Advertisement

ವಿಮಾ ಯೋಜನೆಯಿಂದ ಕಷ್ಟ ದಿಂದ ಪಾರಾಗಲು ಅವಕಾಶ: ಮಹೇಶ್‌

09:22 PM Jan 01, 2022 | Girisha |

ಸಾಗರ: ಮ್ಯಾಮ್ಕೋಸ್‌ ಷೇರುದಾರರು ಸಂಸ್ಥೆಯ ವಿಮಾ ಯೋಜನೆಯಲ್ಲಿ ಒಳಗೊಳ್ಳುವ ಮೂಲಕ ಅಗತ್ಯ ಸಂದರ್ಭದಲ್ಲಿ ವಿಮಾ ಹಣ ಪಡೆಯುವ ಮೂಲಕ ಕಷ್ಟದಿಂದ ಪಾರಾಗಲು ಅವಕಾಶವಿದೆ ಎಂದು ಮ್ಯಾಮ್ಕೋಸ್‌ ಉಪಾಧ್ಯಕ್ಷ ಎಚ್‌.ಎಸ್‌. ಮಹೇಶ್‌ ಹುಲ್ಕಳಿ ಹೇಳಿದರು. ಇಲ್ಲಿನ ಮ್ಯಾಮ್ಕೋಸ್‌ ಸಭಾಂಗಣದಲ್ಲಿ ಮ್ಯಾಮ್ಕೋಸ್‌ ವತಿಯಿಂದ ಷೇರುದಾರರಿಗೆ ಆರೋಗ್ಯ ವಿಮಾ ಯೋಜನೆಯಡಿ ಫಲಾನುಭವಿಗಳಿಗೆ ಪರಿಹಾರ ಚೆಕ್‌ ವಿತರಿಸಿ ಅವರು ಮಾತನಾಡಿದರು.

Advertisement

ಮ್ಯಾಮ್ಕೋಸ್‌ ನಲ್ಲಿ 27 ಸಾವಿರಕ್ಕೂ ಹೆಚ್ಚು ಷೇರುದಾರರಿದ್ದು, ವಿಮಾ ಯೋಜನೆಯಲ್ಲಿ ಪಾಲ್ಗೊಂಡವರ ಸಂಖ್ಯೆ 4,530 ಮಾತ್ರ ಇದೆ. ಕೇವಲ 7200 ರೂ. ವಿಮಾ ಮೊತ್ತವನ್ನು ಪಾವತಿ ಮಾಡಿದರೆ ನಾಲ್ಕು ಲಕ್ಷದವರೆಗೆ ಆರೋಗ್ಯ ವಿಮೆ ಪಡೆಯಲು ಸಾಧ್ಯವಿದೆ. ಷೇರುದಾರರು ವಿಮಾ ಯೋಜನೆ ವ್ಯಾಪ್ತಿಗೆ ಬರುವ ಮೂಲಕ ತುರ್ತು ಸಂದರ್ಭದಲ್ಲಿ ಆರೋಗ್ಯ ವಿಮೆ ಪಡೆಯಬೇಕು. ಇದರಲ್ಲಿ ಈಗ ಕುಟುಂಬಸ್ಥರೆಲ್ಲರ ಹೆಸರು ಸಹ ಸೇರಿಸಲು ಅವಕಾಶವಿದೆ ಎಂದು ಹೇಳಿದರು. ಗುಂಪು ವಿಮಾ ಯೋಜನೆಯಡಿ ಕಳೆದ ವರ್ಷ 1.33 ಕೋಟಿ ರೂ. ಸೌಲಭ್ಯ ನೀಡಲಾಗಿದೆ.

ಗುಂಪು ವಿಮಾ ಯೋಜನೆಯಡಿ ಕುಟುಂಬಸ್ಥರೆಲ್ಲರೂ ಸೇರಬಹುದು. ಜೊತೆಗೆ 80 ವರ್ಷ ಮೇಲ್ಪಟ್ಟ ವ್ಯಕ್ತಿಗೂ ವಿಮೆ ಸಿಗುತ್ತದೆ. ಗುಂಪು ವಿಮಾ ಯೋಜನೆಯಲ್ಲಿ ಸಂಸ್ಥೆಯ 22 ಸಾವಿರ ಷೇರುದಾರರು ಪಾಲ್ಗೊಂಡಿದ್ದಾರೆ. ಮ್ಯಾಮ್ಕೋಸ್‌ ಷೇರುದಾರರ ಹಿತ ಕಾಯುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಬೆಳೆಗಾರರು ಮ್ಯಾಮ್ಕೋಸ್‌ಗೆ ಅಡಕೆ ಮಾರಾಟ ಮಾಡುವ ಮೂಲಕ ಮ್ಯಾಮೊಸ್‌ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಮ್ಯಾಮ್ಕೋಸ್‌ ನಿರ್ದೇಶಕರಾದ ತಿಮ್ಮಪ್ಪ ಶ್ರೀಧರಪುರ, ಬಿ.ಜಿ. ದಿನೇಶ್‌ ಬರದವಳ್ಳಿ, ಕೀರ್ತಿರಾಜ್‌ ಕಾನಳ್ಳಿ, ವಿಜಯಲಕ್ಷಿ ¾ರಾಮಪ್ಪ, ರತ್ನಾಕರ್‌, ವಿಮಾ ಸಂಸ್ಥೆಯ ಅಭಿವೃದ್ಧಿ ಅ ಧಿಕಾರಿ ನಾಗರಾಜ್‌, ಮ್ಯಾಮೊRàಸ್‌ ಸ್ಥಳೀಯ ಘಟಕದ ವ್ಯವಸ್ಥಾಪಕ ಚನ್ನಕೇಶವ ಸಿ.ಸಿ. ಇನ್ನಿತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next