ್ತರ ಕರ್ನಾಟಕದ ರಾಜ್ಯಗಳಲ್ಲೇ. ವರ್ಗಾವಣೆಯಾದಾಗಲೆಲ್ಲಾ ಕಾರ್ಯನಿರ್ವಾಹಕವಲ್ಲದ ಹುದ್ದೆಗಳೇ ಸಿಕ್ಕಿವೆ. ಆದರೂ ನಾನು ತಲೆಕೆಡಿಸಿಕೊಂಡಿಲ್ಲ. ನನಗೆ ಒಳ್ಳೆಯ ಕಡೆ ಪೋಸ್ಟಿಂಗ್ ನೀಡಿ ಎಂದು ಯಾರಲ್ಲೂ ಕೇಳಿಲ್ಲ. ನಾನು ಸ್ವಭಾವತಃ ಯಾರ ಮುಂದೆಯೂ ಬೆನ್ನು ಬಾಗಿಸುವ ಮಹಿಳೆಯಲ್ಲ. ಇವತ್ತಿಗೂ ನಾನು ಹಾಗೆಯೇ ಇದ್ದೇನೆ. – ಮಹಿಳಾ ಅ ಧಿಕಾರಿಗಳೇ ಹೆಚ್ಚು ಒಳ್ಳೇವ್ರು!
ನಾನು 2000ನೇ ಇಸವಿಯಲ್ಲಿ ಐಪಿಎಸ್ ಸೇರಿದ್ದಾಗಿನ ಪರಿಸ್ಥಿತಿಗಿಂತ ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಹಲವು ಮಹಿಳೆಯರು ಎಸ್‌ಪಿ, ಡಿಎಸ್‌ಪಿ ಆಗುತ್ತಿದ್ದಾರೆ. ಮಹಿಳೆಯರು ಒಬ್ಬ ಪುರುಷ ಅ ಧಿಕಾರಿಯಷ್ಟೇ ಅಥವಾ ಇನ್ನೂ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಪುರುಷರಿಗಿಂತಲೂ ಹೆಚ್ಚು ಪ್ರಾಮಾಣಿಕರಾಗಿದ್ದಾರೆ. ಮಹಿಳೆಯರು ರಾಜಕಾರಣಿ ಅಥವಾ ಉದ್ಯಮಿಗಳ ಜೊತೆ ಹೆಚ್ಚು ಸಂಪರ್ಕ ಸಾ ಧಿಸುವುದಿಲ್ಲ. ಅವರ ಜೊತೆ ಊಟ, ಪಾನಗೋಷ್ಠಿಗಳಲ್ಲಿ ಭಾಗವಹಿಸುವುದಿಲ್ಲ. ಹೀಗಾಗಿ ಅವರ ಮುಲಾಜಿಗೆ ಬೀಳುವ ಅಗತ್ಯಗಳು ಹೆಚ್ಚಾಗಿ ಮಹಿಳಾ ಅ ಧಿಕಾರಿಗಳಿಗೆ ಬರುವುದು ಬಹಳ ಕಡಿಮೆ. ಒಂದು ದೃಷ್ಟಿಯಲ್ಲಿ ಇದು ಒಳ್ಳೆಯದೇ. – ಫಿಟೆ°ಸ್‌ಗಿಂತ ಮನಸ್ಸು ಫಿಟ್ ಆಗಿರ್ಬೇಕು…
ಒಬ್ಬ ಐಪಿಎಸ್ ಅ ಧಿಕಾರಿಗೆ ಫಿಟ್‌ನೆಸ್ ಬಹಳ ಮುಖ್ಯ. ಅದಕ್ಕಿಂತ ಹೆಚ್ಚಾಗಿ ಮಾನಸಿಕ ದೃಢತೆ ಮುಖ್ಯ. ಸಿನಿಮಾಗಳಲ್ಲಿ ತೋರಿಸುವಂತೆ ಅಧಿಕಾರಿಯಾದವರು ಸದಾ ಕೈಯಲ್ಲಿ ಗನ್ ಹಿಡಿದು ಕೈದಿಗಳನ್ನು ಅಟ್ಟಿಸಿಕೊಂಡು ಹೋಗುತ್ತಿರುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ತೆಗೆದುಕೊಳ್ಳಬೇಕಿರುವ ಕ್ರಮಗಳು, ಅಪರಾಧ ತಡೆಗೆ ಮಾಡಬೇಕಿರುವ ಕೆಲಸಗಳು. ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೇಕಿರುವ ಧೈರ್ಯ ಮುಖ್ಯವಾಗುತ್ತವೆ. – ಮಗಳನ್ನು ಹಳ್ಳಿ ಶಾಲೆಗೆ ಸೇರಿಸಿದೆ…
