Advertisement

ಜಾನಪದ ಬದುಕಿನ ಅವಿಭಾಜ್ಯ ಅಂಗ

10:38 AM Sep 30, 2018 | |

ಕಲಬುರಗಿ: ಜಾನಪದ ಭಾರತದ ಶ್ರೀಮಂತ ಸಂಸ್ಕೃತಿ. ನಮ್ಮ ಹಿರಿಯರು ಕಷ್ಟಪಟ್ಟು ಈ ಸಂಸ್ಕೃತಿ ಉಳಿಸಿಕೊಂಡು ಬಂದಿದ್ದಾರೆ. ಹೀಗಾಗಿ ಜಾನಪದ ಕಲೆಗಳು ಬದುಕಿನ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಯುವ ಜನತೆ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂದು ಶರಣಬಸವ ವಿಶ್ವವಿದ್ಯಾಲಯದ ಡೀನ್‌ ಡಾ| ಲಿಂಗರಾಜ ಶಾಸ್ತ್ರೀ ಹೇಳಿದರು.

Advertisement

ಸರಕಾರಿ ಮಹಾವಿದ್ಯಾಲಯದಲ್ಲಿ ಕನ್ನಡ ಜಾನಪದ ಪರಿಷತ್‌ ಬೆಂಗಳೂರು, ಜಿಲ್ಲಾ ಘಟಕ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಹಮ್ಮಿಕೊಂಡಿದ್ದ “ವಿಶ್ವ ಜಾನಪದ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 
ಸಮಾಜಮುಖೀ ಚಿಂತನೆಗಳನ್ನು ಮೂಡಿಸುವಲ್ಲೂ ಜಾನಪದ ಕಲೆಗಳು ಪ್ರಮುಖ ಪಾತ್ರವಹಿಸುತ್ತವೆ. ಯುವ ಜನತೆ ಜಾಗತೀಕರಣ, ಆಧುನೀಕರಣದ ಹುಚ್ಚು ಆಚರಣೆ ಬಿಟ್ಟು ಸ್ವಂತ ಜಾನಪದ ಕತೆಗಳನ್ನು ರಚಿಸಿ ಹಾಡುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಸುಲಫಲ ಮಠದ ಡಾ| ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಜಾನಪದ ಅಂದರೆ ಅದೊಂದು ಮಾನವೀಯ
ಮೌಲ್ಯ, ಕಾಯಕದಿಂದ ಕೈಲಾಸ ಪಡೆಯುವ ವಿಧಾನ, ಇದೊಂದು ಜನಾಂಗದ ಸಂಸ್ಕೃತಿ. ಜನಪದ ಎಂದರೆ ತಾಯಿ ಹೃದಯ, ತಾಯಿ ಹೃದಯದಿಂದ ಬರುವ ನುಡಿಗಳೇ ಜಾನಪದವಾಗಿದೆ ಎಂದರು. 

ಶಿವಶಂಕರ ಬಿ. ತಂಡದವರು ಜಾನಪದ, ಮಹಾದೇವಿ ಮುರಡಿ ಮೂಲ ಜಾನಪದ ಹಾಡಿದರು. ತುಕಾರಾಮ ಎಸ್‌. ಸಿಂಗೆ, ಕೇಂಬ್ರಿಜ್‌ ಶಾಲೆ ಸಂಗೀತ ಶಿಕ್ಷಕರು ತತ್ವಪದ ಹಾಡಿದರು. ನಂತರ ಸರಕಾರಿ ಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಜಾನಪದ ನೃತ್ಯ ಮತ್ತು ಗಾಯನ ಮಾಡಿದರು. ಸರಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ರಾಚಪ್ಪ ನಂದಗಿ ಅಧ್ಯಕ್ಷತೆ ವಹಿಸಿದ್ದರು. ಕ.ಜಾ.ಪ ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಚನ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಶಿವಶಾಂತ ರೆಡ್ಡಿ, ಡಾ| ದೀಪಕಕುಮಾರ ಸುಕೆ, ಜಿಲ್ಲಾ ಅಂಕಿತ ಅಧಿಕಾರಿಗಳು ಇದ್ದರು.

ಬಿ. ಶಿವಶಂಕರ ಸ್ವಾಗತಿಸಿದರು, ಡಾ| ಕೆ. ಗಿರಿಮಲ್ಲ ನಿರೂಪಿಸಿದರು, ಸರಕಾರಿ ಮಹಾವಿದ್ಯಾಲಯದ ಮಕ್ಕಳು ಪ್ರಾರ್ಥನಾ ಗೀತೆ ಹಾಡಿದರು, ಉಪನ್ಯಾಸಕ ನಾಗರಾಜ ಕುಲಕರ್ಣಿ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next