ಯಾದಗಿರಿಯನ್ನು ಜಿಲ್ಲೆಯೆಂದು ಘೋಷಿಸುತ್ತಿದ್ದಂತೆಯೇ ನನ್ನನ್ನು ಅಲ್ಲಿಗೆ ಎಸ್‌ಪಿಯನ್ನಾಗಿ ನೇಮಕ ಮಾಡಿದರು. ಒಂದು ತಾಲೂಕಾಗಲೂ ಲಾಯಕ್ಕಿಲ್ಲದಂಥ ಪ್ರದೇಶವದು. ಅಲ್ಲಿಗೆ ಹೋದಾಗ ಎಸ್‌ಪಿ ಕಚೇರಿ ಕೂಡ ಇರಲಿಲ್ಲ. ನಾನು ಉಳಿದುಕೊಳ್ಳಲು ವಸತಿ ಗೃಹದ ವ್ಯವಸ್ಥೆ ಇರಲಿಲ್ಲ. ಬಾಡಿಗೆ ಮನೆ ತೆಗೆದುಕೊಳ್ಳೋಣವೆಂದರೆ, ಸರಿಯಾದ ಬಾಡಿಗೆ ಮನೆ ಕೂಡ ದೊರೆಯುತ್ತಿರಲಿಲ್ಲ, ಅದೇ ವೇಳೆ ನನ್ನ ಪತಿ ಯಾದಗಿರಿಯಿಂದ ಸ್ವಲ್ಪ ದೂರದಲ್ಲಿದ್ದ ಭೀಮರಾಯನ ಗುಡಿ ಎಂಬ ಹಳ್ಳಿಯಲ್ಲಿ ನಡೆಯುತ್ತಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಗೆ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕರಾಗಿದ್ದರು. ಭೀಮರಾಯನ ಗುಡಿಯಲ್ಲಿ ಅವರಿಗೆ ವಸತಿ ಗೃಹ ನೀಡಲಾಗಿತ್ತು. ನಾನೂ ನನ್ನ ಮಕ್ಕಳೂ 3 ವರ್ಷ ಅಲ್ಲೇ ಇದ್ದೆವು. ನನ್ನ ಮಗಳನ್ನು ಅದೇ ಹಳ್ಳಿಯ ಶಾಲೆಗೆ ಸೇರಿಸಿದೆ. ನೆಲದ ಮೇಲೆ ಕೂತು ಪಾಠ ಕೇಳುವ ಪರಿಸ್ಥಿತಿ ಇತ್ತು ಅಲ್ಲಿ. ಶಾಲೆಗೆ ಸರಿಯಾದ ಕಟ್ಟಡವೂ ಇರಲಿಲ್ಲ. – ಪತಿ ಮತ್ತು ಮಕ್ಕಳು ಕನ್ನಡದಲ್ಲೇ ಮಾತಾಡ್ತಾರೆ…
ನನ್ನ ಯಶಸ್ಸಿನ ಹಿಂದೆ ನನ್ನ ಪತಿಯ ಪಾತ್ರ ಮಹತ್ವದ್ದು. ಅವರು ರಾತ್ರಿ 9.30ಕ್ಕೂ ಮೊದಲು ಮನೆಗೆ ಬಂದಿದ್ದೇ ಇಲ್ಲ. ಅಷ್ಟೊಂದು ವರ್ಕೋಹಾಲಿಕ್. ಜಿಲ್ಲಾ ಧಿಕಾರಿಯಾಗಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಆದರೆ, ಅವರು ಪ್ರಚಾರ ಬಯಸುವಂಥವರಲ್ಲ. ಸದ್ಯ ಕರ್ನಾಟಕ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಆಯುಕ್ತರಾಗಿದ್ದಾರೆ. ತಮ್ಮ ಸೇವಾವ ಧಿಯನ್ನು ಕರ್ನಾಟಕದಲ್ಲೇ ಕಳೆದಿದ್ದಾರೆ. ಅವರು ಉತ್ತರ ಭಾರತದವರಾದರೂ ಮನೆಯಲ್ಲಿ ಕನ್ನಡದಲ್ಲೇ ಮಾತಾಡುತ್ತಾರೆ. ನನ್ನ ಮಕ್ಕಳೂ ಕನ್ನಡದಲ್ಲೇ ಮಾತಾಡುತ್ತಾರೆ. ನಮ್ಮಿಬ್ಬರ ಸಂಸ್ಕೃತಿ ಸಂಪ್ರದಾಯ ಎಲ್ಲವೂ ಬೇರೆಯೇ. ಆದರೆ, ಇಬ್ಬರೂ ಸಂಪ್ರದಾಯಗಳಿಗೆ ಅಂಟಿಕೊಂಡವರಲ್ಲ. ಹೀಗಾಗಿ ಸಂಸ್ಕೃತಿ, ಸಂಪ್ರದಾಯದ ಕಾರಣಕ್ಕೆ ನಮ್ಮಿಬ್ಬರ ವೈವಾಹಿಕ ಜೀವನದಲ್ಲಿ ಯಾವ ತೊಂದರೆಯೂ ಆಗಿಲ್ಲ. – ಚೇತನ ಜೆ.ಕೆ.